Asianet Suvarna News Asianet Suvarna News

ಪವಿತ್ರಾಗೌಡ ಗೆಳತಿ ಸಮತಾ ಹಿನ್ನಲೆ ಕೇಳಿ ಪೊಲೀಸರೇ ಶಾಕ್..! ಪೋಸ್ಟ್ ಮಾರ್ಟಂನಲ್ಲೂ ದರ್ಶನ್‌ಗೆ ಸಹಾಯ ಮಾಡಲು ಯತ್ನ..?

ಪೋಸ್ಟ್ ಮಾರ್ಟಂನಲ್ಲಿ  ಡಾ.ಸುರೇಶ್ ಭಾಗಿಯಾಗಿದ್ದಾರಾ ಎಂದು ಚೆಕ್..!
ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ವಿಡಿಯೋ ಮಾಡಿಸಿದ್ದ ಪೊಲೀಸರು
ಪೋಸ್ಟ್ ಮಾರ್ಟಂ ಡಾ.ಸುರೇಶ್ ಭಾಗಿಯಾಗಿಲ್ಲ ಎಂದು ಪೊಲೀಸರು ಖಾತ್ರಿ
 

ನಟ ದರ್ಶನ್ (Darshan )ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಪವಿತ್ರಾಗೌಡ ಗೆಳತಿಗೆ ಸಮತಾಗೆ ಪೊಲೀಸರು (Police) ನೋಟಿಸ್ ನೀಡಿದ್ದಾರೆ. ಪವಿತ್ರಾಗೌಡ (Pavitra Gowda ) ಗೆಳತಿ ಸಮತಾ  ಹಿನ್ನೆಲೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ದರ್ಶನ್ , ಪವಿತ್ರಾಗೆ ಸಹಾಯ ಮಾಡುವ ಸಮತಾ ಯತ್ನಿಸಿದ್ದಾರೆ ಎನ್ನಲಾಗ್ತಿದೆ. ಪೋಸ್ಟ್ ಮಾರ್ಟಂನಲ್ಲೂ ದರ್ಶನ್‌ಗೆ ಸಹಾಯ ಮಾಡಲು ಯತ್ನಿಸಿದ್ದು, ಸಮತಾ (Samata) ಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿದ್ದಾರೆ. ಸಮತಾ ಪತಿ ವಿಕ್ಟೋರಿಯಾದಲ್ಲಿ ವೈದ್ಯ ಎಂದು ತಿಳಿದು ಪೊಲೀಸರು ಗಾಬರಿಯಾಗಿದ್ದಾರೆ. ಡಾ.ಸುರೇಶ್‌ರಿಂದ ಪೋಸ್ಟ್ ಮಾರ್ಟಂ ನಡೀತಾ ಎಂಬ ಅನುಮಾನ ಕಾಡಿದೆ. ಪವಿತ್ರಾಗೌಡರನ್ನ  ಜೈಲಿನಲ್ಲಿ ಭೇಟಿಯಾಗಿರುವ ಗೆಳತಿ ಸಮತಾ, ಸಮತಾ-ಪವಿತ್ರಾಳ ಸಂಪೂರ್ಣ ಹಿಸ್ಟರಿ ಕಲೆ ಹಾಕಿದ್ದಾರೆ. ಪವಿತ್ರಾ ಗೆಳತಿ ಸಮತಾಗೆ ಪೊಲೀಸರ ವಿಚಾರಣೆ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ಗೌಡರ ಮೊಮ್ಮಗನಿಗೆ ಪಟ್ಟ ಕಟ್ಟಲು ಪಕ್ಷದಿಂದ ಗ್ರೀನ್ ಸಿಗ್ನಲ್..? ರಾಷ್ಟ್ರ ರಾಜಕಾರಣಕ್ಕೆ ಅಪ್ಪ..ರಾಜ್ಯ ರಾಜಕಾರಣಕ್ಕೆ ಮಗ..!