ಗ್ರಾಪಂ ರಾಜಕೀಯ; ಮಗುವಿನ ಶವ ಇಟ್ಟು ಪ್ರತಿಭಟನೆ, ತಾಯಿ ಜೈಲಿನಲ್ಲಿ

ಗ್ರಾಮ ಪಂಚಾಯತಿ ಚುನಾವಣಾ ರಾಜಕೀಯದಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಬಲಿ ಪ್ರಕರಣ/ ಬಾಲಕಿಯ ಶವದೊಂದಿಗೆ ಎಸ್ಪಿ ಕಛೇರಿ ಮುಂದೆ ಪ್ರತಿಭಟನೆಗೆ ಹೊರಟ ಪೋಷಕರು/ ಕಲಬುರಗಿ ಜಿಲ್ಲಾಸ್ಪತ್ರೆಯ ಮುಂದೆಯೇ ತಡೆದ ಪೊಲೀಸರು/ ಪ್ರತಿಭಟನೆಯಲ್ಲಿ ಭಾಗವಹಿಸಿದ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮತ್ತು ಕಾಂಗ್ರೆಸ್ ಮುಖಂಡರು

First Published Jan 3, 2021, 5:35 PM IST | Last Updated Jan 3, 2021, 5:42 PM IST

ಕಲಬುರಗಿ (ಜ. 03) ಗ್ರಾಮ ಪಂಚಾಯತಿ ಚುನಾವಣಾ ರಾಜಕೀಯದಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಬಲಿ ಪ್ರಕರಣ ಪ್ರತಿಧ್ವನಿಸಿದ್ದು  ಬಾಲಕಿಯ ಶವದೊಂದಿಗೆ ಎಸ್ಪಿ ಕಚೇರಿ ಮುಂದೆ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದರು.

ಟಿವಿ ಶೋ ಎಫೆಕ್ಟ್.. ಸ್ಕೂಲ್ ಟೈಮ್ ಸ್ವೀಟ್‌ಹಾರ್ಟ್ ಪಟಾಯಿಸಲು ಖತರ್‌ನಾಕ್ ಕೆಲಸ!

ಕಲಬುರಗಿ ಜಿಲ್ಲಾಸ್ಪತ್ರೆ ಎದುರು ಪೊಲೀಸರು ಅವರನ್ನು ತಡೆದಿದ್ದಾರೆ. ಪ್ರತಿಭಟನೆಯಲ್ಲಿ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮತ್ತು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ತಪ್ಪಿತಸ್ಥ ಜೇವರ್ಗಿ PSI ಅಮಾನತಿಗೆ ಶಾಸಕ ಅಜಯಸಿಂಗ್ ಆಗ್ರಹ ಮಾಡಿದರು. ಪಂಚಾಯಿತಿ ಚುನಾವಣೆ ಜಗಳದಲ್ಲಿ ಪೊಲೀಸರ ಹಲ್ಲೆಯಿಂದ ಮಗು ಸಾವಿಗೀಡಾಗಿದೆ ಎಂಬ ಆರೋಪ ಕೇಳಿಬಂದಿದೆ. ಒಂದೆಡೆ ಮಗುವಿನ ಶವ ನಡು ರಸ್ತೆಯಲ್ಲಿ ಇನ್ನೊಂದೆಡೆ ತಾಯಿ ಜೈಲಿನಲ್ಲಿದ್ದು ರಾಜಕೀಯದ ಇನ್ನೊಂದು ಮುಖವನ್ನು ತೆರೆದಿಟ್ಟಿದೆ.