ಚಂದ್ರಶೇಖರ ಗುರೂಜಿ ಕೊಲೆಯ ಹಿಂದಿನ ಇನ್‌ಸೈಡ್ ಸ್ಟೋರಿ..!

ಸರಳ ವಾಸ್ತು ಖ್ಯಾತಿಯ ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ (Chandrashekhar Guruji) ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹಿಂದೆ ಗುರೂಜಿ ಜತೆ ‘ಸರಳವಾಸ್ತು ಸಂಸ್ಥೆ’ಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೆವಾಡ ಹತ್ಯೆ ಮಾಡಿದ ಆರೋಪಿಗಳು. 

First Published Jul 6, 2022, 2:42 PM IST | Last Updated Jul 6, 2022, 2:50 PM IST

ಸರಳ ವಾಸ್ತು ಖ್ಯಾತಿಯ ವಾಸ್ತುತಜ್ಞ ಚಂದ್ರಶೇಖರ್‌ ಗುರೂಜಿ (Chandrashekhar Guruji) ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹಿಂದೆ ಗುರೂಜಿ ಜತೆ ‘ಸರಳವಾಸ್ತು ಸಂಸ್ಥೆ’ಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೆವಾಡ ಹತ್ಯೆ ಮಾಡಿದ ಆರೋಪಿಗಳು. ಹಂತಕರು ಚಾಕುವಿನಿಂದ ಇರಿದಿರಿದು ಸಾಯಿಸಿದ ಸಿಸಿಟೀವಿ ದೃಶ್ಯಾವಳಿಗಳು (CCTV Footage) ಸುದ್ದಿವಾಹಿನಿಗಳಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದವು. ಆ ಘೋರ ದೃಶ್ಯಗಳು ಎಂಥವರ ಎದೆಯನ್ನೂ ಝಲ್ಲೆನಿಸುವಂತಿದ್ದವು.

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆಗೆ ಬೇನಾಮಿ ಆಸ್ತಿ ಕಾರಣನಾ?

ರಿಸೆಪ್ಶನಿಸ್ವ್‌ ಕರೆ ಮಾಡಿ ತಿಳಿಸಿದ ಬಳಿಕ ಗುರೂಜಿ ಕೆಳಗಿಳಿದು ಬಂದಿದ್ದಾರೆ. ಗುರೂಜಿ ಬಂದು ಕುಳಿತುಕೊಳ್ಳುತ್ತಲೇ ಮಹಾಂತೇಶ ಕಾಲಿಗೆ ನಮಸ್ಕರಿಸಿದ್ದಾನೆ. ಗುರೂಜಿ ಆತನಿಗೆ ಆಶೀರ್ವಾದ ಮಾಡಿ, ಕುಶಲೋಪರಿ ಮಾತನಾಡುತ್ತಿರುವಾಗ ತಕ್ಷಣ ಮೇಲೆದ್ದ ಮಹಾಂತೇಶ ಚಾಕುವಿನಿಂದ ಇರಿದಿದ್ದಾರೆ. ಹಿಂದಿನಿಂದ ಮಂಜುನಾಥ ಇರಿದಿದ್ದಾನೆ. ಮೊದಲು ಸ್ವಾಮೀಜಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಜೀವಭಯದಿಂದ ಚೀರಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವರನ್ನು ಬಿಡದೆ ನೆಲಕ್ಕೆ ಕೆಡವಿ 20 ಸೆಕೆಂಡ್‌ ಅಂತರದಲ್ಲಿ ಬಿಟ್ಟುಬಿಡದೆ 40ರಿಂದ 50 ಬಾರಿ ಎದೆ, ಹೊಟ್ಟೆ, ಕುತ್ತಿಗೆ, ಬೆನ್ನು, ಭುಜಕ್ಕೆ ಇರಿದಿದ್ದಾರೆ.

ಸರಳ ವಾಸ್ತು ಗುರೂಜಿ ಭೀಕರ ಹತ್ತೆ: ಬೆಚ್ಚಿಬೀಳಿಸುತ್ತೆ ಮಹಾಂತೇಶ್ ಶಿರೂರು ಹಿಸ್ಟ್ರಿ!

ತಮ್ಮ ಸಂಸ್ಥೆಯಲ್ಲಿ ಆಪ್ತನಾಗಿದ್ದ ಮಹಾಂತೇಶನ ಹೆಸರಿಗೆ ಗುರೂಜಿ ಕೆಲ ಆಸ್ತಿ ನೋಂದಾಯಿಸಿದ್ದರು. ಇದರಲ್ಲಿ ಕೆಲವನ್ನು ಆತ ಮಾರಿದ್ದ. ಈ ಬಗ್ಗೆ ಭಿನ್ನಾಭಿಪ್ರಾಯ ಇತ್ತು. 2016ರಲ್ಲಿ ಆತ ಸಂಸ್ಥೆ ತೊರೆದಿದ್ದ. ಆಸ್ತಿ ಕಲಹವೇ ಕೊಲೆಗೆ ಮೂಲ ಕಾರಣ ಎನ್ನಲಾಗುತ್ತಿದೆ.