Asianet Suvarna News Asianet Suvarna News

ಮೆಡಿಕಲ್ ಟೆಸ್ಟ್ ಬದಲು ಟೆಕ್ನಿಕಲ್ ಸೆಲ್‌ಗೆ ಯುವತಿ! ಯಾಕೆ ಈ ಬದಲಾವಣೆ?

ಮೆಡಿಕಲ್ ಟೆಸ್ಟ್ ಬದಲು ಟೆಕ್ನಿಕಲ್ ಸೆಲ್ ಕಡೆಗೆ ಸಂತ್ರಸ್ತೆಯನ್ನು ಕರೆದುಕೊಂಡು ಹೊರಟ ಅಧಿಕಾರಿಗಳು/ ಯುವತಿಯ ಹೇಳಿಕೆ  ಬಹಳ ಮುಖ್ಯವಾಗುತ್ತದೆ/ ಒಂದಾದ ಮೇಲೆ ಒಂದು ತಿರುವು ಪಡೆದುಕೊಳ್ಳುತಗ್ತಿರುವ ಪ್ರಕರಣ

ಬೆಂಗಳೂರು(ಮಾ.  30)  ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತನಿಖಾಧೀಕಾರಿಗಳು ಕೊನೆ  ಕ್ಷಣದಲ್ಲಿ ಬದಲಾವಣೆ ಮಾಡಿದ್ದು ಯುವತಿಯನ್ನು ಆಡುಗೋಡಿ ಟೆಕ್ನಿಕಲ್ ಸೆಲ್ ಕಡೆ ಕರೆದುಕೊಂಡು ಹೋಗಿದ್ದಾರೆ.

ರೇಪ್‌ ಕೇಸೋ? ಹನಿಟ್ರ್ಯಾಪೋ?  ಈ 5  ಪಾಯಿಂಟ್ಸ್‌ನಲ್ಲೇ ಇತ್ಯರ್ಥ!

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳು ಬಂದಿದ್ದವು.  ಇನ್ನು ಮುಂದೆ ಯಾವ ತಿರುವುಗಳು ಬರಲಿವೆ ಎನ್ನುವುದು ಸಹ ಸದ್ಯಕ್ಕೆ ಗೊತ್ತಾಗದ ಸಂಗತಿ.

Video Top Stories