Murder Mystery: ಡಿವೋರ್ಸ್‌ಗೆ ತಲುಪಿದ ಗಂಡ-ಹೆಂಡತಿ ಜಗಳ, ಬಿಜೆಪಿ ಕಾರ್ಯಕರ್ತನ ಕೊಲೆ
ಪಾವಗಢ (Pavagada) ತಾಲೂಕಿನ ನಾಗಲಮಡಿಕೆ ಹೋಬಳಿ ಅಪ್ಪಾಜಿಹಳ್ಳಿ ವಾಸಿ ಪ್ರಸನ್ನಕುಮಾರ್ ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ (BJP Activist) ಸೇವೆ ಸಲ್ಲಿಸುತ್ತಿದ್ದರು.
ತುಮಕೂರು (ಡಿ. 1): ಪಾವಗಢ (Pavagada) ತಾಲೂಕಿನ ನಾಗಲಮಡಿಕೆ ಹೋಬಳಿ ಅಪ್ಪಾಜಿಹಳ್ಳಿ ವಾಸಿ ಪ್ರಸನ್ನಕುಮಾರ್ ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ (BJP Activist) ಸೇವೆ ಸಲ್ಲಿಸುತ್ತಿದ್ದರು. ಡಿ.7ರಂದು ಸ್ವಗ್ರಾಮದಿಂದ ತಿರುಮಣಿಗೆ ಹೋಗುತ್ತಿರುವ ವೇಳೆ ಬಿ.ಕೆ.ಹಳ್ಳಿ ಸಮೀಪ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
Tumakuru: ಪಾವಗಡದಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ
ಮೃತ ಪ್ರಸನ್ನ ಅವರ ಸಹೋದರ ಪುತ್ರಿಯೊಬ್ಬರನ್ನು ಅದೇ ಅಪ್ಪಾಜಿಹಳ್ಳಿ ಸಂಬಂಧಿಕರೊಬ್ಬರಿಗೆ ಕೊಟ್ಟು ವಿವಾಹ ಮಾಡಿದ್ದಾರೆನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೃತ ಪ್ರಸನ್ನ ಸಹೋದರನ ಪುತ್ರಿ ಹಾಗೂ ಈಕೆಯ ಪತಿ ಮಧ್ಯೆ ಕಲಹ ಶುರುವಾಗಿ ವಿಚ್ಛೇಧನ (Divorce) ಹಂತಕ್ಕೆ ತಲುಪಿತು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೃತ ಪ್ರಸನ್ನ ಸಹೋದರನ ಪುತ್ರಿ ಬೆಂಬಲಕ್ಕೆ ನಿಂತು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು.ಪುತ್ರಿ ಬೆಂಬಲಕ್ಕೆ ನಿಂತ ಕಾರಣ ಪತಿ ಕಡೆಯವರು ಆಕ್ರೋಶಗೊಂಡಿದ್ದರೆನ್ನಲಾಗಿದೆ. ಇವರೇ ಕೊಲೆ ಮಾಡಿರಬಹುದೆಂಬ ಶಂಕೆ ಹಿನ್ನಲೆಯಲ್ಲಿ ಪತಿ ಸಂಬಂಧಿಕರಾದ ರವಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.