Bengaluru Murder: ಕೊಲ್ಲಲು ಬಂದವನೇ ಕೊಲೆಯಾಗಿ ಹೋದ..! ವಾರ್ನ್‌ ಮಾಡಲು ಹೋಗಿದ್ದೇ ತಪ್ಪಾಯ್ತಾ ?

ನಸುಕಿನ ಜಾವ ನಡುರಸ್ತೆಯಲ್ಲಿ ನಡೆದಿತ್ತು ಮರ್ಡರ್
ಜೈಲಿನಿಂದ ರಿಲೀಸ್ ಆಗಿದ್ದವನ ಬರ್ಬರವಾಗಿ ಕೊಲೆ
ಬೆಳಗಿನ ಜಾವ ಕಾಲ್ ಮಾಡಿ ಹೊರಗೆ ಕರೆಸಿಕೊಂಡಿದ್ದ..!

First Published Mar 1, 2024, 4:42 PM IST | Last Updated Mar 1, 2024, 4:43 PM IST

ಬೆಂಗಳೂರು ಭೂಗತ ಜಗತ್ತು ಸದ್ಯ ಸೈಲೆಂಟ್ ಆಗಿದ್ರೂ ಆಗ್ಗಾಗೆ ಸದ್ದು ಮಡುತ್ತಲೇ ಇರುತ್ತೆ. ಆದರೆ ಬೆಂಗಳೂರು(Bengaluru) ಪೊಲೀಸರು ಯಾವುದೇ ಕ್ರಿಮಿನಲ್ ಎಲಿಮೆಂಟ್ಸ್ ಬಾಲ ಬಿಚ್ಚೋಕೆ ಬಿಡೋದಿಲ್ಲ. ಇದನ್ನ ಅರಿತ ಎಷ್ಟೋ ಪಂಟರ್‌ಗಳು ಊರು ಬಿಟ್ಟಿದ್ದಾರೆ. ಆದರೆ ಈಗ ಬೆಂಗಳೂರು ಔಟ್ಸ್ಕಟ್ಸ್ನಲ್ಲಿ ಈ ರೌಡಿಗಳ ಹಾವಳಿ ಹೆಚ್ಚಾಗಿಬಿಟ್ಟಿದೆ. ಪರಿಣಾಮ ಸಾಲು ಸಾಲು ಮರ್ಡರ್(Murder) ಕೇಸ್‌ಗಳು, ರೌಡಿ ಶೀಟರ್‌ಗಳ(Rowdy sheeter) ಆಟಾಟೋಪ ದಾಖಲಾಗ್ತಿದೆ. ಮೆಂಟಲ್ ಮಂಜ ಇತ್ತಿಚೆಗಷ್ಟೇ ಜೈಲಿನಿಂದ ಹೊರಬಂದಿದ್ದ. ಹೊರಬಂದವನೇ ತನ್ನ ಕೇಸ್ನ ಸಾಕ್ಷಿಗೆ ಬೆದರಿಕೆ ಹಾಕಲು ಹೋಗಿದ್ದಾನೆ. ಆದ್ರೆ ಆವಾಜ್ ಹಾಕಲು ಹೋದವನೇ ಇಲ್ಲಿ ಮರ್ಡರ್ ಆಗಿಬಿಟ್ಟಿದ್ದಾನೆ. ಹಳೆ ಪ್ರಕರಣದಲ್ಲಿ ಸಾಕ್ಷಿ ಹೇಳಿದ ಎನ್ನುವ ಒಂದೇ ಕಾರಣಕ್ಕೆ  ಮಾರಕಸ್ತ್ರಗಳಿಂದ ಹಲ್ಲೆ ಮಾಡಲು ಹೋಗಿ ತಾನೇ ಹೆಣವಾಗಿ ಹೋಗಿದ್ದಾನೆ.. ಇನ್ನೂ ಇದೇ ಆನೇಕಲ್‌ನಲ್ಲಿ ಮೊನ್ನೆ ಹಳೆ ದ್ವೇಷಕ್ಕೆ ಮತ್ತೊಂದು ಹೆಣ ಬಿದ್ದಿದೆ. ಅಣ್ಣನನ್ನ ಕೊಂದವನನ್ನ ಕೊಂದು ರಿವೇಂಜ್ ತೆಗೆದುಕೊಂಡಿದ್ದಾನೆ.

ಇದನ್ನೂ ವೀಕ್ಷಿಸಿ:  ಪಾಕಿಸ್ತಾನದಿಂದ ಐಸಿಸ್ ಉಗ್ರ ಹೇಗೆಲ್ಲಾ ಪ್ಲಾನ್ ಮಾಡಿದ್ದ ಗೊತ್ತಾ? ಎನ್ಐಎ ತನಿಖೆಯಲ್ಲಿ ಬಯಲಾಯ್ತು ಕ್ರಿಮಿಯ ಅಸಲಿ ಸಂಚು..!

Video Top Stories