Asianet Suvarna News Asianet Suvarna News

ಯಾದಗಿರಿ: ಮಹಿಳೆ ಮೇಲೆ ನಡೆದಿದ್ದು ಹಲ್ಲೆಯಲ್ಲ, ಗ್ಯಾಂಗ್‌ರೇಪ್, ತಪ್ಪೊಪ್ಪಿಕೊಂಡ ಆರೋಪಿಗಳು

Sep 13, 2021, 3:41 PM IST

ಬೆಂಗಳೂರು (ಸೆ. 13): ಮಹಿಳೆಯೊಬ್ಬಳನ್ನು ಸಂಪೂರ್ಣ ಬೆತ್ತಲಾಗಿಸಿದ ಗುಂಪೊಂದು ಆಕೆಯ ಮೇಲೆ ಕಬ್ಬಿನ ಜಲ್ಲೆಗಳಿಂದ ತೀವ್ರವಾಗಿ ಹಲ್ಲೆ ನಡೆಸುವುದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಗಾಂಗಗಳನ್ನು ಮುಟ್ಟಿಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಯಾದಗಿರಿ ಮಹಿಳೆ ಮೇಲಿನ ಅಮಾನುಷ ಹಲ್ಲೆಗೆ ಬಿಗ್‌ ಟ್ವಿಸ್ಸ್; ಎಸ್‌ಪಿ ಮಾತು

ಯಾದಗಿರಿ ಸಮೀಪದಲ್ಲಿ ನಡೆದಿದೆ ಎನ್ನಲಾದ ಈ ಪೈಶಾಚಿಕ ಕೃತ್ಯ ನಿರ್ದಿಷ್ಟವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ತನಿಖೆಯಾಗುತ್ತಿದೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.