ಗಂಡನ ಜೊತೆ ಇದ್ದವಳಿಗೆ ಹೆಂಡತಿ ಕಿಕ್ಕಿಂಗ್..! ಪತ್ನಿ-ಅವಳ ಗಲಾಟೆಯಲ್ಲಿ ಪತಿ ಕಕ್ಕಾಬಿಕ್ಕಿ..!

ಗಂಡನ ಪ್ರೇಯಸಿ ಮೇಲೆ ಹೆಂಡತಿ ಅಟ್ಯಾಕ್..!
ಗಂಡನ ಕಿಸ್ಸಿಂಗ್ ಸೀನ್  ಡೈರೆಕ್ಟಾಗಿ ನೋಡಿದ್ಲು..! 
ಹೆಂಡತಿ-ಗರ್ಲ್ಫ್ರೆಂಡ್ ಮಧ್ಯೆ ವಿಡಿಯೋ ವಾರ್..!

First Published Feb 6, 2024, 7:01 PM IST | Last Updated Feb 6, 2024, 7:01 PM IST

ಅವರಿಬ್ಬರು ವರ್ಷಗಳ ಹಿಂದೆಯೇ ಮದುವೆಯಾಗಿದ್ರು. ಇಬ್ಬರು ಮಕ್ಕಳು ಕೂಡ ಆಗಿದ್ವು. ಆದ್ರೆ ಹೆಂಡತಿಗೆ ಇತ್ತಿಚೆಗೆ ಗಂಡನ ಮೇಲೆ ಅನುಮಾನ ಶುರುವಾಗಿತ್ತು. ಆತನನ್ನ ಹಿಂಬಾಲಿಸೋಕೆ ಶುರು ಮಾಡಿದ್ದಳು. ಹೀಗೆ ದಿನಗಟ್ಟಲೆ ಗಂಡನನ್ನ ಫಾಲೋ ಮಾಡಿದ ಹೆಂಡತಿಗೆ ಆವತ್ತೊಂದು ದಿನ ಮಾಲ್ವೊಂದರಲ್ಲಿ ಶಾಕಿಂಗ್ ಸೀನ್ ಸಿಕ್ಕಿತ್ತು. ಮಾಲ್ವೊಂದರ ಪಾರ್ಕಿಂಗ್ ಲಾಟ್‌ನಲ್ಲಿ ಆಕೆಯ ಗಂಡನ ಕಿಸ್ಸಿಂಗ್ ಸೀನ್ ಸಿಕ್ಕಿತ್ತು. ಆಕೆಯ ಗಂಡ ತನ್ನ ಪ್ರೇಯಸಿ ಜೊತೆ ಮಾಲ್‌ನಲ್ಲೇ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ಹೀಗೊಂದು ಫ್ಯಾಮಿಲಿ ಮ್ಯಾಟರ್ ಪೊಲೀಸ್ ಠಾಣೆ ಮೆಟ್ಟಿಲ್ಲೇರುತ್ತೆ. ಇನ್ನೂ ಕಂಪ್ಲೆಂಟ್ ಕೊಟ್ಟವರು ಪ್ರೇಯಸಿ. ತನ್ನ ಮನೆಯ ಮುಂದೆ ಗಲಾಟೆ ಮಾಡಿದ್ದ ದೃಶ್ಯಗಳನ್ನ ಇಟ್ಟುಕೊಂಡು ಆಕೆ ಠಾಣೆಗೆ ಹೋದ್ರೆ ಹೆಂಡತಿ ತನ್ನದೇ ಗಂಡನ ಲಿಪ್ ಲಾಕ್ ವಿಡಿಯೋ ಇಟ್ಟುಕೊಂಡು ಪೊಲೀಸರೆದುರು ಹೋಗಿದ್ಲು. ಅಷ್ಟಕ್ಕೂ ಇವರಿಬ್ಬರ ಈ ಕಿತ್ತಾಟ ಇವತ್ತೇ ಮೊದಲೇನಲ್ಲ.. ಎರಡೆರಡು ಬಾರಿ ಹೆಂಡತಿ ಗಂಡ ಮತ್ತು ಆತನ ಬಾಯ್ಫ್ರೆಂಡ್ ಅನ್ನ ಹಿಡಿದು ಹಾಕಿದ್ದಳು.

ಆತ ಬ್ಯುಸಿನೆಸ್ ಮ್ಯಾನ್.. ಕಟ್ಟಡ ನಿರ್ಮಾಟದ ವೇಳೆ ಜಲ್ಲಿ, ಮರಳು ಸಪ್ಲೈ ಮಾಡೋದೇ ಅವನ ಕೆಲಸ. ಹೀಗೆ ಸಪ್ಲೈ ಮಾಡ್ತಿದ್ದವನಿಗೆ ಪರಿಚಯವಾದವಳೇ ಈ ರಾಧಿಕ. ಆಕೆಯ ಮನೆ ನಿರ್ಮಾಣದ ವೇಳೆ ಪರಿಚಯವಾದ ಶರಣ್. ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದ, ನಂತರ ಇಬ್ಬರೂ ಚಾಟಿಂಗ್, ಕಾಲಿಂಗ್ ಎಲ್ಲಾ ಮಾಡ್ತಿದ್ರು. ಶರಣ್ ತನ್ನ ಪತ್ನಿಗೆ ಗೊತ್ತಾಗದೇ ಆಕೆಯನ್ನ ಮೀಟ್ ಮಾಡ್ತಿದ್ದ. ಇನ್ನೂ ಎಷ್ಟು ದಿನ ಅಂತ ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯೋದಕ್ಕೆ ಆಗುತ್ತೆ. ಆವತ್ತೊಂದು ದಿನ ಇಬ್ಬರೂ ಹೋಟೆಲ್ ಒಂದರಲ್ಲಿ ತಗ್ಲಾಕಿಕೊಂಡುಬಿಟ್ಟಿದ್ರು. ಅದೇನೆ ಇರಲಿ ಪರಿಚಿತ ವ್ಯಕ್ತಿಯೊಬ್ಬನ ಆತ್ಮೀಯ ಸ್ನೇಹ ಇಬ್ಬರು ಮಹಿಳೆಯರ ನಡುವೆ ಜಡೆ ಜಗಳಕ್ಕೆ ಕಾರಣವಾಗಿದೆ. ಇಬ್ಬರು ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇಬ್ಬರ ನಡುವೆ ವಿಡಿಯೋ ವಾರ್ ಕೂಡ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ರಾಜ್ಯ Vsಕೇಂದ್ರ..ಏನಿದು ನ್ಯಾಯ-ಅನ್ಯಾಯದ ಸಮರ..? ಕೇಂದ್ರ ಸರ್ಕಾರದ ವಿರುದ್ಧ ಸಿದ್ದು ಸಂಗ್ರಾಮ..ಕೈ ರಣಕಹಳೆ..!

Video Top Stories