ಹಬ್ಬದ ದಿನವೇ ಅಣ್ಣನ ಕೊಲೆಗೆ ಸೇಡು ತೀರಿಸಿಕೊಂಡ ತಮ್ಮ!

ಬರೋಬ್ಬರಿ ಎರಡು ವರ್ಷದ ಪ್ಲ್ಯಾನ್‌ಅನ್ನು ಹಬ್ಬದ ದಿನ ಈಡೇರಿಸಿಕೊಂಡಿದ್ದರು. ಕೋರ್ಟ್‌ಗೆ ಬಂದವಳು ನಡುರಸ್ತೆಯಲ್ಲಿ ಶವವಾಗಿ ಹೋಗಿದ್ದಳು. ಆಕೆಯನ್ನು ಹೀಗೆ ಕೊಂದುಹಾಕಿದ್ದರ ಹಿಂದೆ ಒಂದು ಬಲವಾದ ಕಾರಣವೂ ಇತ್ತು.
 

First Published Oct 6, 2022, 5:55 PM IST | Last Updated Oct 6, 2022, 5:55 PM IST

ಗದಗ (ಅ.6): ಸೇಡು ಅನ್ನೋದು ನಿಜಕ್ಕೂ ಡೇಂಜರ್. ಇಲ್ಲೂ ಕೂಡ ಸೇಡಿನ ಹಿಂದೆ ಹೋಗಿ ಒಬ್ಬಳ ಕಥೆ ಮುಗಿಸಿದ್ದಾರೆ ಹಂತಕರು. ಹಿಮದಂತೆ ಹೆಪ್ಪುಗಟ್ಟಿದ್ದ ಸೇಡಿನ ಜ್ವಾಲೆ, ಜ್ವಾಲಾಮುಖಿಯಾಗಿ ಚಿಮ್ಮಿತ್ತು. ಆಯುಧ ಪೂಜೆ ಹಿಂದಿನ ದಿನ ಆ ಕಿರಾತಕರು ಆಯುಧವನ್ನ ಝಳಪಿಸಿದ್ರು. ಅವರು ಅಣ್ಣ ತಮ್ಮಂದಿರು. ಹಿರಿಯಣ್ಣನನ್ನ ಅದೊಂದು ದಂಪತಿ ಕೊಂದು ಮುಗಿಸಿತ್ತು. 

ಆದ್ರೆ ಆತನ ತಮ್ಮಂದಿರು ಅಣ್ಣನ ಸೇಡಿಗೆ ಕಾದು ಕುಳಿತಿದ್ದರು. 2 ವರ್ಷದ ಸೇಡು ಮೊನ್ನೆ ಅಂದರೆ,  ಆಯುಧ ಪೂಜೆಯ ಹಿಂದಿನ ದಿನ ತೀರಿ ಹೊಯ್ತು. ಹಾಡ ಹಗಲೇ ಅಣ್ಣತಮ್ಮಂದಿರು ಸೇರಿ ರಸ್ತೆಯಲ್ಲಿ ರಕ್ತದೊಕುಳಿ ಹರಿಸಿದ್ದರು.

KALABURAGI: ಕೊಟ್ಟ ಸಾಲ ಮರಳಿ ಕೇಳಿದ್ದಕ್ಕಾಗಿ ಅಕ್ಕನ ಗಂಡನನ್ನೇ ಹತ್ಯೆಗೈಯ್ದ ಸಹೋದರರು

ಹಳೆ ದ್ವೇಷದ ಹಿನ್ನೆಲೆ ಕೊಲೆ ನಡೆದಿದೆ ಅನ್ನೋ ಲೀಡ್ ಪೊಲೀಸರಿಗೆ ಸಿಕ್ಕಿತ್ತು.. ಮಹಿಳೆ ಕನ್ವರ್ಟಡ್ ಮುಸ್ಲಿಂ. ಪ್ರೀತಿ ಪ್ರೇಮ ಅಂತೇನಾದ್ರೂ ವಿಷ್ಯ ಇತ್ತ ಅನ್ನೋ ಆ್ಯಂಗಲ್ ನಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದರು. ಆಗಲೇ, ಅನುಮಾನದ ಮೂಟೆಯಾಗಿದ್ದ ಕೇಸ್ ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಸಾಗಿತು.