Sex For Job: ಉದ್ಯೋಗದ ಆಮಿಷ, IFS ಅಧಿಕಾರಿಯಿಂದ ಯುವತಿಯ ಮೇಲೆ ಅತ್ಯಾಚಾರ..?

ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವ ಆಮೀಷವೊಡ್ಡಿ ಧಾರವಾಡ (Dharwad) ಅರಣ್ಯ ಇಲಾಖೆ (IFS Officer) ಅಧಿಕಾರಿಯೊಬ್ಬರು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

First Published Dec 4, 2021, 12:39 PM IST | Last Updated Dec 4, 2021, 12:56 PM IST

ಬೆಂಗಳೂರು (ಡಿ. 04): ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವ ಆಮೀಷವೊಡ್ಡಿ ಧಾರವಾಡ (Dharwad) ಅರಣ್ಯ ಇಲಾಖೆ (IFS Officer) ಅಧಿಕಾರಿಯೊಬ್ಬರು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಅರಣ್ಯ ಇಲಾಖೆ ಅಧಿಕಾರಿ ರವಿಶಂಕರ್ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಒಂದೂವರೆ ವರ್ಷದ ಬಳಿಕ ಈ ಕೇಸ್ ಬೆಳಕಿಗೆ ಬಂದಿದೆ. ದೂರು ಕೊಟ್ಟ ಯುವತಿ ಕೊಟ್ಟ ಸಾಕ್ಷ್ಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ. 

Asianet Suvarna FIR: ಹೆಂಡ್ತಿ ಗರ್ಭಿಣಿ ಆಗಿದ್ದಕ್ಕೆ ರೊಚ್ಚಿಗೆದ್ದ ಗಂಡ, ಬಿದ್ದವು 2 ಹೆಣ!

ಫೇಸ್‌ಬುಕ್ ಮೂಲಕ ಯುವತಿಗೆ ರವಿಶಂಕರ್ ಪರಿಚಯವಾಗುತ್ತದೆ. ಅರಣ್ಯ ಇಲಾಖೆ ಕ್ವಾಟ್ರರ್ಸ್‌ಗೆ ಯುವತಿಯನ್ನು ಕರೆಸಿಕೊಂಡು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ಮುಂದೆ ನಾವು ಗಂಡ ಹೆಂಡತಿ ಎಂದು ರವಿಶಂಕರ್ ಹೇಳಿದ್ದರಂತೆ. ಈ ಬಗ್ಗೆ ಯುವತಿ ದೂರು ಕೊಟ್ಟಿದ್ದು, ರವಿಶಂಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಒಂದೂವರೆ ವರ್ಷದ ಬಳಿಕ ಪೊಲೀಸರು ಸ್ಥಳ ಮಹಜರ್ ಮಾಡಿದಾಗ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಇನ್ನೊಂದು ಕಡೆ ಯುವತಿಯ ಮೇಲೆ ಹನಿಟ್ರ್ಯಾಪ್ ಆರೋಪಗಳು ಕೇಳಿ ಬಂದಿದೆ. 
 

Video Top Stories