ತೀರ್ಥಹಳ್ಳಿ; ಹೋದ ಹೋದ ಕಡೆ ಹೆಂಗಸರ ಸಹವಾಸ ಮಾಡ್ತಿದ್ದ... ಮನೆಯವರೇ ಕೊಂದರು!
* ದಟ್ಟ ಅರಣ್ಯದ ನಡುವೆ ಸುಟ್ಟ ಕಾರು
* ಅಲ್ಲಿ ಕೊಲೆಯಾದವನು ವಿನೋದ್ ಕುಮಾರ್
* ತೀರ್ಥಹಳ್ಳಿಯ ಅರಣ್ಯ ಪ್ರದೇಶದಲ್ಲಿ ವ್ಯಾಪಾರಿಯ ಹೆಣ
* ಸಾಗರದ ವಿನೋದ್ ಕುಮಾರ್ ಕೊಲೆಗೆ ಕಾರಣವಾಗಿದ್ದು ಯಾರು?
ತೀರ್ಥಹಳ್ಳಿ(ಅ. 05) ದಟ್ಟ ಅರಣ್ಯದ ನಡುವೆ ಒಂದು ಸುಟ್ಟ (Car) ಕಾರು.. ಅದರಲ್ಲೊಂದು ಹೆಣ(Murder). ತೀರ್ಥಹಳ್ಳಿ ತಾಲೂಕಿನ ಈ ಘಟನೆ ರೋಚಕ ಅಪರಾಧ (Suvarna FIR) ಸ್ಟೋರಿಯನ್ನು ಹೇಳುತ್ತದೆ. ಅಲ್ಲಿ ಸತ್ತವ ಯಾರು ಎಂಬುಬದರ ಬಗ್ಗೆ ಒಂದೇ ಒಂದು ಸುಳಿವು ಸಹ ಇರಲಿಲ್ಲ. ಈ ಕಹಾನಿಗೆ ನಂತರ ದೊಡ್ಡದೊಂದು ಟ್ವಿಸ್ಟ್ ಸಿಗುತ್ತದೆ.
ಶಾಪಿಂಗ್ ಬೇಡಿಕೆಗೆ ತಲೆಕೆಟ್ಟು ಪ್ರೇಯಸಿಯನ್ನೇ ಹತ್ಯೆ ಮಾಡಿದ
ಕಾಡು, ಹಳ್ಳಿಯ ಜನರು.... ಶಿವಮೊಗ್ಗ ತೀರ್ಥಹಳ್ಳಿ(Thirthahalli) ಕೋಣಂದೂರು ಸಮೀಪದ ವಿಟ್ಲಗೋಡು ಅರಣ್ಯ ಪ್ರದೇಶದಲ್ಲಿ ಸುಟ್ಟ ಕಾರು ಸಿಕ್ಕಿತ್ತು. ಅದರಲ್ಲಿ ಸುಟ್ಟು ಕರಕಲಾಗಿದ್ದ ಮನುಷ್ಯನ ಅಸ್ಥಿಪಂಜರವೂ ಇತ್ತು. ದೇಹದ ಗುರುತು ಪತ್ತೆ ಹಚ್ಚುವುದು ದೊಡ್ಡ ತಲೆನೋವಾಗಿತ್ತು. ಕಾರಿನ ನಂಬರ್ ಪ್ಲೇಟ್ ಸಹ ಇರಲಿಲ್ಲ. ಹೆಂಡತಿ ಮಕ್ಕಳು ಮಿಸ್ಸಿಂಗ ಕಂಪ್ಲೇಟ್ ಸಹ ಕೊಟ್ಟಿರಲಿಲ್ಲ.