ಟಿವಿ ಶೋ ಎಫೆಕ್ಟ್.. ಸ್ಕೂಲ್ ಟೈಮ್ ಸ್ವೀಟ್‌ಹಾರ್ಟ್ ಪಟಾಯಿಸಲು ಖತರ್‌ನಾಕ್ ಕೆಲಸ!
ಅಕ್ಕನ ಗೆಳತಿ ಹೆಸರಿನಲ್ಲಿ ನಕಲಿ ಇಸ್ಟಾ ಪ್ರೊಫೈಲ್/ ಸ್ನೇಹ ಸಂಪಾದಿಸಿಕೊಳ್ಳಲು ಖತರ್ ನಾಕ್ ಪ್ಲಾನ್/ ಅಕ್ಕಂದಿರಿಗೆ ತಿರುಚಿದ ಪೋಟೋ ಕಳಿಸಿದ/ ತನ್ನ ಬಳಿಯೇ ಸಹಾಯಕ್ಕೆ ಬರುತ್ತಾರೆ ಎಂದು ನಂಬಿದ ಐಟಿ ವಿದ್ಯಾರ್ಥಿ
ಸೂರತ್(ಜ. 03) ಇದೊಂದು ವಿಚಿತ್ರ ಪ್ರಕರಣ. ಟಿವಿ ಶೋ ದಿಂದ ಪ್ರೇರಿತನಾದ 18 ವರ್ಷದ ಬಿಎಸ್ಸಿ ಐಟಿ ವಿದ್ಯಾರ್ಥಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಕ್ಕಂದಿರಿಗೆ ಕಿರುಕುಳ ನೀಡಿದ್ದಾನೆ
ತನ್ನ ಕಿರಿಯ ಸಹೋದರಿ ಇದರಿಂದ ತನಗೆ ಮತ್ತಷ್ಟು ಹತ್ತಿರವಾಗುತ್ತಾಳೆ. ಆ ಮೂಲಕ ಆಕೆಯ ಗೆಳತಿಯ ಸ್ನೇಹವನ್ನು ಸಂಪಾದಿಸಬಹುದು. ಒಂದು ಕಾಲದಲ್ಲಿ ಸಹಾಠೀಯಾಗಿದ್ದ ಆಕೆ ದೂರವಾಗಿದ್ದು ಹತ್ತಿರವಾಗುತ್ತಾಳೆ ಎಂದು ನಂಬಿ ಕೆಲಸ ಮಾಡಿದ್ದು ಉಲ್ಟಾ ಹೊಡೆದಿದೆ. ಮಾಡಿಕೊಂಡ ಕೆಲಸಕ್ಕೆ ಪೊಲೀಸರ ಆತಿಥ್ಯ ಸ್ವೀಕರಿಸಬೇಕಾಗಿ ಬಂದಿದೆ.
ಆರೋಪಿ ಸುಮಿತ್ ಅಘೇರಾ ಎಂದು ಮೂರು ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳನ್ನು ರಚಿಸಿ ಆತನ ಹಿರಿಯ ಅಕ್ಕ ಕರಿಷ್ಮಾ ಗೆಳತಿ ಕಿಂಜಾಲ್ ರ ತಿರುಚಿತ ಪೋಟೋಗಳನ್ನು ಬಳಕೆ ಮಾಡಿದ್ದಾನೆ. ( ಹೆಸರುಗಳನ್ನು ಬದಲಾಯಿಸಲಾಗಿದೆ) ಅಕ್ಕನ ಗೆಳತಿಯ ಹೆಸರಿಲ್ಲೇ ಖಾತೆ ಮಾಡಿ ಅದರಿಂದ ತನ್ನ ಅಕ್ಕಂದಿರಿಗೆ ಪೋಟೋ ಕಳಿಸಿದ್ದಾನೆ. ಅಲ್ಲದೇ ಇದನ್ನು ಎಲ್ಲಿಯಾದರೂ ಕಡೆ ಹೇಳಿದರೆ ನಿಮ್ಮ ಪೋಟೋವನ್ನು ಶೇರ್ ಮಾಡುತ್ತೇನೆ ಎಂದು ಭಯಬೀಳಿಸಿಸಿದ್ದಾನೆ
ಸಿಕ್ತು ಅಂಥ ಆನ್ ಲೈನ್ ಸಾಲ ಮಾಡಿಕೊಂಡ್ರೆ ಬಾಳು ಬರ್ಬಾದ್
ತಾನು ಐಟಿ ವಿದ್ಯಾರ್ಥಿಯಾಗಿರುವುದರಿಂದ ಸಹೋದರಿಯರು ಮತ್ತು ಆಕೆಯ ಗೆಳತಿ ಸಹಾಯಕ್ಕಾಗಿ ತನ್ನ ಬಳಿಯೇ ಬರುತ್ತಾರೆ ಎಂದು ಭಾವಿಸಿದ್ದಾನೆ. ಆದರೆ ಸಹೋದರಿಯರು ಪೊಲೀಸರ ಬಳೀ ತೆರಳಿ ದೂರು ನೀಡಿದ್ದಾರೆ. ಮಾಹಿತಿ ಕಲೆ ಹಾಕಿದಾಗ ತಮ್ಮನೆ ಸಿಕ್ಕಿಬಿದ್ದಿದ್ದಾನೆ.
ಅಕ್ಕ ಮತ್ತು ತಂಗಿ ನನ್ನ ಬಳಿ ಸಹಾಯ ಕೇಳಿಕೊಂಡು ಬಂದರೆ ಆಕೆಯ ಗೆಳತಿಯೂ ಬರುತ್ತಾರೆ. ಆಗ ಸ್ನೇಹ ಸಂಪಾದನೆ ಮಾಡಿಕೊಳ್ಳಬಹುದು ಎಂದು ಮಾಡಿಕೊಂಡಿದ್ದ ಪ್ಲಾನ್ ಉಲ್ಟಾ ಹೊಡೆದಿದೆ.