ಮಾಮು ಟೀ ಅಂಗಡಿ ಚಿತ್ರದ ಪ್ರೊಡ್ಯೂಸರ್ ಇಲ್ಲಿ ವಿಲನ್: ಆ ಫಿಲಂನ ಹಿರೋ ಈ ಮರ್ಡರ್‌ ಮಿಸ್ಟರಿಯಲ್ಲಿ ಆರೋಪಿ!

*  ಕಾಗಿಣಾ ನದಿ ತೀರದಲ್ಲಿ ನಡೆದಿದೆ ಭಯಾನಕ ರಕ್ತದೋಕುಳಿ
*  ಕಳೆದ ರಾತ್ರಿ ಮುಡಬೂಳ ಗ್ರಾಮದಲ್ಲಿ ನಡೆದಿದೆ ರಣಾಂಗ
*  ಸಂಗಾವಿ- ಸಣ್ಣೂರಕರ್ ಎರಡು ಬಲಿಷ್ಟ ಮನೆತನಗಳ ನಡುವಿನ ಸಂಘರ್ಷ

First Published Jun 14, 2022, 9:19 PM IST | Last Updated Jun 14, 2022, 9:19 PM IST

ಕಲಬುರಗಿ(ಜೂ.14):  ಅವರೆಡು ಆ ಗ್ರಾಮದ ಬಲಿಷ್ಠ ಕುಟುಂಬಗಳು. ಹಣ ಬಲ, ತೋಳ್ಬಲ, ರಾಜಕೀಯ ಎಲ್ಲದರಲ್ಲೂ ಈ ಎರಡೂ ಕುಟುಂಬಗಳು ಶಕ್ತಿ ಶಾಲಿಯೇ. ಗ್ರಾಮದಲ್ಲಿ ಏನೇ ನಡೆದಿದ್ರೂ ಈ ಕುಟುಂಬಗಳ ಪಾತ್ರವೇ ನಿರ್ಣಾಯಕ. ಆದ್ರೆ ಈ ಎರಡು ಕುಟುಂಬಗಳು ಒಟ್ಟಿಗೆ ಹೋದವರಲ್ಲ. ಒಂದು ಕುಟುಂಬದವರನ್ನ ಕಂಡ್ರೆ ಮತ್ತೊಬ್ಬರಿಗೆ ಆಗ್ತಿರಲಿಲ್ಲ. ಈ ಎರಡು ಕುಟುಂಬಗಳ ನಡುವಿನ ದ್ವೇಷ್ ತಲಾತಲಾಂತರದ್ದು ಅಂತಲೂ ಹೇಳಲಾಗ್ತಿದೆ. ಆದ್ರೆ ಈ ಎರಡು ಕುಟುಂಬದಲ್ಲಿನ ಪ್ರತಿಷ್ಠೆ, ರಾಜಕೀಯ ಹಗೆತನ, ಸಂಘರ್ಷಕ್ಕೆ ತಿರುಗಿ ಇವತ್ತು  ಒಂದು ಹೆಣ ಬೀಳುವ ಹಂತಕ್ಕೆ ತಲುಪಿದೆ. ಒಳಚರಂಡಿ ವಿಷ್ಯಕ್ಕೆ ಶುರುವಾದ ಒಂದು ಜಗಳ ಒಂದು ಕೊಲೆಯಾಗುವ ಹಂತದವರೆಗೆ ಹೋಗಿದೆ. ಇನ್ನೂ ತನ್ನವನನ್ನ ಕಳೆದುಕೊಂಡ ಕುಟುಂಬ ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು.. ಹತ್ಯೆಗೆ ಹತ್ಯೆಯಿಂದಲೇ ಉತ್ತರ ಎನ್ನುವ ಪ್ರತಿಜ್ಞೆ ಯಾಗಿದೆ. 

ಅಣ್ಣನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳೋದಂತೂ ಸತ್ಯ ಅಂತ ಇವತ್ತು ಈತ ಹೇಳ್ತಿದ್ದಾನೆ. ಆದ್ರೆ ಎರಡು ಕುಟುಂಬಗಳ ನಡುವೆ ಹಳೆಯ ದ್ವೇಷ ಇದ್ದಿದ್ದಂತೂ ಸತ್ಯ. ಇದಕ್ಕೆ ತುಪ್ಪ ಸುರಿಯುವ ಕೆಲಸಗಳು ಇತ್ತಿಚಿನ ಬೆಳವಣಿಗೆಗಳಲ್ಲಿ ನಡೆದು ಹೋಗಿವೆ. ಏನದು ತುಪ್ಪ ಸುರಿಯುವ ಬೆಳವಣಿಗೆಗಳು..? ಆ ಬೆಳವಣಿಗೆಗಳು ಇಂದು ನಡೆದ ಕೊಲೆಗೆ ಕಾರಣವಾಯ್ತಾ..? ಈ ಕೊಲೆಯಲ್ಲಿ ರಾಜಕೀಯವೇನಾದ್ರೂ ಅಡಗಿದೆಯಾ ? ಫಿಲ್ಮಂ ಪ್ರೋಡ್ಯೂಸರ್ ಮತ್ತು ಆತನ ಮಗನನ್ನು ಪೊಲೀಸರು ಈ ಪ್ರಕರಣದಲ್ಲಿ ಹೆಡೆಮುರಿ ಕಟ್ಟಿದ್ದೇಕೆ? 

