ಕಲ್ಪತರು ನಾಡಿನಲ್ಲಿ ಅಮಾನವೀಯ ಘಟನೆ, ರಾತ್ರಿ ಕಳೆದು ಬೆಳಗಾಗೋದ್ರಲ್ಲಿ ಇಬ್ಬರು ದಲಿತರ ಹೆಣ!
ಕಲ್ಪತರು ನಾಡು ತುಮಕೂರಿನಲ್ಲಿ ತ್ರಿ ಕಳೆದು ಬೆಳಗಾಗೋದ್ರಲ್ಲಿ ಇಬ್ಬರು ದಲಿತರ ಹೆಣ ಬಿದ್ದಿದೆ. ಹೌದು.. ತುಮಕೂರು ಜಿಲ್ಲಾದ್ಯಂತ ಬಾರಿ ಸದ್ದು ಮಾಡಿರುವ ಇಬ್ಬರು ಯುವಕರ ಕೊಲೆ ಪ್ರಕರಣ ಪ್ರತಿನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದೆ
ತಮಕೂರು, (ಮೇ.05): ನಾವು ಎಷ್ಟೇ ಮುಂದುವರೆದ್ರೂ ಜನ ಜಾತಿ, ಜಾತಿ ಅನ್ನೋದನ್ನ ಮಾತ್ರ ಬಿಡುತ್ತಿಲ್ಲ, ಇವತ್ತಿಗೂ ಕೆಳ ಜಾತಿ ವಿರುದ್ಧ ಶೋಷಣೆ ಮುಂದುವರೆಯುತ್ತಲೇ ಇದೆ. ಕೆಳ ಜಾತಿಯವರ ವಿರುದ್ಧ ಮೇಲ್ ಜಾತಿ ಅನ್ನೋ ಕಾರ್ಡ್ ಇಟ್ಟುಕೊಂಡು ದಬ್ಬಾಳಿಕೆ ಮಾಡುತ್ತಲೇ ಬಂದಿದ್ದಾರೆ. ಇವತ್ತು ಕೂಡ ನಾವು ನಮ್ಮ ಎಫ್.ಐ.ಆರ್ನಲ್ಲಿ ಇಂಥದ್ದೇ ಸ್ಟೋರಿಯನ್ನ ಹೊತ್ತು ಬಂದಿದ್ದೇವೆ. ಇಡೀ ಊರಿಗೆ ಊರೇ ಸೇರಿಕೊಂಡು ದಲಿ ಯುವಕರಿಬ್ಬರನ್ನ ಟಾರ್ಚರ್ ಕೊಟ್ಟು ಸಾಯಿಸಿದ್ದಾರೆ. ಆದ್ರೆ ಇಂತಹ ಅಮಾನವೀಯ ಘಟನೆಗೆ ಸಾಕ್ಷಿಯಾಗಿದ್ದು ಮಾತ್ರ ಕಲ್ಪತರು ನಾಡು..
ತುಮಕೂರು ದಲಿತ ಯುವಕರ ಕೊಲೆ ಪ್ರಕರಣ, ಗ್ರಾಮವನ್ನೇ ತೊರೆದ ಪುರುಷರು
ಹೌದು..ಕಲ್ಪತರು ನಾಡು ತುಮಕೂರಿನಲ್ಲಿ ತ್ರಿ ಕಳೆದು ಬೆಳಗಾಗೋದ್ರಲ್ಲಿ ಇಬ್ಬರು ದಲಿತರ ಹೆಣ ಬಿದ್ದಿದೆ. ಕಳ್ಳತನ ಮಾಡಲು ಬಂದ ಇಬ್ಬರು ಯುವಕರನ್ನು ಗ್ರಾಮಸ್ಥರೆಲ್ಲಾ ಸೇರಿ ಹೊಡೆದು ಹತ್ಯೆ ಮಾಡಿದ್ದಾರೆ. ಪೆದ್ದಹಳ್ಳಿ ಗ್ರಾಮದ ಸವರ್ಣೀಯರು ದಲಿತ ಯುವಕರನ್ನು ದನದಂತೆ ಬಡಿದು ಕೊಲೆ ಮಾಡಿ ನೀರಿಗೆ ಎಸೆದಿದ್ದಾರೆಂದು ದೂರಲಾಗಿದೆ.