Asianet Suvarna News Asianet Suvarna News
breaking news image

Renukaswamy Murder Case: ಕೇಸ್‌ನಿಂದ ತಪ್ಪಿಸಿಕೊಳ್ಳಲು ದರ್ಶನ್ ಕುತಂತ್ರ..! ಬಡವರ ಮನೆ ಮಕ್ಕಳು ಅಂದ್ರೆ ಹೀಗಾ..?

ಕೊಲೆ ಕೇಸ್‌ನಿಂದ ತಪ್ಪಿಸಿಕೊಳ್ಳಲು ದರ್ಶನ್ ಕುತಂತ್ರ..! 
ನನ್ನನ್ನ ಉಳಿಸಿ ಅಂದಾಗ ಎಷ್ಟು ಕೊಡ್ತೀರ ಅಂದರು..!
ದುಡ್ಡು ಪಡೆದು ಸರೆಂಡರ್ ಆದರೂ ಬಾಯಿ ಬಿಟ್ಟರು..! 

ಒಬ್ಬನ ಹೆಣ ಹಾಕಿ ಜೈಲು ಸೇರಿದ್ರೂ ದರ್ಶನ್(Darshan) ಅಭಿಮಾನಿಗಳು ಮಾತ್ರ ಇವತ್ತಿಗೂ ನಮ್ಮ ಬಾಸ್ ನಮ್ಮ ಬಾಸ್ ಅಂತ ಬೊಬ್ಬೆ ಹೊಡೆಯೋದನ್ನ ಕಡಿಮೆ ಮಾಡಿಲ್ಲ.. ನಮ್ಮ ಬಾಸ್ ತಪ್ಪು ಮಾಡಿಲ್ಲ. ತಪ್ಪು ಮಾಡಿರೋರಿಗೆ ಶಿಕ್ಷೆ ಕೊಟ್ಟಿದ್ದಾರೆ ಅಷ್ಟೇ ಅಂತೆಲ್ಲಾ ತಲೆಯಲ್ಲಿ ಮೆದುಳಿಲ್ಲದಂತೆ ಮಾತಾಡ್ತಿದ್ದಾರೆ. ಆದ್ರೆ ಡಿ ಗ್ಯಾಂಗ್‌ನಲ್ಲಿರುವವರೇ ದರ್ಶನ್‌ಗೆ ಉಲ್ಟಾ ಹೊಡೆದಿದ್ದಾರೆ. ಅಮಾಯಕನೊಬ್ಬನ ಹೆಣ ಹಾಕಿ ನನ್ನನ್ನ ಉಳಿಸಿ ಅಂತ ತನ್ನದೇ ಪಟಾಲಂಗೆ ಕೇಳಿಕೊಂಡಾಗ ತನ್ನದೇ ಹುಡುಗರು ಎಷ್ಟು ಕೊಡ್ತೀಯಾ ಅಂತ ಕೇಳಿದ್ದಾರೆ. ಇನ್ನೂ ಕೆಲವರಂತೂ ಆತ ಯಾರು ಅನ್ನೋದೇ ಗೊತ್ತಿಲ್ಲ ಅನ್ನೋ ಹೇಳಿಕೆಯನ್ನ ಕೊಟ್ಟಿದ್ದಾರೆ. ರೇಣುಕಾಸ್ವಾಮಿ(RenukaSwamy) ಹೇಗೆ ಚಿತ್ರದುರ್ಗದಿಂದ ಬೆಂಗಳೂರಿಗೆ(Bengaluru) ಬಂದ. ರಾಜರಾಜೇಶ್ವರಿ ನಗರದ ಶೆಡ್‌ಗೆ ಆತನನ್ನ ಕರೆತಂದವರು ಯಾರು ಎಂಬ ವಿಷಯ ಗೊತ್ತೆ ಇದೆ. ರೇಣುಕಾಸ್ವಾಮಿಯನ್ನ ಕೊಲ್ಲೋವರೆಗೂ ಬಾಸ್ ಬಾಸ್ ಅಂತ ಜೊತೆಯಲ್ಲಿದ್ದವರು , ದರ್ಶನ್ ಜೊತೆಯೇ ಸೇರಿ ಇನ್ನಿಲ್ಲದಂತೆ ರೇಣುಕಾ ಸ್ವಾಮಿಯ ಮೇಲೆ ಹಲ್ಲೆ(Attack) ಮಾಡಿದವರು.. ಅವನ ಪ್ರಾಣ ಹೋದ ನಂತರ ನನ್ನ ಬದಲು ಯಾರು ಜೈಲಿಗೆ ಹೋಗ್ತೀರಾ..? ನನ್ನನ್ನ ಕಾಪಾಡ್ರಯ್ಯ ಅಂದಾಗ ಮಾತ್ರ ಯಾರೊಬ್ಬರೂ ಸಹ ಮುಂದೆ ಬಂದಿರಲಿಲ್ಲ ಅನ್ನೋ ಸ್ಫೋಟಕ ಮಾಹಿತಿ ಸಿಕ್ಕಿದೆ. ಕೊಲೆಯಾದ ನಂತರ A5 ಆರೋಪಿಯಾಗಿರುವ ನಂದೀಶ್‌ಗೆ ತನ್ನ ಹುಡುಗರ ಜೊತೆ ಸರೆಂಡರ್ ಆಗಲು ಕೇಳಿಕೊಂಡಿದ್ದರಂತೆ ಆದ್ರೆ ಆತ ಮಾತ್ರ ಮುಂದೆ ಬಂದಿರಲಿಲ್ಲ. ನಂತರ ಏನು ಮಾಡೋದು ಅಂತ ಯೋಚಿಸುವಾಗಲೇ ಇದೇ ನಂದೀಶ್ ತನ್ನದೇ ಬಾಸ್ ಬಳಿ ಒಂದು ಆಫರ್ ಇಟ್ಟಿದ್ದನಂತೆ ದುಡ್ಡು ಕೊಟ್ಟರೆ ಕೆಲಸ ಆಗುತ್ತೆ ಅಂದಿದ್ದನಂತೆ. ಆಗ ದುಡ್ಡು ಅಂತ ಹೇಳ್ತಿದ್ದಂತೆ ಮುಂದೆ ಬಂದವರೇ ದೀಪಕ್, ಕೇಶವ್ ಮೂರ್ತಿ, ನಿಖಿಲ್ ನಾಯಕ್. ಕಾಸು ಕೊಟ್ರೆ ನಾವು ಸರೆಂಡರ್ ಆಗ್ತೀವಿ ಅಂತ ಮುಂದೆ ಬಂದವರೇ ಈ ಮೂರು ಜನ. ಇನ್ನೂ ಬೆಂಬಲಿಗರು ಅಂತ ಹೇಳಿಕೊಳ್ಳುವ ಇವರು ದುಡ್ಡು ಕೈ ಸೇರುವವರೆಗೂ ಮೃತದೇಹವನ್ನ ಮುಟ್ಟಿರಲಿಲ್ಲ. ಆಗ ವಿಧಿ ಇಲ್ಲದೇ  ದರ್ಶನ್ ದುಡ್ಡು ಅರೆಂಜ್ ಮಅಡಲು ಹೇಳಿದ್ದೇ ಎ10 ಆರೋಪಿ ವಿನಯ್‌ಗೆ. ಈ ವಿನಯ್ ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿಕ. ಆ ಮಧ್ಯರಾತ್ರಿಯಲ್ಲಿ 30 ಲಕ್ಷ ಅರೆಂಜ್ ಮಾಡಿಕೊಂಡು ತಂದು ದರ್ಶನ್ ಕೈಗೆ ಇಟ್ಟಿದ್ದ.

ಇದನ್ನೂ ವೀಕ್ಷಿಸಿ:  ಎಲ್ಲಾ ಬೆಲೆ ಜಾಸ್ತಿ ಮಾಡುವ ಮೂಲಕ ರಾಜ್ಯ ಸರ್ಕಾರ ದರೋಡೆ ಮಾಡಲು ಹೊರಟಿದೆ: ಆರ್‌. ಅಶೋಕ್‌

Video Top Stories