Asianet Suvarna News Asianet Suvarna News

Raichur: ಅಕ್ಕರೆಯ ಅಣ್ಣನನ್ನು ಮಣ್ಣ ಅಡಿಗೆ ಹಾಕಿದ 'ಐ ಲವ್‌ ಯು' ಮೆಸೇಜ್‌!

ಆಕೆ ಪ್ರೀತಿಯ ತಂಗಿ. ಅಣ್ಣನ ಅನುಮತಿ ಇಲ್ಲದೆ ಏನನ್ನೂ ಮಾಡೋದಿಲ್ಲ. ಇಂಥದ್ದರಲ್ಲಿ ತಂಗಿಯ ಮೊಬೈಲ್‌ಗೆ ಅಣ್ಣನ ಸ್ನೇಹಿತನಿಂದಲೇ ಬಂದ ಒಂದೇ ಒಂದು ಮೆಸೇಜ್‌, ಅಕ್ಕರೆಯ ಅಣ್ಣನನ್ನು ಮಣ್ಣ ಅಡಿಗೆ ಹಾಕಿದೆ.

First Published Jun 28, 2023, 9:00 PM IST | Last Updated Jun 28, 2023, 9:00 PM IST

ರಾಯಚೂರು (ಜೂ.28): ತಂಗಿಯ ಮೊಬೈಲ್‌ಗೆ 'ಐ ಲವ್‌ ಯು' ಅಂತಾ ಮೆಸೇಜ್‌ ಬರ್ತಿತ್ತು. ನಿನ್ನ ಸ್ನೇಹಿತನಿಂದಲೇ ಈ ಮಸೇಜ್‌ ಬರ್ತಿದೆ ಅಂತಾ ತಂಗಿ ಅಣ್ಣನಿಗೆ ಹೇಳಿದ್ದೇ ಈಗ ಮುಳುವಾಗಿದೆ. ತನ್ನ ಸ್ನೇಹಿತನಲ್ಲಿ ಇದನ್ನು ಪ್ರಶ್ನಿಸಿ ಜಗಳವಾಡಿದ್ದ ಅಣ್ಣ ಇಂದು ಮಣ್ಣಿಗೆ ಸೇರಿದ್ದಾನೆ. ಆತನ ಗೆಳೆಯರೇ ಸೇರಿಕೊಂಡು ಅವನಿಗೆ ಚೂರಿ ಇರಿದಿದ್ದಾರೆ.

ಈ ಘಟನೆ ನಡೆದಿದ್ದು ರಾಯಚೂರಿನ ಮಸ್ಕಿಯ ಅಂಕುಶದೊಡ್ಡಿಯಲ್ಲಿ. ಮೃತ ವ್ಯಕ್ತಿ ದೇವರಾಜ 22 ವರ್ಷದ ಯುವಕ. ಲೈಂಗಿಕ ಕಿರುಕುಳ ವಿಚಾರದ ಬಗ್ಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು ಎನ್ನಲಾಗಿದೆ. ದೇವರಾಜನ ಸಹೋದರಿ ಅಕ್ಕಮ್ಮಳಿಗೆ ಅದೇ ಗ್ರಾಮದ ಬಸವರಾಜ ಎನ್ನುವ ಯುವಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಮದುವೆ ಮನೆಯಲ್ಲಿ ಸೂತಕ, ಪುತ್ರಿಯರ ವಿವಾಹಕ್ಕೆ ಓಡಾಡಿ ತಯಾರಿ ಮಾಡಿದ್ದ ಅಪ್ಪನೇ ಅಪಘಾತದಲ್ಲಿ ಸಾವು! 

ಈ ಬಸವರಾಜ ಹಾಗೂ ದೇವರಾಜ ಇಬ್ಬರೂ ಸ್ನೇಹಿತರು. ತಂಗಿಗೆ ಮೆಸೇಜ್‌ ಮಾಡುತ್ತಿದ್ದ ಬಗ್ಗೆ ದೇವರಾಜ ಎಚ್ಚರಿಕೆ ನೀಡಿದ ಬಳಿಕ, ಬಸವರಾಜ, ಅಕ್ಕಮ್ಮಳ ನಂಬರ್‌ ಅನ್ನು ತನ್ನ ಸ್ನೇಹಿತರಿಗೆ ಹಂಚಿದ್ದ ಇದರ ಬೆನ್ನಲ್ಲಿಯೇ ನಡೆದ ಗಲಾಟೆಯಲ್ಲಿ ದೇವರಾಜ ಸಾವು ಕಂಡಿದ್ದಾರೆ.