ಶಿವಮೊಗ್ಗ ಬ್ಲಾಸ್ಟ್ ಕೇಸ್‌: ಎನ್‌ಐಎ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸ್ಪೋಟಕ ಮಾಹಿತಿ ಬಯಲು !

ತುಂಗಾ ತೀರದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ತನಿಖೆ ಮುಂದುರೆದಿದೆ ಎಂದು ಹೇಳಿದೆ. 
 

First Published Jul 8, 2023, 12:54 PM IST | Last Updated Jul 8, 2023, 12:54 PM IST

ಶಿವಮೊಗ್ಗ: ತುಂಗಾ ತೀರದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 9 ಜನರ ವಿರುದ್ಧ ಶುಕ್ರವಾರ ಎರಡು ಚಾರ್ಜ್‌ಶೀಟ್ (Supplymentary ChargeSheet) ಸಲ್ಲಿಸಿದೆ. ಈ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ರೋಬೋಟ್‌ಗಳ (Robotics) ಮೂಲಕ ವಿಧ್ವಂಸಕ ಕೃತ್ಯಕ್ಕೆ ಐಸಿಸ್(ISIS) ಸಂಚು ರೂಪಿಸಿತ್ತು ಎಂದು ತಿಳಿದುಬಂದಿದೆ. ಇದಕ್ಕಾಗಿ ಅವರು ಕೋರ್ಸ್‌ಗಳನ್ನು ಕಲಿಯಲು ಮುಂದಾಗಿದ್ದರು ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಆರೋಪಿಗಳನ್ನು ಮೊಹಮ್ಮದ್ ಶಾರಿಖ್, ಮಾಜ್ ಮುನೀರ್ ಅಹಮದ್ , ಸೈಯದ್ ಯಾಸಿನ್ , ರೀಶಾನ್ ತಾಜುದ್ದೀನ್ ಶೇಖ್ , ಹುಜೈರ್ ಫರ್ಹಾನ್ ಬೇಗ್ , ಮಜಿನ್ ಅಬ್ದುಲ್ ರಹಮಾನ್, ನದೀಮ್ ಅಹಮದ್ ಕೆಎ , ಜಬೀವುಲ್ಲಾ  ಮತ್ತು ನದೀಮ್ ಫೈಝಲ್ ಎನ್ ಎಂದು ಗುರುತಿಸಲಾಗಿದೆ. ಇವರೆಲ್ಲಾ ಮೆಕಾನಿಕಲ್ ಇಂಜಿನಿಯರಿಂಗ್‌ ಕೋರ್ಸ್ ಮಾಡಿದ್ದು, ವಾಟ್ಸ್‌ಪ್‌  ಗ್ರೂಪ್‌ಗಳ ಮೂಲಕ ತರಬೇತಿ ನೀಡುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ವೀಕ್ಷಿಸಿ:  ಅನ್ನಭಾಗ್ಯ ಯೋಜನೆಗೆ ಮುಹೂರ್ತ ಫಿಕ್ಸ್: ಯಾರಿಗೆಲ್ಲಾ ಸಿಗುತ್ತೆ ದುಡ್ಡು ?