Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಪವಿತ್ರಾ ಗೌಡ ಕಿರಿಕ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಮಹಿಳಾ ಸಿಬ್ಬಂದಿ ಜೊತೆ ಕಿರಿಕ್‌ ಮಾಡುತ್ತಿದ್ದಾರಂತೆ. ನನಗೆ ಮಲಗಲು ಮನೆಯ ಹೊದಿಕೆ ತರಿಸಿಕೊಡಿ ಅಂತ ಹೇಳುತ್ತಿದ್ದಾರಂತೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ(Pavitra Gowda) ಪರಪ್ಪನ ಅಗ್ರಹಾರ ಜೈಲಿನಲ್ಲಿ(Parappana agrahara jail) ಮಹಿಳಾ ಸಿಬ್ಬಂದಿ ಜೊತೆ ಕಿರಿಕ್ ಮಾಡುತ್ತಿದ್ದಾರಂತೆ. ಪವಿತ್ರಾಗೌಡಗೆ ಮಲಗಲು ಜೈಲಿನ ಹೊದಿಕೆಯನ್ನು ಜೈಲು ಸಿಬ್ಬಂದಿ(Jail staff) ನೀಡಿದ್ದಾರೆ. ಈ ವೇಳೆ ಗಲಾಟೆ ಮಾಡಿದ ಆರೋಪಿ ಪವಿತ್ರಾಗೌಡ, ನನಗೆ ಮಲಗಲು ಮನೆಯ ಹೊದಿಕೆ ತರಿಸಿಕೊಡಿ ಅಂತ ಕಿರಿಕ್ ಮಾಡಿದ್ದಾರಂತೆ. ನನಗೆ ಅದು ಬೇಕು ಇದು ಬೇಕು ಎಂದು ಸಣ್ಣಪುಟ್ಟ ವಿಚಾರಕ್ಕೆ ಹಠ ಮಾಡುತ್ತಿದ್ದಾರಂತೆ. ಜೈಲು ಊಟ ತಿನ್ನಲು ಕೂಡ ಪವಿತ್ರಾ ಗೌಡ ನಿರಾಕರಣೆ ಮಾಡಿದ್ದು, ಇದು ನಿಮ್ಮ ಮನೆಯಲ್ಲ, ಜೈಲು.. ಸುಮ್ಮನಿರಿ ಎಂದ ಜೈಲು ಸಿಬ್ಬಂದಿ ತಾಕೀತು ಮಾಡಿದ್ದಾರಂತೆ. 

ಇದನ್ನೂ ವೀಕ್ಷಿಸಿ:  ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಮುಕ್ತಾಯ: 15 ರೀತಿಯ ಟೆಸ್ಟ್ ಮಾಡಿ ಮುಗಿಸಿದ ವೈದ್ಯರು!