Suvarna FIR ಕುಚುಕು ಗೆಳೆಯರ ನಡುವೆ ಹಣಕ್ಕಾಗಿ ಕಿರಿಕ್, ಕೊಲೆಯಲ್ಲಿ ಅಂತ್ಯ
ಅವರಿಬ್ಬರು ಆಪ್ತ ಮಿತ್ರರು.. ಕುಚುಕು ಕುಚುಕು ಅಂತ ಒಬ್ಬರನ್ನೊಬ್ಬರು ಅಂಟಿಕೊಂಡೇ ಇದ್ದವರು. ಸ್ನೇಹ ಅಂದ್ರೆ ಹೀಗಿರಬೇಕು ಅಂತಾ ನೋಡ್ದವರು ಅನ್ನೋಹಾಗಿ ಅವರಿಬ್ರು ಬದುಕಿದ್ರು. ಆದರೆ ದುಡ್ಡು ಅನ್ನೋ ಭೂತ ಇವರಿಬ್ಬರ ಮಧ್ಯೆ ಬಂದಿದ್ದೇ ಬಂದಿದ್ದು . ಎಲ್ಲಾ ಉಲ್ಟಾ ಪಲ್ಟ. ಯಾವಾಗ ಇಬ್ಬರ ಸ್ನೇಹದಲ್ಲಿ ಹಣದ ವಿಷಯ ಎಂಟ್ರಿ ತೆಗೆದುಕೊಳ್ತೋ ಎಲ್ಲ ಹಾಳಾಗಿತ್ತು.. ಒಬ್ಬನ ಹೆಣವೂ ಬೀಳುವಂತಾಗಿಬಿಡ್ತು.
ಬೆಂಗಳೂರು (ಏ.28): ಕೊರೊನಾ (Corona) ಸಮಯದಲ್ಲಿ ಬ್ಯುಸಿನೆಸ್ ಲಾಸ್ ಆಯ್ತು ಅಂತ ಮುತ್ತು ಉಮೇಶನ ಬಳಿ 10 ಪರ್ಸೆಂಟ್ ಬಡ್ಡಿಗೆ ದುಡ್ಡು ಪಡೀತಾನೆ, 1 ಲಕ್ಷ ವಾಪಸ್ ಮಾಡಿದ್ರೂ ಅದು ಉಮೇಶನಿಗೆ ಸಾಕಾಗೋದಿಲ್ಲ. ನಂತರ ಉಮೇಶ ಏನು ಮಾಡಿದ..? ಮುತ್ತುವಿಗೆ ಮಾರ್ಚ್ 23ರಂದು ಫೋನ್ ಮಾಡಿ ಈತ ಹೇಳಿದ್ದೇನು..?
ಬಡ್ಡಿ ದುಡ್ಡು ಕೊಡಲಿಲ್ಲ ಅಂತ ಮನೆ ಮುಂದೆ ಹೋಗಿ ಕುಡಿದು ಜಗಳ ಮಾಡಿದ್ದ ಉಮೇಶ (Umesh) ಮಾರ್ಚ್ 23 ರಂದು ಮಾಡಬಾರದನ್ನ ಮಾಡಿಬಿಟ್ಟ. ಬ್ರೋ ಬ್ರೋ ಅಂತಿದ್ದವನನ್ನೇ ಅವತ್ತು ಕಿಡ್ನ್ಯಾಪ್ ಮಾಡಿ ಚಿತ್ರ ಹಿಂಸೆ ಕೊಟ್ಟುಬಿಟ್ಟಿದ್ದ.ಅದೂ ಜಸ್ಟ್ 2 ಲಕ್ಷಕ್ಕೆ..!
ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು: ಕ್ಲಾರೆನ್ಸ್ ಸ್ಕೂಲ್
ಮಾತಿನಲ್ಲಿ ಎಲ್ಲವೂ ಬಗೆಹರಿಯುತ್ತಿತ್ತು.. ಕಾಸಿಗಿಂತ ಜೀವ ಜೀವನ ದೊಡ್ಡದು ಅನ್ನೋ ಕನಿಷ್ಠ ಜ್ಞಾನ ಉಮೇಶನಿಗೆ ಗೊತ್ತಿದ್ರೆ ಇವತ್ತು ಉಮೇಶ ಜೈಲು ಸೇರುತ್ತಿರಲಿಲ್ಲ.. ಮೃತ್ಯುಂಜಯ ಸಾಯ್ತಿರಲಿಲ್ಲ.. ಗೆಳೆಯರ ನಡುವೆ ದುಡ್ಡು ಅನ್ನೋ ಭೂತ ಬಂದ್ರೆ ಏನಾಗುತ್ತೆ ಅನ್ನೋದಕ್ಕೆ ಇದುವೇ ಬೆಸ್ಟ್ ಎಕ್ಸಾಂಪಲ್.