BIG3: 8 ತಿಂಗಳಿಂದ ವೇತನವಿಲ್ಲದೇ ವಾಟರ್ ಮ್ಯಾನ್‌ಗಳ ಪರದಾಟ: ಹೈಕೋರ್ಟ್ ಆದೇಶಕ್ಕೂ ಕ್ಯಾರೆ ಅಂತಿಲ್ಲ ಅಧಿಕಾರಿಗಳು

ಕಳೆದ 7 ತಿಂಗಳಿಂದ ವೇತನವನ್ನ ನೀಡಿಲ್ಲ, ನಮಗೆ ವೇತನ ನೀಡಬೇಕು ಎಂದು ಹುಬ್ಬಳ್ಳಿ-ಧಾರವಾಡದ ಜಲಮಂಡಳಿ ನೌಕರರು ಒತ್ತಾಯ ಮಾಡುತ್ತಿದ್ದಾರೆ. 
 

First Published Jan 11, 2023, 5:48 PM IST | Last Updated Jan 11, 2023, 5:48 PM IST

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜಲಮಂಡಳಿಯಲ್ಲಿ ಕಳೆದ 20 ವರ್ಷಗಳಿಂದ ವಾಟರ್ ಮ್ಯಾನ್'ಗಳಾಗಿ 500ಕ್ಕೂ ಸಿಬ್ಬಂದಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೆ ಎಲ್ ಆ್ಯಂಡ್ ಟಿ ಕಂಪನಿ ಬಂದಿದೆ ಎಂದು ಜಲಮಂಡಳಿ ಸಿಬ್ಬಂದಿಯನ್ನು ಕಾಪೋರೇಶನ್‌ಗೆ ಹಸ್ತಾಂತರಿಸಲಾಗಿತ್ತು. ಇದರಿಂದ‌ ಸಂಕಷ್ಟದಲ್ಲಿರುವ ಕಾರ್ಮಿಕರು ಕಳೆದ 20 ವರ್ಷಗಳಿಂದ ಜಲಂಡಳಿಯಿಂದ ಎಲ್ಲರಿಗೂ ವೇತವನ್ನ ನೀಡಲಾಗುತ್ತಿತ್ತು. ಆದರೆ ನಮಗೆ‌ ಕಳೆದ 7 ತಿಂಗಳಿಂದ ವೇತನವನ್ನ ನೀಡಿಲ್ಲ ನಮಗೆ ವೇತನ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಕೋರ್ಟ್ ಕೂಡಾ ಜಲಮಂಡಳಿಗೆ ಖಾಯಂ ಮಾಡಿಕ್ಕೊಳ್ಳಬೇಕು ಎಂದು ಆದೇಶ ಮಾಡಿದ್ರು, ನಮ್ಮನ್ನ ಖಾಯಂ ಮಾಡಿಕ್ಕೊಳ್ಳುತ್ತಿಲ್ಲ. ಅವಳಿ ನಗರದಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿಗೆ ವೇತನವನ್ನೂ ಕೊಟ್ಟಿಲ್ಲ. ಈ ಬಗ್ಗೆ ವಿಚಾರಿಸಿದ್ರೆ ಯಾರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಅಂತಿದ್ದಾರೆ ಸಿಬ್ಬಂದಿ.

ಬಾಗೇಪಲ್ಲಿಯಲ್ಲಿ ಹಳ್ಳ ಹಿಡಿದ ಹೆಚ್.ಎನ್ ವ್ಯಾಲಿ ಯೋಜನೆ: ಫ್ಲೋರೈಡ್ ಲವಣಾಂಶದ ನೀರಿನಿಂದ ಜನರಿಗೆ ತೊಂದರೆ