ಉಡುಪಿಯಲ್ಲಿ ಪಾಸಿಟಿವಿಟಿ ದರ ಇಳಿಕೆ, ಬಂದ್ ಆಗಿದ್ದ ಶಾಲಾ-ಕಾಲೇಜು ಬಾಗಿಲು ಓಪನ್

ರಾಜ್ಯಾದ್ಯಂತ ಶಾಲಾರಂಭದ ಸಂಭ್ರಮ ಮನೆಮಾಡಿದ್ದರೆ ಉಡುಪಿ‌ ಜಿಲ್ಲೆಯ ಮಕ್ಕಳಿಗೆ ಆ ಭಾಗ್ಯವೇ ಇರಲಿಲ್ಲ. ಇದೀಗ ಉಡುಪಿ ಜಿಲ್ಲೆಯ ಮಕ್ಕಳಿಗೂ ಶಾಲೆ ಬಾಗಿಲು ತೆರೆಯಲಿದೆ.

First Published Aug 30, 2021, 6:10 PM IST | Last Updated Aug 30, 2021, 6:16 PM IST

ಉಡುಪಿ, (ಆ.30): ರಾಜ್ಯಾದ್ಯಂತ ಶಾಲಾರಂಭದ ಸಂಭ್ರಮ ಮನೆಮಾಡಿದ್ದರೆ ಉಡುಪಿ‌ ಜಿಲ್ಲೆಯ ಮಕ್ಕಳಿಗೆ ಆ ಭಾಗ್ಯವೇ ಇರಲಿಲ್ಲ. ಇದೀಗ ಉಡುಪಿ ಜಿಲ್ಲೆಯ ಮಕ್ಕಳಿಗೂ ಶಾಲೆ ಬಾಗಿಲು ತೆರೆಯಲಿದೆ.

ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭಕ್ಕೆ ಸಿದ್ಧತೆ: ಸಚಿವ ನಾಗೇಶ್‌

ಹೌದು...ಕೊರೋನಾ ಪಾಸಿಟಿವಿಟಿ ದರ ಕಡಿಮೆಯಾಗಿದ್ದರಿಂದ ಸೆಪ್ಟೆಂಬರ್ 1ರಿಂದ 9-12ರ ವರೆಗೆ ಶಾಲೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಮೊದಲು ಕೊರೋನಾ ಪಾಸಿಟಿವಿಟಿ ಶೇ.2ರ ಮೇಲಿತ್ತು. ಆ ಕಾರಣಕ್ಕೆ ಶಾಲಾ-ಕಾಲೇಜು ಆರಂಭಿಸಲು ಅನುಮತಿ ಇರಲಿಲ್ಲ. ಇದೀಗ ಪಾಸಿಟಿವಿಟಿ ದರ ಶೇ 1.4ಕ್ಕೆ ಇಳಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ (ಸೆ.01) ಉಡುಪಿ ಜಿಲ್ಲೆಯಲ್ಲೂ ಶಾಲಾ-ಕಾಲೇಜು ಪ್ರಾರಂಭವಾಗಲಿದೆ. 

Video Top Stories