ರೇಖಾ ಹತ್ಯೆಗೆ 3 ತಿಂಗಳ ಹಿಂದೆಯೇ ನಡೆದಿತ್ತು ಸ್ಕೆಚ್, ಆರೋಪಿಗಳ ಪ್ಲ್ಯಾನ್ ಹೀಗಿತ್ತು
ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ರೇಖಾ ನಾದಿನಿ, ಮಾಲಾ ಹಾಗೂ ಅವರ ಪುತ್ರ ಹತ್ಯೆ ಹಿಂದಿರುವುದು ಪಶ್ಚಿಮ ವಿಭಾಗದ ಪೊಲೀಸರ ತನಿಖೆ ವೇಳೆ ಹೊರ ಬಂದಿದೆ.
ಬೆಂಗಳೂರು (ಜೂ. 28): ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ರೇಖಾ ನಾದಿನಿ, ಮಾಲಾ ಹಾಗೂ ಅವರ ಪುತ್ರ ಹತ್ಯೆ ಹಿಂದಿರುವುದು ಪಶ್ಚಿಮ ವಿಭಾಗದ ಪೊಲೀಸರ ತನಿಖೆ ವೇಳೆ ಹೊರ ಬಂದಿದೆ.
ರೇಖಾ ನನ್ನ ಮಗಳಿದ್ದಂತೆ, ನಾನ್ಯಾಕೆ ಕೊಲೆ ಮಾಡಿಸಲಿ; ಪೊಲೀಸರ ಮುಂದೆ ಮಾಲಾ ಹೈಡ್ರಾಮಾ
ರೇಖಾ ಹತ್ಯೆಗೆ ಆರೋಪಿಗಳು 3 ತಿಂಗಳ ಹಿಂದೆಯೇ ಸ್ಕೆಚ್ ರೂಪಿಸಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಪ್ರತಿಯೊಬ್ಬರೂ ಒಂದೊಂದು ಕೆಲಸ ಹಂಚಿಕೊಂಡಿದ್ದರು. ಸ್ಟೀಫನ್, ಸೂರ್ಯ, ರೇಖಾ ದಿನಚರಿ ಮೇಲೆ ನಿಗಾವಹಿಸಿದ್ದರೆ, ಪೀಟರ್,ಪುರುಷೋತ್ತಮ್ ಸಿಸಿ ಕ್ಯಾಮೆರಾ ಮೇಲೆ ಕಣ್ಣಿಟ್ಟಿದ್ದರು. ಅಜಯ್ ಕೃತ್ಯ ಎಸಗುವಾಗ ಯಾರೆಲ್ಲಾ ಸಹಾಯಕ್ಕೆ ಬರಬಹುದು ಎಂದು ಲೆಕ್ಕಾಚಾರ ಹಾಕಿದ್ದರಂತೆ.