Asianet Suvarna News Asianet Suvarna News

Belagavi Crime News: ಜ್ಯೋತಿಷಿ ಕೊಲೆಗೈದು ಪೊಲೀಸರಿಗೆ ಶರಣಾದ

Belagavi Astrologer Murder: ಹಣದ ವಿಚಾರವಾಗಿ ಹಾಡಹಗಲೇ ನಡು ರಸ್ತೆಯಲ್ಲಿ ಜ್ಯೋತಿಷಿ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆಗೈದ ಆರೋಪಿಯೇ ಪೊಲೀಸ್‌ ಠಾಣೆಗೆ ಹೋಗಿ ಶರಣಾದ ಘಟನೆ ಶುಕ್ರವಾರ ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ನಡೆದಿದೆ.
 

First Published Aug 30, 2022, 5:45 PM IST | Last Updated Aug 30, 2022, 5:45 PM IST

ಬೆಳಗಾವಿ (ಆ. 30): ಆತ ಎಲ್ಲರ ಭವಿಷ್ಯ ಹೆಳುತ್ತಿದ್ದ ಜ್ಯೋತಿಷಿ. ಹುಟ್ಟಿದ್ದು ಒಂದು ಊರಲ್ಲಾದ್ರೂ ಜೀವನ ಕಟ್ಟಿಕೊಂಡಿದ್ದು ಮತ್ತೊಂದು ಊರಲ್ಲಿ. ಆದ್ರೆ  ಕಂಡವರ ಜ್ಯೋತಿಷ್ಯ ಹೇಳಿ ಮಠವನ್ನೇ ಕಟ್ಟಿಕೊಂಡಿದ್ದ ಆತನ ಭವಿಷ್ಯವೇ ಅವತ್ತು ಖರಾಬಾಗಿತ್ತು. ತನಗೆ ಜ್ಯೋತಿಷ್ಯದ ಪಾಠ ಮಾಡಿದ ಗುರುಗಳನ್ನ ನೋಡಲು ಪಕ್ಕದ ಚೆನ್ನೈಗೆ ಹೋಗಲು ತಯಾರಿ ನಡೆಸಿದ್ದವನ್ನು ಅವತ್ತು ಕತ್ತು ಕೂಯ್ದು ಕೊಂದುಬಿಟ್ಟಿದ್ದರು. ಅದೂ ಕೂಡ ತಾನು ಚಲಾಯಿಸುತ್ತಿದ್ದ ಬೈಕಲ್ಲಿ ಹಿಂದೆ ಕೂತಿದ್ದವನೇ. ಇನ್ನೂ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹಂತಹಂತಕ್ಕೂ ಶಾಕ್ ಮೇಲೆ ಶಾಕ್ ಸಿಕ್ಕಿತ್ತು. ಹೀಗೆ  ಬೆಳಗಾವಿಯನ್ನೇ ಬೆಚ್ಚಿ ಬೀಳಿಸಿದ ಜ್ಯೋತಿಷಿಯ ಮರ್ಡರ್ ಮಿಸ್ಟರಿ ಕಥೆಯೇ ಇವತ್ತಿನ ಎಫ್.ಐ.ಆರ್

ಅಧಿಕಾರಿಗಳ ಕಿರುಕುಳಕ್ಕೆ ಡಿಪೋದಲ್ಲಿಯೇ ಬಿಎಂಟಿಸಿ ಚಾಲಕ ಆತ್ಮಹತ್ಯೆ!

Video Top Stories