Asianet Suvarna News Asianet Suvarna News

ಯಾದಗಿರಿ ಮಹಿಳೆ ಮೇಲಿನ ಅಮಾನುಷ ಹಲ್ಲೆಗೆ ಬಿಗ್‌ ಟ್ವಿಸ್ಟ್‌: ಎಸ್‌ಪಿ ಮಾತು

Sep 13, 2021, 2:55 PM IST

ಬೆಂಗಳೂರು (ಸೆ. 13): ಯಾದಗಿರಿ ಸಮೀಪ ನಡೆದಿದೆ ಎನ್ನಲಾದ ಮಹಿಳೆ ನಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಯಾದಗಿರಿ ಎಸ್ಪಿ ವೇದಮೂರ್ತಿ ಪ್ರತಿಕ್ರಿಯಿಸಿದ್ದಾರೆ. 

' ಇದು ಒಂದು ವರ್ಷದ ಹಿಂದೆ ನಡೆದ ಘಟನೆ ಎನ್ನಲಾಗುತ್ತಿದೆ. ಘಟನೆಯ ದಿನಾಂಕ, ತಿಂಗಳು ತಿಳಿದು ಬಂದಿಲ್ಲ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ. ನಾಲ್ಕು ಜನಕ್ಕೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ' ಎಂದು ವೇದಮೂರ್ತಿಯವರು ಹೇಳಿದ್ದಾರೆ.