Asianet Suvarna News Asianet Suvarna News

Kalaburagi: ಕೊಟ್ಟ ಸಾಲ ಮರಳಿ ಕೇಳಿದ್ದಕ್ಕಾಗಿ ಅಕ್ಕನ ಗಂಡನನ್ನೇ ಹತ್ಯೆಗೈಯ್ದ ಸಹೋದರರು

ಕೊಟ್ಟ ಸಾಲ ಮರಳಿ ಕೇಳಿದ್ದಕ್ಕಾಗಿ ಸಹೋದರರಿಬ್ಬರು ಸೇರಿ ಅಕ್ಕನ ಗಂಡನನ್ನೇ ಬರ್ಬರವಾಗಿ ಹತ್ಯೆಗೆ ಘಟನೆ ಕಲಬುರಗಿಯಲ್ಲಿ ನಡೆದಿದೆ. ಬನ್ನಿ ಕೊಟ್ಟು ಶುಭ ಕೋರಲು ಬಂದು ಅಕ್ಕನ ಗಂಡನ ತಲೆಯನ್ನೇ ತೆಗೆದ ಭಾಮೈದುನರು.

Brothers who killed sister husband for loan repayment in Kalaburagi gow
Author
First Published Oct 6, 2022, 4:51 PM IST

ಕಲಬುರಗಿ (ಅ.6) : ಕೊಟ್ಟ ಸಾಲ ಮರಳಿ ಕೇಳಿದ್ದಕ್ಕಾಗಿ ಸಹೋದರರಿಬ್ಬರು ಸೇರಿ ಅಕ್ಕನ ಗಂಡನನ್ನೇ ಬರ್ಬರವಾಗಿ ಹತ್ಯೆಗೆ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ಸಂತೋಷ್ ಕಾಲೋನಿ ಬಡಾವಣೆಯ ನಿವಾಸಿ ಲಕ್ಷ್ಮೀಪುತ್ರ ಎನ್ನುವಾತನೇ ತನ್ನ ಭಾಮೈದರಿಂದ ಕೊಲೆಯಾದ ದುರ್ದೈವಿ. ನಿನ್ನೆ ವಿಜಯದಶಮಿ ಹಬ್ಬದ ಸಂಭ್ರಮ. ವಿಜಯದಶಮಿ ದಿನ ಬನ್ನಿ ಮರದ ಎಲೆ ಕೊಟ್ಟು ಬಂಗಾರದಂತೆ ಇರಲಿ ನಮ್ಮ ಸಂಬಂಧ ಎಂದು ಶುಭ ಕೋರುವುದು ಸಂಪ್ರದಾಯ. ಈ ರೀತಿ ಬನ್ನಿ ಕೊಟ್ಟು ಶುಭ ಕೋರಲು ಬಂದು ಅಕ್ಕನ ಗಂಡನನ್ನು ಮಚ್ಚಿನಿಂದ ಕೊಚ್ಚಿ ಕೊಂದೇ ಬಿಟ್ಟಿದ್ದಾರೆ ಸಹೋದರರು. ಸಂಬಂಧಿಕರ ಮನೆಗೆ ಬನ್ನಿ ಕೊಡಲು ಹೆಂಡತಿ ಜೊತೆಗೆ ಹೋಗಿದ್ದ ಲಕ್ಷ್ಮೀಪುತ್ರನಿಗೆ ಆತನ ಹೆಂಡತಿಯ ಕಣ್ಣೆದುರೇ ಆಕೆಯ ಸಹೋದರರು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರಶಾಂತ್ ಮತ್ತು ಶಿವಕಾಂತ್ ಎನ್ನುವ ಸಹೋದರರೇ ಅಕ್ಕನ ಗಂಡನ ಕೊಂದಿರುವ ಆರೋಪ ಹೊತ್ತಿರುವವರು. ಲಕ್ಷ್ಮೀಪುತ್ರನ ಹೆಂಡತಿ ಪ್ರೀತಿ ತನ್ನ ಸಹೋದರರಿಗೆ 8 ಲಕ್ಷ ರೂಪಾಯಿ ಸಾಲವಾಗಿ ಕೊಟ್ಟಿದ್ದಳು. ಗಂಡ ಹೆಂಡತಿ ಸೇರಿ ಕೊಟ್ಟ ಹಣ ಮರಳಿ ಕೊಡುವಂತೆ ಒತ್ತಾಯಿಸುತ್ತಿದ್ದರು.

