ಬೆಂಗಳೂರಿನಲ್ಲಿ ಮಿತಿಮೀರಿದ ಪುಡಿರೌಡಿಗಳ ಹಾವಳಿ: ಸೆಕ್ಯೂರಿಟಿ ಗಾರ್ಡ್‌ ಮುಖ ಕೊಯ್ದು ಎಸ್ಕೇಪ್‌ !

ಬೆಂಗಳೂರಿನಲ್ಲಿ ಪುಡಿ ರೌಡಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ರಾತ್ರಿ ವೇಳೆ ಓಡಾಡಬೇಡ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

First Published Jun 20, 2023, 1:16 PM IST | Last Updated Jun 20, 2023, 1:16 PM IST

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದ್ದು, ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಲಾಗಿದೆ. ಆರ್‌.ಟಿ. ನಗರದಲ್ಲಿ ಪುಡಿರೌಡಿ ಆಲ್ಬರ್ಟ್‌ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಅಲ್ಲದೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನೆ ಹತ್ತಿರದಲ್ಲೇ ಈ ಘಟನೆ ನಡೆದಿದೆ. ರಾತ್ರಿ ವೇಳೆ ಓಡಾಡಬೇಡ ಎಂದಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಾಕುವಿನಿಂದ ಮುಖ ಕೊಯ್ದು ಆರೋಪಿ ಎಸ್ಕೇಪ್‌ ಆಗಿದ್ದಾನೆ. ಸೋಮವಾರ ರಾತ್ರಿ 2.30ಕ್ಕೆ ಘಟನೆ ನಡೆದಿದೆ. ಅಲ್ಲದೇ ಪೊಲೀಸರು ಇಲ್ಲಿ ಬೀಟ್‌ ಮಾಡುತ್ತಿಲ್ಲ ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಈಜಲು ಹೋದ ಬಾಲಕ ಹೆಣವಾಗಿ ಪತ್ತೆ: ಟೀನೇಜ್ ಯುವಕರೇ ಇವನ ಟಾರ್ಗೆಟ್..!

Video Top Stories