ಅಪ್ಪನ ಸುಳಿವು ಕೊಟ್ಟಳು 12 ವರ್ಷದ ಮಗಳು..! ತಾಯಿ ವಿರುದ್ಧವೇ ನಿಂತ ಪುಟ್ಟ ಬಾಲಕಿ..!

ಗಂಡನನ್ನ ಕೊಂದು 6 ತಿಂಗಳು ನಾಟಕ ಮಾಡಿದ್ಲು..!
ಅವನ ಕತ್ತು ಕತ್ತರಿಸಿ ಬೆಂಕಿ ಇಟ್ಟು ಸುಟ್ಟುಬಿಟ್ಟರು..!
ಗೆಳಯನಿಗಾಗಿ ಗಂಡನಿಗೇ ಸ್ಕೆಚ್ ಹಾಕಿದ ಹೆಂಡತಿ..!

First Published Aug 29, 2023, 2:55 PM IST | Last Updated Aug 29, 2023, 2:55 PM IST

ಅದು ಪುಟ್ಟ ಸಂಸಾರ.. ಅಪ್ಪ ಅಪ್ಪ.. ಇಬ್ಬರು ಮುದ್ದಾದ ಮಕ್ಕಳು. 12 ವರ್ಷದ ಸಂಸಾರದಲ್ಲಿ ಕಷ್ಟ ಸುಖಗಳ ಜೊತೆಗೆ ಬಡತನವೂ ಇತ್ತು. ಅಪ್ಪ ಟೆಂಪೋ ಡ್ರೈವರ್ ಆದ್ರೆ ಹೆಂಡತಿ(Wife) ಮಕ್ಕಳ ಜವಬ್ದಾರಿ ಹೊತ್ತಿದ್ಲು. ಆದ್ರೆ ಇದ್ದಕಿದ್ದಂತೆ ಅಪ್ಪ ಮಿಸ್ಸಿಂಗ್. ಇವತ್ತು ಬರಬಹುದು, ನಾಳೆ ಬರಬಹುದು ಅಂತ ಆತನ ಮನೆಯವರೆಲ್ಲಾ ಕಾದರು. ಹೀಗೆ 6 ತಿಂಗಳು ಕಳೆಯಿತು. ಪೊಲೀಸರಿಗೂ(Police) ಆತ ಎಲ್ಲಿಗೆ ಹೋದ ಅನ್ನೋ ಸುಳಿವು ಸಿಕ್ಕಿರಲಿಲ್ಲ. ಆದ್ರೆ ಕಾಣೆಯಾಗಿದ್ದ ಅಪ್ಪನ ಮಗಳೇ ಆವತ್ತು ಪೊಲೀಸ್ ಠಾಣೆಗೆ ಬಂದು ಒಂದು ಮಾಹಿತಿ ಕೊಟ್ಟಳು. ನಮ್ಮ ಅಪ್ಪ ಕಾಣೆಯಾಗಿಲ್ಲ ಬದಲಿಗೆ ಸತ್ತಿದ್ದಾನೆ ಅಂದಿದ್ಲು. ಅಷ್ಟೇ ಅಲ್ಲ ತಂದೆಯನ್ನ ಕೊಂದ ಹಂತಕರ ಸುಳಿವನ್ನೂ ಕೊಟ್ಟಿದ್ಲು. ವಿಜಯಪುರ(Vijayapura) ತಾಲೂಕಿನ ಹೆಡಗಿಹಾಳ ಗ್ರಾಮದ ಜಕ್ಕರಾಯ ಭೀಮರಾಯ ತಳವಾಯಿ ಫೆಬ್ರವರಿ 23ನೇ ತಾರಿಖು ಹೆಂಡತಿಯ ಮನೆಗೆ ಹೋದವನು ಮಿಸ್ಸಿಂಗ್ ಆಗಬಿಟ್ಟಿದ್ದಾನೆ.

ಇದನ್ನೂ ವೀಕ್ಷಿಸಿ:  ಸದ್ಯಕ್ಕೆ ‘ನೋ ಆಪರೇಷನ್’.. ರಾಜಕೀಯದ ಕತೆ ಮುಂದೇನು..?

Video Top Stories