Asianet Suvarna News Asianet Suvarna News

ಈಜಲು ಹೋದ ಬಾಲಕ ಹೆಣವಾಗಿ ಪತ್ತೆ: ಟೀನೇಜ್ ಯುವಕರೇ ಇವನ ಟಾರ್ಗೆಟ್..!

ಕೊಲೆ ಮಾಡಿದವ ಅವರ ಮನೆಯ ಅನ್ನ ತಿಂದಿದ್ದ
ಸಿಗರೇಟ್ ಸೇದಿಸುತ್ತಿದ್ದ.. ವಿಡಿಯೋ ಮಾಡ್ತಿದ್ದ
ದುಡ್ಡ ಕೊಡದಿದ್ರೆ ಬ್ಲ್ಯಾಕ್ಮೇಲ್ ಮಾಡ್ತಿದ್ದ ಆರೋಪಿ

First Published Jun 20, 2023, 1:02 PM IST | Last Updated Jun 20, 2023, 1:02 PM IST

ಅವನಿಗಿನ್ನೂ 15 ವರ್ಷ, ಓದು ಆಟ ಪಾಟ ಅಷ್ಟೇ ಆತನಿಗೆ ಗೊತ್ತಿದ್ದಿದ್ದು. ಇಂತವನನ್ನ ಆವತ್ತು ಆತನ ಸ್ನೇಹಿತರು ಈಜಿಗೆ ಕರೆದುಕೊಂಡು ಹೋದ್ರು. ಆತನಿಗೋ ಈಜು ಬರಲ್ಲ, ಆದ್ರೂ ಸ್ನೇಹಿತರ ಜೊತೆ ಹೊರಟು ನಿಂತಿದ್ದ. ಮನೆಗೆ ಆಟವಾಡಿ ಬರ್ತೀನಿ ಅಂತ ಹೇಳಿ ಅದೇ ಗ್ರಾಮದ ಬಾವಿಗೆ ಹೋದ. ಆದ್ರೆ ಆತ ಮನೆಗೆ ವಾಪಸ್ ಆಗಿದ್ದು ಮಾತ್ರ ಹೆಣವಾಗಿ. ಆತ ಕಾಲು ಜಾರಿ ಬಾವಿಗೆ ಬಿದ್ದ ಅಂತ ಪೊಲೀಸರು ಕೇಸ್ ಕ್ಲೋಸ್ ಮಾಡಿದ್ರು. ಯುವಕನ ಅಂತಿಮ ಕಾರ್ಯಗಳು ಮುಗಿದ್ವು. ಆದ್ರೆ ಇದೆಲ್ಲಾ ಆಗಿ 3 ದಿನಕ್ಕೆ ಆವತ್ತು ಬಾಲಕನ ಜೊತೆಗೆ ಈಜಲು ಹೋಗಿದ್ದ ಯುವಕರು ಒಂದು ಶಾಕಿಂಗ್ ಮಾಹಿತಿಯನ್ನ ಕೊಟ್ಟಿದ್ರು. ಆ ಬಾಲಕ ಸತ್ತಿದ್ದು ಕಾಲು ಜಾರಿ ಅಲ್ಲ ಬದಲಾಗಿ ಕೊಲೆಯಾಗಿದ್ದಾನೆ ಅಂತ ಹೇಳಿಬಿಟ್ಟಿದ್ರು. ಯಾವಾಗ ಆ ಹುಡುಗರು ಹೀಗೆ ಹೇಳಿದ್ರೋ ಕೇಸ್ ರೀ ಓಪನ್ ಆಯ್ತು. ಹುಡುಗರು ಹೇಳೋ ಹಾಗೆ ಆವತ್ತು ದಡದ ಮೇಲೆ ಕೂತಿದ್ದ ಪ್ರಜ್ವಲ್‌ನನ್ನ ಶಂಕರ್ ಅನ್ನೋನು ಬೇಕಂತಲೇ ಕಾಲು ಹಿಡಿದು ಬಾವಿಗೆ ಎಳೆದು ನಂತರ ಉಸಿರುಗಟ್ಟಿಸಿ ಕೊಂದಿದ್ದಾನಂತೆ. ಆತ ಅವರ ಮನೆಯಲ್ಲೇ ಕಾರು ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ.

ಇದನ್ನೂ ವೀಕ್ಷಿಸಿ: ವ್ಯೂಹ ರಚನೆಗೂ ಮುನ್ನವೇ, ರಣಕಲಿಗಳ ಅಂತಃಕಲಹ: ಮಹಾಘಟಬಂಧನ್ ಪಟಾಕಿ ಸಿಡಿಯುತ್ತೋ? ಠುಸ್ ಆಗುತ್ತೋ ?