ಹರ್ಷ ಹತ್ಯೆ ಪ್ರತೀಕಾರವಾಗಿ ಕೊಲೆಗೆ ಸಂಚು, ಶಿವಮೊಗ್ಗದಲ್ಲಿ ಕೋಮುಗಲಭೆಗೆ ಸೃಷ್ಟಿಗೆ ಹೊಂಚು...

ಬಜರಂಗದಳದ ಯುವ ಕಾರ್ಯಕರ್ತ ಹರ್ಷನ ಕೊಲೆಗೆ (Shivamogga Harsha murder) ಪ್ರತೀಕಾರವಾಗಿ ಮತ್ತೊಂದು ಕೊಲೆಗೆ ಸಂಚು ನಡೆದಿತ್ತು. ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದ ಖತರ್ನಾಕ್‌ ಗ್ಯಾಂಗ್‌ನನ್ನು ಶಿವಮೊಗ್ಗ ಪೊಲೀಸರು (Shivamogga Police) ಬಂಧಿಸಿದ್ದಾರೆ. ಇದರೊಂದಿಗೆ ಮತ್ತೊಂದು ಕೋಮುಗಲಭೆ ಜರುಗುವುದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ.

First Published Apr 16, 2022, 4:11 PM IST | Last Updated Apr 16, 2022, 4:11 PM IST

ಶಿವಮೊಗ್ಗ, (ಏ.16): ಬಜರಂಗದಳದ ಯುವ ಕಾರ್ಯಕರ್ತ ಹರ್ಷನ ಕೊಲೆಗೆ (Shivamogga Harsha murder) ಪ್ರತೀಕಾರವಾಗಿ ಮತ್ತೊಂದು ಕೊಲೆಗೆ ಸಂಚು ನಡೆದಿತ್ತು. ಮುಸ್ಲಿಂ ಯುವಕನ ಕೊಲೆಗೆ ಸಂಚು ರೂಪಿಸಿದ್ದ ಖತರ್ನಾಕ್‌ ಗ್ಯಾಂಗ್‌ನನ್ನು ಶಿವಮೊಗ್ಗ ಪೊಲೀಸರು (Shivamogga Police) ಬಂಧಿಸಿದ್ದಾರೆ. ಇದರೊಂದಿಗೆ ಮತ್ತೊಂದು ಕೋಮುಗಲಭೆ ಜರುಗುವುದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ.

Bengaluru: ಎನ್‌ಐಎ ಬೆಂಗಳೂರು ಘಟಕ ಕಾರ್ಯಾರಂಭ: ಹರ್ಷ ಕೊಲೆ ತನಿಖೆ ಮೊದಲ ಕೇಸ್‌

ಹರ್ಷನ ಕಗ್ಗೊಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಆ ವೇಳೆ ಆರೋಪಿ ಜೇಟ್ಲಿ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮುಸ್ಲಿಂ ಯುವಕನ ಹತ್ಯೆ ಸಂಚಿನ ಬಗ್ಗೆ ಆತ ಮಾಹಿತಿ ಬಹಿರಂಗಪಡಿಸಿದ್ದ. ಜೇಟ್ಲಿ ನೀಡಿದ ಮಾಹಿತಿಯ ಮೇರೆಗೆ 13 ಜನರ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ. ರಾಖಿ, ವಿಶ್ವಾಸ್, ವಾಸನೆ, ಬೆಂಗಳೂರು, ಕಟ್ಟೆ, ಕೋಟಿ, ಕುಲ್ಡಾ, ಅಪ್ಪು, ಸಚಿನ್ ಸೇರಿದಂತೆ 13 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. FIR ದಾಖಲಿಸಿಕೊಂಡು ಬಹುತೇಕರನ್ನು ಬಂಧಿಸಲಾಗಿದೆ.

Video Top Stories