ನಿಗೂಢ ಕೆಲಸಕ್ಕೆ ಬೆಂಗಳೂರಿಗೆ ಹೊರಟಿದ್ದ ಯುವಕರು ಅರೆಸ್ಟ್‌: 42 ಅಕ್ರಮ ಸಿಮ್‌ ಕೊಂಡೊಯ್ಯುತ್ತಿದ್ದಾಗ ಕಾರ್ಯಾಚರಣೆ

42 ಅಕ್ರಮ ಸಿಮ್‌ ಪಡೆದು ಬೆಂಗಳೂರಿಗೆ ಕೊಂಡೊಯ್ಯುವಾಗ ಪೊಲೀಸರು ಕಾರ್ಯಾಚರಣೆ ನಡೆಸಿ, ಐವರನ್ನು ಬಂಧಿಸಿದ್ದಾರೆ.
 

First Published Feb 4, 2024, 12:43 PM IST | Last Updated Feb 4, 2024, 12:44 PM IST

ಮಂಗಳೂರು: ನಿಗೂಢ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವನ್ನು ಸೆರೆ ಹಿಡಿಯಲಾಗಿದೆ. 42 ಅಕ್ರಮ ಸಿಮ್(Illegal SIMs) ಪಡೆದು ಕೊಂಡೊಯ್ಯುವಾಗ ಪೊಲೀಸರು(Police) ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ(Dakshina Kannada) ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಸಿಮ್ ಸಮೇತ ಬಂಧಿಸಲಾಗಿದೆ. ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಸೆರೆ ಹಿಡಿಯಲಾಗಿದೆ. ಫೆ.1 ರಂದು ಪೊಲೀಸರು ಬಂಧಿಸಿದ್ದಾರೆ. ರಮೀಝ್(20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ(22) ಮೊಹಮ್ಮದ್ ಸಾಧಿಕ್ (27), ಮತ್ತೋರ್ವ 17 ವರ್ಷದ ಅಪ್ರಾಪ್ತ ಬಾಲಕನಾಗಿದ್ದಾನೆ. ಅಕ್ಬರ್ ಅಲಿ ದುಬೈನಲ್ಲಿ (Dubai)ಎರಡು ವರ್ಷ ಇದ್ದು ಕಳೆದ‌ ನಾಲ್ಕು ತಿಂಗಳ ಹಿಂದೆ ಊರಿಗೆ ಬಂದಿದ್ದಾನೆ. ದುಬೈ ನಲ್ಲಿ ಇದ್ದುಕೊಂಡೆ ಅಕ್ರಮ ಸಿಮ್ ಖರೀದಿ ಮಾಡಿಸಿದ್ದ. ಬೇರೆ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆಯ ಸಿಮ್ ಪಡೆದಿದ್ದ ತಂಡ. ವಿದೇಶದ ನಂಟಿರೋದ್ರಿಂದ ಆಳವಾದ ತನಿಖೆಗೆ ಪೊಲೀಸರು ಇಳಿದಿದ್ದಾರೆ.

ಇದನ್ನೂ ವೀಕ್ಷಿಸಿ:  Weekly-Horoscope: 12 ರಾಶಿಗಳ ವಾರದ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

Video Top Stories