Asianet Suvarna News Asianet Suvarna News

ರಾಮಮಂದಿರ ಸ್ಫೋಟಕ್ಕೆ PFI ಸಂಚು: ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಯಲು

PFI Had Plans To Blow Up Ram Mandir: ನಿಷೇಧಿತ ಪಿಎಫ್ಐ ಸಂಘಟನೆ  ಅಯೋಧ್ಯೆ ರಾಮಮಂದಿರನ್ನು ಸ್ಪೋಟಿಸಿ ಆ ಜಾಗದಲ್ಲಿ ಮತ್ತೆ ಬಾಬ್ರಿ ಮಸೀದಿ ನಿರ್ಮಿಸಲು ಸಂಚು ಮಾಡಿತ್ತು ಎಂಬ ಆಘಾತಕಾರಿಘತಿ ತನಿಖೆ ವೇಳೆ ಬಯಲಾಗಿದೆ
 

First Published Oct 20, 2022, 7:19 PM IST | Last Updated Oct 20, 2022, 7:19 PM IST

ನವದೆಹಲಿ (ಅ. 20):  ಇತ್ತೀಚೆಗೆ ಕೇಂದ್ರ ಸರ್ಕಾರ ಪಿಎಫ್ಐ ಉಗ್ರ ಸಂಘಟನೆಯ ನಡು ಮುರಿದು ಕೊನೇ ಮೊಳೆ ಜಡಿದಿದೆ. ಈಗ ತನಿಖಾ ಹಂತದಲ್ಲಿ ಪಿಎಫ್ಐನ ಮತ್ತೊಂದು ಮಹಾ ಸಂಚು ಬಯಲಾಗಿದೆ. ನಿಷೇಧಿತ ಪಿಎಫ್ಐ ಸಂಘಟನೆ  ಅಯೋಧ್ಯೆ ರಾಮಮಂದಿರನ್ನು ಸ್ಪೋಟಿಸಿ ಆ ಜಾಗದಲ್ಲಿ ಮತ್ತೆ ಬಾಬ್ರಿ ಮಸೀದಿ ನಿರ್ಮಿಸಲು ಸಂಚು ಮಾಡಿತ್ತು ಎಂಬ ಆಘಾತಕಾರಿ ಸಂಘತಿ ತನಿಖೆ ವೇಳೆ ಬಯಲಾಗಿದೆ.  ಮಹಾರಾಷ್ಟ್ರ ಉಗ್ರ ನಿಗ್ರಹ ದಳ ಈ ಭಯಾನಕ ಸಂಚನ್ನ ಬಯಲಿಗೆಳೆದಿದೆ.  ಆರೋಪಿಗಳ ವಿಚಾರಣೆ ನಡೆಸಿದಾಗ ಅಯೋಧ್ಯೆ ರಾಮಮಂದಿರದ ಸ್ಫೋಟದ ಸಂಚು ಬಯಲಾಗಿದೆ. ಇನ್ನು ಪಿಎಫ್ಐ ಉಗ್ರರು ರಾಮಮಂದಿರ ಧ್ವಂಸಕ್ಕಾಗಿ ವಾಟ್ಸಾಪ್ ಗ್ರೂಪ್ ರಚನೆ ಮಾಡಿಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿ ಕೂಡ ಬಯಲಾಗಿದೆ. ಈ ಕುರಿತ ಕಂಪ್ಲೀಟ್‌ ರಿಪೋರ್ಟ್‌ ಹಾಗು ಚರ್ಚೆ ಇಲ್ಲಿದೆ 

ರಾಮಮಂದಿರ ಸ್ಫೋಟಕ್ಕೆ PFI ಸಂಚು: ಹಿಂದೂಗಳನ್ನು ಹೆದರಿಸಿ ಕೂರಿಸುವ ಉದ್ದೇಶ: ಚಕ್ರವರ್ತಿ ಸೂಲಿಬೆಲೆ

Video Top Stories