ದೇಶದ ಅತೀ ಭ್ರಷ್ಟ ಸಚಿವ ಅಂದ್ರೆ ಅದು ಅಶ್ವತ್ಥನಾರಾಯಣ!

ಸಂಗಾವಿ ಕುಟುಂಬದ ವಿಶ್ವನಾಥ್ ಸಂಗಾವಿ ಕೊಲೆಗೆ ಸಂಬಂಧಿಸಿದಂತೆ ಅವರ ಕುಟುಂಬದವರು ಒಟ್ಟು 17 ಜನರ ವಿರುದ್ಧ ಚಿತ್ತಾಪೂರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅವರೆಲ್ಲಾ ಸಣ್ಣೂರಕರ್ ಕುಟುಂಬದವರು ಎನ್ನುವುದು ಗಮನಾರ್ಹ. ಹಾಗಾದ್ರೆ ಈ ಸಣ್ಣೂರಕರ್ ಕುಟುಂಬದವರು ಯಾರು ? ಏನಿವರ ಹಿನ್ನಲೆ ? ಸಂಗಾವಿ - ಸಣ್ಣೂರಕರ್ ಕುಟುಂಬದವರ ನಡುವಿನ ಸಂಘರ್ಷಕ್ಕೆ ಕಾರಣ ಏನು ? ಅನ್ನೋನ್ನ ಹುಡುಕುತ್ತಾ ಹೊರಟ ನಮಗೆ ಸಿಕ್ಕಿದ್ದು ನಿಜಕ್ಕೂ ಬೆಚ್ಚಿ ಬೀಳೋ ಸತ್ಯಗಳು.

ಈ ಸಣ್ಣೂರಕರ್ ಕುಟುಂಬದವರಿಗೆ ಎದುರಾಗಿ ನಿಲ್ಲುವವರೇ ಈ ಗ್ರಾಮದಲ್ಲಿ ಇರಲಿಲ್ಲ. ಅಂತಹ ಹೊತ್ತಲ್ಲಿ ಕಳೆದ ಐದು ವರ್ಷಗಳ ಹಿಂದೆ ಅವರ ಮುಂದೆಯೇ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು ಸಂಗಾವಿ ಕುಟುಂಬದ ಮಹಿಳೆ ಶಿವಲಿಂಗಮ್ಮ. ರಾಜಕೀಯವಾಗಿ ಇವರ ಬೆಳವಣಿಗೆ ಸಹಿಸದೇ ಕೊಲೆ ಮಾಡಿ ಬಿಟ್ರಾ ? ಇರಬಹುದು. ಆದ್ರೆ ಈ ಎರಡೂ ಕುಟುಂಬದವರ ನಡುವಿನ ಸಂಘರ್ಷಕ್ಕೆ ರಾಜಕೀಯ ಹೊರತಾದ ಕಾರಣವೊಂದಿದೆ. 
ಮುಡಬೂಳ ಗ್ರಾಮದ ಸಂಗಾವಿ ಮನೆತನದ ವಿಶ್ವನಾಥ್ ಸಂಗಾವಿಯ ಕೊಲೆಯ ಹಿಂದೆ ನೂರಾರು ವರ್ಷಗಳ ಹಗೆತನ ಕಾರಣ ಅಂತಾರೆ ಅವರ ಕುಟುಂಬಸ್ಥರು. ಆದ್ರೂ ಈಗ ಜಗಳ ಶುರುವಾಗಿದ್ದು ಮಾತ್ರ ಚರಂಡಿ ನೀರು ಬಿಡುವ ಕ್ಷುಲ್ಲಕ ಕಾರಣಕ್ಕೆ. ಇಷ್ಟು ಸಣ್ಣ ಕಾರಣಕ್ಕೆ ಕೊಲೆ ನಡೆಯುತ್ತಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದ್ರೆ ಆ ಎರಡು ಕುಟುಂಬಗಳ ನಡುವೆ ಕುದಿಯುತ್ತಿದ್ದ ದ್ವೇಷಾಗ್ನಿ ಹೊತ್ತಿಕೊಳ್ಳಲು ಒಂದು ಸಣ್ಣ ಕಡ್ಡಿ ಗೀರುವುದು ಸಾಕಾಗಿತ್ತು. ಆ ಕೆಲಸ ಈ ಚರಂಡಿ ವಿವಾದ ಮಾಡಿ ಬಿಟ್ಟಿತ್ತು. 

ಅಹಂಕಾರದಿಂದ ದುರ್ಯೋಧನ ಮಣ್ಣಾದ, ಮೋಹದಿಂದ ಲಂಕಾಸುರನೇ ನಾಶವಾದ. ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಬದುಕಬೇಕಾಗಿದೆ. ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗುವ ರೀತಿಯಲ್ಲಿ ಚಿತ್ತಾಪೂರ ಪೊಲೀಸರು ನೋಡಿಕೊಳ್ಳಬೇಕಿದೆ. ಅಂದಾಗ ಮಾತ್ರ ನೊಂದವರಿಗೆ ಕಾನೂನಿನ ಮೇಲೆ ನಂಬಿಕೆ ಬರಲು ಸಾಧ್ಯ.‌ ಆ ಹೊಣೆಗಾರಿಕೆ ಇದೀಗ ಕಲಬುರಗಿ ಪೊಲೀಸರ ಮೇಲಿದೆ ಅಂತ ಹೇಳ್ತಾ ಇವತ್ತಿನ ಎಫ್.ಐ.ಆರ್ ಮುಗಿಸುತ್ತಿದ್ದೇನೆ.