Chikkamagaluru Crime: ಒಂದೇ ಗ್ಲಾಸ್‌ನಲ್ಲಿ ಕುಡಿದು ಮೂಟೆ ಕಟ್ಟಿಬಿಟ್ಟರು..! ಕೊಲೆಯಾದವನ ಅಜ್ಜ ಕೊಟ್ಟಿದ್ದ ಸುಳಿವು..!

ಅವನು ಕುಡಿಸಿದ ಎಣ್ಣೆ ಕುಡಿದು ಅವನನ್ನೇ ಮುಗಿಸಿಬಿಟ್ಟರು..!
ಫೋನ್‌ನಲ್ಲಿ ಆಡಿದ ಒಂದು ಮಾತೇ ಅವನ ಪ್ರಾಣ ತೆಗೆದಿತ್ತು..!
ಒಂದೇ ಗ್ಲಾಸ್‌ನಲ್ಲಿ ಕುಡಿದು ದರ್ಶನ್‌ ಮೂಟೆ ಕಟ್ಟಿಬಿಟ್ಟರು..! 

First Published Feb 20, 2024, 6:13 PM IST | Last Updated Feb 20, 2024, 6:13 PM IST

ಅವನು ಕ್ಯಾಬ್ ಡ್ರೈವರ್.. ಓದೋದು ಬಿಟ್ಟು ಮನೆಗೆ ನೆರವಾಗಲಿ ಅಂತ ಬೆಂಗಳೂರಿಗೆ ಹೋಗಿ ಬಾಡಿಗೆಗೆ ಕ್ಯಾಬ್ ತೆಗೆದುಕೊಂಡು ಅಲ್ಪ ಸ್ವಲ್ಪ ದುಡಿಯುತ್ತಿದ್ದ. ಆದ್ರೆ ಆವತ್ತೊಂದು ದಿನ ಊರಿಗೆ ಅಂತ ತನ್ನೂರಿಗೆ ಹೋದಾಗ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಊರಾಚೆ ಅವನ ಹೆಣ ಬಿದ್ದಿತ್ತು. ಇನ್ನೂ ಈ ಕೊಲೆ ಕೇಸ್‌ನ ತನಿಖೆ ನಡೆಸಿದ ಪೊಲೀಸರಿಗೆ(Police) ಕೊಲೆಗಾರರ ಜಾಡು ಹಿಡಿಯೋದು ಅಷ್ಟು ಸುಲಭದ್ದಾಗಿರಲಿಲ್ಲ. ಆದ್ರೆ ಮರ್ಡರ್ ಆಗಿ ಎರಡೇ ದಿನಕ್ಕೆ ಹಂತಕರ ಹೆಡೆಮುರಿ ಕಟ್ಟಿದ್ರು ಪೊಲೀಸರು. ಜೊತೆಯಲ್ಲಿದ್ದವರೇ ದರ್ಶನ್‌ನ ಕಥೆ ಮುಗಿಸಿದ್ರು. ತಿಂಗಳುಗಳ ಕಾಲ ಜೊತೆಯಲ್ಲಿದ್ದುಕೊಂಡು ಊಟ ಎಣ್ಣೆ ಎಲ್ಲವನ್ನ ಕೊಡಿಸಿದ್ದ ದರ್ಶನ್ನನ್ನೇ ಆತನ ಸ್ನೇಹಿತರು ಕೊಂದು ಬಿಟ್ಟಿದ್ದರು. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ(Bengaluru) ಬಂದ ದರ್ಶನ್ಗೆ ಪರಿಚಯವಾದವರೆಲ್ಲಾ ಪುಡಿ ರೌಡಿಗಳೇ. ಸಣ್ಣ ಪುಟ್ಟ ಗಲಾಟೆ ಮಾಡಿಕೊಂಡು ಪೊಲೀಸರಿಂದ ಒದೆ ತಿಂದವರು ದರ್ಶನ್ ಗೆಳೆಯರಾದ್ರು. ಇನ್ನೂ ಅವರ ಸಹವಾಸದ ದೋಷದಿಂದ ದರ್ಶನ್ ಒಮ್ಮೆ ಜೈಲಿಗೂ ಹೋಗಿ ಬಂದಿದ್ದ. ಅದ್ರೆ ನಂತರ ಕೂಡ ಆ ಸ್ನೇಹಿತರ ಸಹವಾಸ ಬಿಟ್ಟಿರಲಿಲ್ಲ. ಜೊತೆಗೇ ಹಾಕೊಂಡು ಊರಿಗೂ ಹೋಗಿ ತಿಂಗಳು ಗಟ್ಟಲೆ ಅವರಿಗೆಲ್ಲಾ ಕುಡಿಸಿ ತನ್ನಿಸೋದು ಮಾಡ್ತಿದ್ದ. ನಾಲ್ಕೈದು ವರ್ಷಗಳಿಂದ ಜೊತೆಗಿದ್ದ ಸ್ನೇಹಿತನನ್ನ , ಜೊತೆಗಿದ್ದವರೇ ಕೊಂದು ಮುಗಿಸಿದ್ದಾರೆ. ಇಷ್ಟು ವರ್ಷ ಮಾತು ಬಿಟ್ಟು ಮಗನಿಂದ ದೂರವಿದ್ರೂ ಮಗ ಸರಿಯಾದ ದಾರಿಗೆ ಬರದೇ ಮಗನ ಜೊತೆ ಮಾತನಾಡಲಿಲ್ಲ ಎಂಬ ನೋವು ತಾಯಿಯದ್ದು.

ಇದನ್ನೂ ವೀಕ್ಷಿಸಿ:  Mamata Banerjee: ಹಿಂದೂ ಮಹಿಳೆಯರೇ ಈತನ ಟಾರ್ಗೆಟ್..! ರಾಜಾರೋಷವಾಗಿ ಕಿಡ್ನಾಪ್..ನಿರಂತರ ಅತ್ಯಾಚಾರ..!

 

Video Top Stories