ವೇಗದ ಕಾರಿಗೆ ಇಬ್ಬರು ಡಿಲೆವರಿ ಬಾಯ್ಸ್ ಬಲಿ.. ಬೆಚ್ಚಿ ಬೀಳಿಸುವ ಅಪಘಾತ ದೃಶ್ಯ

ಬೆಂಗಳೂರಿನಲ್ಲೊಂದು ಘೋರ ಅಪಘಾತ/ ಸಿಸಿಟಿವಿ ದೃಶ್ಯ ನೋಡಿದರೆ ಮೈ ಜುಂ ಎನ್ನುತ್ತದೆ/ ವೇಗವಾಗಿ ಬಂದ ಕಾರು ಎರಡು ಜೀವಗಳ ಬಲಿ ಪಡೆಯಿತು/ ಅಪಘಾತ ಮಾಡಿದ್ದ ಕಾರು ಕೊನೆಗೂ ಪತ್ತೆ

First Published Feb 24, 2021, 11:43 PM IST | Last Updated Feb 24, 2021, 11:45 PM IST

ಬೆಂಗಳೂರು (ಫೆ. 24) ಸಿಲಿಕಾನ್ ಸಿಟಿಯಲ್ಲೊಂದು ರಣಭೀಕರ ಅಪಘಾತ ಸಂಭವಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ .  ಹಿಟ್ ಆಂಡ್ ರನ್ ಗೆ ಎರಡು ಜೀವಗಳು ಬಲಿಯಾಗಿವೆ. ಅಪಾರ್ಟ್ ಮೆಂಟ್ ಗೆ ಫುಡ್ ಡಿಲೆವರಿ ಮಾಡಿ ಬರುತ್ತಿದ್ದ ಗೌತಮ್ ಮತ್ತು ಶ್ರೀಕಾಂತ ದಾರುಣ ಸಾವು ಕಂಡಿದ್ದಾರೆ. 

ಗೋವಾಕ್ಕೆ ಹೊರಟ ಬಾಲ್ಯ ಗೆಳತಿಯರೆಲ್ಲ ಮಸಣ ಸೇರಿದರು.

ನಗರದ ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ನಡೆದ ಭಯಂಕರ ಆಕ್ಸಿಡೆಂಟ್ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಅಪಘಾತವೆಸಗಿ ಪರಾರಿಯಾಗಿದ್ದ ಕಾರು ಪತ್ತೆಯಾಗಿದೆ. ಮಾದಾವರ ಬಳಿ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದ. ಅಪಘಾತದ ಸಂದರ್ಭದಲ್ಲಿ ಸಿಕ್ಕ ನಂಬರ್ ಪ್ಲೇಟ್ ಚೂರು ಆಧರಿಸಿ ಕಾರು ನಂಬರ್ ಪತ್ತೆ ಮಾಡಲಾಗಿದೆ. ಸುಮಾರು 15 ಕಾರು ಪರಿಶೀಲನೆ ಬಳಿಕ ಅಪಘಾತವೆಸಗಿದ ಕಾರು ಮಾಲೀಕನ ವಿಚಾರಣೆ ನಡೆಸಲಾಗಿದೆ. ಮಾದನಾಯಕನಹಳ್ಳಿಯ ಭರತ್ ಎಂಬಾತನಿಗೆ ಈ ಕಾರು ಸೇರಿದೆ.  ಮಾಲಿಕ ಭರತ್ ಕಾರನ್ನು ಸ್ನೇಹಿತ ತೆಗೆದುಕೊಂಡು ಹೋಗಿದ್ದ ಎಂದಿದ್ದಾರೆ. 

Video Top Stories