Asianet Suvarna News Asianet Suvarna News

ಆ ಒಂದು ವದಂತಿಯೇ ರೇಖಾ ಹತ್ಯೆಗೆ ಕಾರಣವಾಯ್ತಾ..?

Jun 29, 2021, 10:49 AM IST

ಬೆಂಗಳೂರು (ಜೂ. 29): ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್  ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಾಲಾ ಹಾಗೂ ಆಕೆಯ ಪುತ್ರ ಆರುಳ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಬೇರೆ ಬೇರೆ ಕಾರಣಗಳು ಹೊರ ಬಿದ್ದಿದೆ.

ರೇಖಾ ಹತ್ಯೆಗೆ 3 ತಿಂಗಳ ಹಿಂದೆಯೇ ನಡೆದಿತ್ತು ಸ್ಕೆಚ್, ಆರೋಪಿಗಳ ಪ್ಲ್ಯಾನ್ ಹೀಗಿತ್ತು

ಬೇರೆ ಕೇಸ್‌ನಲ್ಲಿ ಆರುಳ್ ಜೈಲು ಸೇರಿದ್ದ. ಆಗ ಮಾಲಾ, ರೇಖಾ ಬಳಿ ಪುತ್ರನ ಬಿಡುಗಡೆಗೆ ನೆರವು ಕೋರಿದ್ದಳು. ಆದರೆ ರೇಖಾ ನಿರಾಕರಿಸಿದ್ದರು. ಈ ವಿಚಾರ ತಿಳಿದ ಆರುಳ್, ರೇಖಾಳ ಹತ್ಯೆಗೆ ಜೈಲಿನಲ್ಲೇ ಸ್ಕೆಚ್ ಹಾಕಿದ್ದ. ಜೈಲಿನಿಂದ ಹೊರ ಬಂದ ಬಳಿಕ ಪೀಟರ್‌ಗೆ ಈ ವಿಚಾರ ಹೇಳಿ ಹತ್ಯೆಗೆ ಪ್ರಚೋದಿಸಿದ್ದ ಎನ್ನಲಾಗಿದೆ.