ದೇವಿಮನೆ ಘಟ್ಟದಲ್ಲಿ ಬಿದ್ದಿತ್ತು ಹೆಣ..! ಜೇಬಿನಲ್ಲಿದ್ದ ಬಸ್ ಟಿಕೆಟ್ ಕೊಟ್ಟಿತ್ತು ಸುಳಿವು..!

ಅವಳಿಗೆ ಗಂಡನಿಗಿಂತ ಪ್ರಿಯಕರನೇ ಹೆಚ್ಚಾಗಿದ್ದ..!
ಅವನ ಹೆಣ ಹಾಕಲು ಮಂಗಳೂರಿಗೆ ಕರೆದೊಯ್ದ..!
ಕೊಲೆ ಮಾಡಿ ಏನೂ ಗೊತ್ತಿಲ್ಲದಂತೆ ಊರು ಸೇರಿದ್ರು..!

First Published Oct 7, 2023, 11:34 AM IST | Last Updated Oct 7, 2023, 11:34 AM IST

ಅದು ಮಾಸ್ತಿಮನೆ ಕ್ಷೇತ್ರಪಾಲನ ಪವಿತ್ರ ಸ್ಥಳ ‘ದೇವಿಮನೆ ಘಟ್ಟ’. ಇದೇ ಘಟ್ಟದಲ್ಲಿ ಆವತ್ತು ಅನಾಥ ಶವವೊಂದು (Dead body)ಪತ್ತೆಯಾಗಿತ್ತು. ಯಾರೋ ಅವನನ್ನ ಕೊಲೆ(Murder) ಮಾಡಿ ಹೋಗಿದ್ರು.. ಆದ್ರೆ ತನಿಖೆ ನಡೆಸಿದ ಪೊಲೀಸರಿಗೆ ಸತ್ತವನ ಜೇಬಿನಲ್ಲಿ ಬಸ್ ಟಿಕೆಟೊಂದು ಸಿಕ್ಕಿತ್ತು.. ಆ ಟಿಕೆಟ್ ಕೊಲೆಯಾದವನ ಪೂರ್ವಪರ ಹೇಳಿತ್ತು. ಅಷ್ಟೇ ಅಲ್ಲ ಅದೇ ಟಿಕೆಟ್(Bus ticket) ಪೊಲೀಸರನ್ನ(police) ಕೊಲೆಗಾರರ ಮುಂದೆ ತಂದು ನಿಲ್ಲಿಸಿತ್ತು. ಜೊತೆಯಲ್ಲಿ ಪ್ರಯಾಣಿಸಿದ್ದ ಪರಶುರಾಮನೇ ಸ್ನೇಹಿತ ಬಶೀರ್ನ ಹೆಣ ಹಾಕಿರುತ್ತಾನೆ. ಬಶೀರ್ ಜೇಬಿನಲ್ಲಿ ಸಿಕ್ಕ ಟಿಕೆಟ್ ಕೊಲೆಗಾರನನ್ನ ಜೈಲಿಗೆ ಕಳಿಸುವಂತೆ ಮಾಡುತ್ತೆ. ಪ್ರಿಯಕರನಿಗಾಗಿ ಗಂಡನನ್ನ ಮುಗಿಸಲು ರಾಜ್ಮಾ ನಿರ್ಧರಿಸಿಬಿಡ್ತಾಳೆ. ಇದಕ್ಕಾಗಿ ಪರಶುರಾಮನ ಜೊತೆ ಕೂತು ಒಂದು ಸ್ಕೆಚ್ ರೆಡಿ ಮಾಡ್ತಾಳೆ. ಪಕ್ಕಾ ಪ್ಲಾನ್ ಮಾಡಿ ಪ್ರಿಯಕರನಿಗೆ 10 ಸಾವಿರ ಕೊಟ್ಟು ಗಂಡನನ್ನ(Husband) ಮುಗಿಸಿ ಬಾ ಅಂತ ಕಳುಹಿಸುತ್ತಾಳೆ. ಗಂಡನನ್ನ ಮುಗಿಸಲು ತಯಾರಾಗೋ ರಾಜ್ಮಾ, ಪರಶುರಾಮನಿಗೆ 10 ಸಾವಿರ ಕೊಟ್ಟು ಕಳುಹಿಸುತ್ತಾಳೆ. ಇನ್ನೂ ಸ್ನೇಹಿತನ ಹೆಣ ಹಾಕಲು ನಿರ್ಧರಿಸೋ ಪರಶುರಾಮ ಬಶೀರ್ಗೆ ಕಾಲ್ ಮಾಡಿ ಮಂಗಳೂರಿಗೆ ಹೋಗಿ ಮಜಾ ಮಾಡಿ ಬರೋಣ ಬಾ ಅಂತ ಕರೆಯುತ್ತಾನೆ. ಬಶೀರ ಹಿಂದೆ ಮುಂದೆ ನೋಡದೇ ಅವನ ಜೊತೆ ಬಸ್ ಹತ್ತೇಬಿಡ್ತಾನೆ. ಆದ್ರೆ ವಾಪಸ್ ಬರುವಾಗ ಎಣ್ಣೆ ಪಾರ್ಟಿ ಮಾಡೋಣ ಅಂತ ಹೇಳಿ ಇದೇ ದೇವಿಮನೆ ಘಟ್ಟಕ್ಕೆ ಹೋಗ್ತಾರೆ. ಬಶೀರನಿಗೆ ಚೆನ್ನಾಗಿ ಕುಡಿಸಿ ನಂತರ ಅವನ ಕಥೆ ಮುಗಿಸುತ್ತಾನೆ.

ಇದನ್ನೂ ವೀಕ್ಷಿಸಿ:  ಬಿಸಿಲನಾಡ ಅಕ್ಕಿಗೂ ತಟ್ಟಿದ ‘ಬರ’ದ ಬಿಸಿ: ಭತ್ತದ ಇಳುವರಿ ಕುಂಠಿತ..ದುಬಾರಿಯಾಗುತ್ತಾ ಅಕ್ಕಿ..?