ಇದು ಲವ್ ಜಿಹಾದ್ ಕರಿನೆರಳು ಎಂದಿದ್ದೇಕೆ ಬಿಜೆಪಿ ? ಫಯಾಜ್-ನೇಹಾ ಮಧ್ಯೆ ಪ್ರೀತಿ-ಸಲುಗೆ ಇದ್ದದ್ದು ನಿಜನಾ ?
ಬಿಜೆಪಿ ಆರೋಪಗಳನ್ನೆಲ್ಲ ನಯವಾಗಿ ತಿರಸ್ಕರಿಸಿದ ಸಿಎಂ ಸಿದ್ದು
ನೇಹಾ ಹಿರೇಮಠ ಕುಟುಂಬ ಬೆಂಬಲಕ್ಕೆ ಇಂತ ಮಠಾಧೀಶರು
ನೇಹಾ ಹತ್ಯೆಯನ್ನು ರಾಜಕೀಯ ಅಸ್ತ್ರವನ್ನಾಗಿಕೊಳ್ಳಲಾಯ್ತಾ?
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ(Neha hiremath) ಎಂಬ ಯುವತಿ ಕೊಲೆಯಾಗಿದೆ(Murder). ಫಯಾಜ್(Fayaz) ಎಂಬ ದುಷ್ಕರ್ಮಿ ಚಾಕುವಿನಿಂದ 9 ಬಾರಿ ಚುಚ್ಚಿ ಚುಚ್ಚಿ ಕೊಲೆಯಾಗೈದಿದ್ದಾನೆ. ನೇಹಾ ಮರ್ಡರ್ ಈಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಇಬ್ಬರ ಮಧ್ಯೆ ಪ್ರೀತಿ ಇತ್ತೆಂದು ಹೇಳಲಾಗುತ್ತಿದೆ. ಪ್ರೀತಿ ನಿರಾಖರಿಸಿದ್ದಕ್ಕಾಗಿ ಕುಪಿತಗೊಂಡು ಕೊಲೆಗೈದಿದ್ದಾನೆಂದು ಹೇಳಲಾಗುತ್ತಿದೆ. ಹಾಗೆನೇ ಇದು ನೂರಕ್ಕೆ ನೂರರಷ್ಟು ಲವ್ ಜಿಹಾದ್ ಎಂದು ಹೇಳಲಾಗುತ್ತಿದೆ. ನೇಹಾ ಹಿರೇಮಠ ಕೊಲೆಗೆ(Neha murder case) ಕಾರಣವೇನು ಅನ್ನೋದು ತಿನಿಖೆಯಿಂದ ತಿಳಿಯಬೇಕು. ಆದ್ರೆ ಇದರ ಮಧ್ಯೆ ನೇಹಾ ಕೊಲೆ ಪ್ರಕರಣ ತೀವ್ರವಾದ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣಾ ಸಂದರ್ಭ. ಎಲ್ಲ ಕಡೆ ಲೋಕಸಭಾ ರಂಗು ಜೋರಾಗಿದೆ. ರಾಜ್ಯದಲ್ಲೂ ಲೋಕ ಕಾಳಗ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಏಪ್ರಿಲ್ 26 ರಂದು ದಕ್ಷಿಣ ಕರ್ನಾಟಕದಲ್ಲಿ ಮೊದಲನೇ ಹಂತದ ಚುನಾವಣೆ ನಡೆಯಲಿದೆ. ಮೇ 7 ರಂದು ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆದ ನೇಹಾ ಮರ್ಡರ್ ಕೇಸ್ ತೀವ್ರ ಸ್ವರೂಪದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ, ಕೊಲೆಯಾ ವಿದ್ಯಾರ್ಥಿನಿ ನೇಹಾ ಹಿರೇಮಠ ಆದ್ರೆ ಕೊಲೆಗೈದ ಪಾಪಿ ಫಯಾಜ್. ಈ ಕಾರಣಕ್ಕಾಗಿ ಈ ಮರ್ಡರ್ ಕೇಸ್ ರಾಜಕೀಯ ಸ್ವರೂಪ ಪಡೆದಿದೆ.
ಇದನ್ನೂ ವೀಕ್ಷಿಸಿ: Double Murder: 25 ವರ್ಷದ ಯುವತಿ..46 ವರ್ಷದ ಅಂಕಲ್..!ಲವ್ವರ್ಸ್ ಡೆಡ್..ಅಮ್ಮ ಇನ್ ಜೈಲ್..!