ಒಮ್ಮೆ ಪಂಚಾಯತಿ ಸಹ ಸೇರಿಸಿ ಅಕ್ಟೋಬರ್ 1 ರೊಳಗೆ ಕೊಡಲೇಬೆಕು ಎಂದು ಗಡುವು ವಿಧಿಸಲಾಗಿತ್ತು. ಹಣ ಮರಳಿಸದ ಕಾರಣ ಲಕ್ಷ್ಮೀಪುತ್ರ ತನ್ನ ಭಾಮೈದರ ಮೇಲೆ ಒತ್ತಡ ಹೇರುತ್ತಿದ್ದ. ಇದರಿಂದ ಕುಪಿತರಾದ ಸಹೋದರರು ಅಕ್ಕನ ಗಂಡನ ಮುಗಿಸುವ ಪ್ಲ್ಯಾನ್ ಮಾಡಿ ದಸರಾ ಹಬ್ಬದ ದಿನವೇ ಕೊಂದು ಹಾಕಿದ್ದಾರೆ. ಸದ್ಯ ಆರೋಪಿಗಳಿಬ್ಬರೂ ತಲೆ ಮರೆಸಿಕೊಂಡಿದ್ದು,ಅವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಕಲಬುರಗಿ ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಫ್ಲೈಯರ್‌ಗಳ ನಡುವೆ ಗಲಾಟೆ ಕೊಲೆಯಲ್ಲಿ ಅಂತ್ಯ
ಪಾಂಡವಪುರ: ಗ್ರಾಹಕರು ನೀಡುವ ಟಿಫ್ಸ್‌ ಹಣ ತೆಗೆದುಕೊಳ್ಳುವ ವಿಚಾರವಾಗಿ ಹೋಟೆಲ್‌ ಸಫ್ಲೈಯರ್‌ಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಟ್ಟಣದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.

ಪಟ್ಟಣದ ಗ್ರೀನ್‌ ಪಾರ್ಕ್ ಹೋಟೆಲ್‌ನಲ್ಲಿ ಸಫ್ಲೈಯರ್‌ ಕೆಲಸ ಮಾಡುತ್ತಿದ್ದ ಮಂಜುನಾಥ್‌ ಅಲಿಯಾಸ್‌ ಮಂಜು ಕೊಲೆಯಾದ ವ್ಯಕ್ತಿ. ಈತನ ಜೊತೆ ಕೆಲಸ ಮಾಡುತ್ತಿದ್ದ ಕೃಷ್ಣ ಅಲಿಯಾಸ್‌ ರವಿ ಕೊಲೆ ಆರೋಪಿ.

ಮುಂದಿನ ಚುನಾವಣೆಗೂ ಪರೇಶ ಮೇಸ್ತ ಹೆಸರು ಮುನ್ನೆಲೆಗೆ?

ಪಟ್ಟಣದ ಗ್ರೀನ್‌ ಪಾರ್ಕ್ ಹೋಟೆಲ್‌ನಲ್ಲಿ ಏಳು ಮಂದಿ ಅಡುಗೆ ಭಟ್ಟರು ಹಾಗೂ ಸಪ್ಲೈಯರ್‌ಗಳು ಕೆಲಸ ಮಾಡುತ್ತಿದ್ದರು. ಕೊಲೆಯಾದ ಮಂಜು ಹಾಗೂ ರವಿ ಇಬ್ಬರ ನಡುವೆ ಗ್ರಾಹಕರಿಂದ ಭಕ್ಷೀಸ್‌(ಟಿಫ್ಸ್‌) ಪಡೆಯುವ ವಿಚಾರದಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಕಳೆದ 2 ತಿಂಗಳ ಹಿಂದೆ ಇದೇ ವಿಚಾರವನ್ನು ದೊಡ್ಡದು ಮಾಡಿಕೊಂಡು ಆರೋಪಿ ರವಿ ಮಂಜುನಾಥ್‌ಗೆ ರಿಪೀಸ್‌ ಪಟ್ಟಿಯಿಂದ ತಲೆಗೆ ಹೊಡೆದು ಗಲಾಟೆ ಮಾಡಿದ್ದ. ಆ ವೇಳೆ ಹೋಟೆಲ್ ಮಾಲೀಕ ಎಚ್‌.ಜೆ.ಚಂದನ್‌ ಇಬ್ಬರಿಗೂ ಬುದ್ದಿವಾದ ಹೇಳಿದ್ದರು.

STING OPERATION: ಚಡಚಣ ಪೊಲೀಸರ ವಸೂಲಿ ದಂಧೆ ಬಯಲು!

ಆದರೆ, ಅ.3ರಂದು ಮಧ್ಯರಾತ್ರಿ ಇಬ್ಬರು ಮತ್ತೆ ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ರವಿ ಚಾಕುವಿನಿಂದ ಮಂಜುನಾಥ್‌ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಮಾರನೇಯ ದಿನ ಬೆಳಗ್ಗೆ 5.30ರ ಸಮಯದಲ್ಲಿ ಮಾಲೀಕ ಎಚ್‌.ಜೆ.ಚಂದನ್‌ ಹೋಟೆಲ್‌ಗೆ ಬಂದಾಗ ಮಂಜುನಾಥ್‌ ರಕ್ತಸ್ರಾವದೊಂದಿಗೆ ಬಿದ್ದಿದನ್ನು ಕಂಡು ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios