Asianet Suvarna News Asianet Suvarna News

ಹುಡುಗಿ ನೋಡು ಬಾ ಎಂದು ಕರೆಸಿ ಮುಗಿಸಿಬಿಟ್ಟರು..! ತಂಗಿಯನ್ನ ಲವ್ ಮಾಡಿದ್ದಕ್ಕೇ ಕೊಂದುಬಿಟ್ಟರಾ..?

ಅವನನ್ನ ಕೊಲ್ಲಲ್ಲೆಂದೇ ಅವರು ಕಾದು ಕುಳಿತಿದ್ದರು..!
ನಿಮ್ಮನ್ನ ಒಂದು ಮಾಡ್ತೀವಿ ಅಂತ ಕರೆಸಿಕೊಂಡರು..!
ತಂಗಿಯನ್ನ ಲವ್ ಮಾಡಿದಕ್ಕೇ ಕೊಂದುಬಿಟ್ಟರಾ..?

First Published Mar 22, 2024, 4:55 PM IST | Last Updated Mar 22, 2024, 5:16 PM IST

ಅವರಿಬ್ಬರು ಪ್ರೇಮ ಲೋಕದ ಪ್ರಣಯ ಪಕ್ಷಿಗಳು. ಮೊದಲೇ ಸಂಬಂಧಿಕರಾಗಿದ್ದರಿಂದ ಒಬ್ಬರನ್ನೊಬ್ಬರು ಚೆನ್ನಾಗಿ ಅರೆತ್ತಿದ್ದರು. 2 ವರ್ಷದಿಂದ ಲವ್‌ನಲ್ಲೂ ಇದ್ದರೂ. ಆದ್ರೆ ಆವತ್ತೊಂದು ದಿನ ಇವರಿಬ್ಬರ ಪ್ರೀತಿಯ (Love) ವಿಷಯ ಹುಡುಗಿ ಮನೆಯವರಿಗೆ ಗೊತ್ತಾಗಿಬಿಟ್ಟಿತ್ತಷ್ಟೇ. ರಾಜಿ ಪಂಚಾಯ್ತಿ ಮಾಡಿ ಬಗೆ ಹರಿಸುವ ಅಂತ ಬಂದವರು ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿದ್ರು. ಆದ್ರೆ ಆ ರಾಜಿ ನಡೆದು ಮಾರನೇ ದಿನವೇ ಆ ಹುಡುಗ ಹೆಣವಾಗಿದ್ದ. ಆತನನ್ನ ಹಂತಕರು ಕೊಂದು ಬೆಂಕಿ ಹಾಕಿ ಸುಟ್ಟಿಬಿಟ್ಟಿದ್ರು. ಈ ಮೂಲಕ ಪ್ರೀತಿಸಿದವಳನ್ನ ಮದುವೆಯಾಗುವ ಕನಸು ಕಂಡಿದ್ದವನು ಹೆಣವಾಗಿದ್ದ.ಇಬ್ಬರೂ ಸಂಬಂಧಿಕರು.. ಜಾತಿ ಸಮಸ್ಯೆ ಬರೋದಿಲ್ಲ., ಎಲ್ಲವೂ ಸುಸೂತ್ರವಾಗಿ ನಡೆದು ಹೋಗುತ್ತೆ ಅಂತ ಆ ಪ್ರೇಮಿಗಳು ಅಂದುಕೊಂಡಿದ್ರು. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಮಗಳ ಲವ್ ಸ್ಟೋರಿ ತಿಳಿದ ನಂತರ ಅಂಕಿತ ಮನೆಯಲ್ಲಿ ಅಲ್ಲೋಲಕಲ್ಲೋಲವಾಗಿಬಿಡುತ್ತೆ. ಇನ್ನೂ ಅಂಕಿತ ಅಣ್ಣ ಅಂತೂ ವೀರೇಶನ ಹೆಣ ಹಾಕೋದಕ್ಕೆ ರೆಡಿಯಾಗಿ ನಿಂತು ಬಿಡ್ತಾನೆ. ವೀರೇಶ ಮತ್ತು ಅಂಕಿತಾ ಲವ್ ಸ್ಟೋರಿ ಹೆತ್ತವರಿಗೆ ಗೊತ್ತಾದಮೇಲೆ ರಾಜಿ ಪಂಚಾಯ್ತಿ ಮಾಡಲು ಮುಂದಾಗ್ತಾರೆ.. ಆ ಪಂಚಾಯ್ತಿಯಲ್ಲಿ ಅಂಕಿತ ಕುಟುಂಬಸ್ಥರು ಮೊದಲು ವೈಲೆಂಟ್ ಆದ್ರೂ ನಂತರ ನೈಸಾಗಿ 6 ತಿಂಗಳವರೆಗೆ ಮದುವೆ(Marriage) ಬಗ್ಗೆ ಮಾತನ್ನಾಡೋದು ಬೇಡ.. ನಂತರ ನೋಡೋಣ ಅಂತ ಹೇಳಿ ಬಂದಿರ್ತಾರೆ. ಆದ್ರೆ ಅಂಕಿತ ಸಹೋದರ ಮಾತ್ರ ವೀರೇಶನ ವಿರುದ್ಧ ಕತ್ತಿ ಮಸೆಯೋಕೆ ಶುರು ಮಾಡ್ತಾನೆ. ನನ್ನ ತಂಗಿಯ ಮೇಲೆ ಕಣ್ಣು ಹಾಕಿಬಿಟ್ಟನಲ್ಲ ಅಂತ ಅವನನ್ನೇ ಮುಗಿಸಲು ನಿರ್ಧರಿಸುತ್ತಾನೆ. ಪಕ್ಕಾ ಪ್ಲಾನ್ ಮಾಡಿ ತಂಗಿ ನಿನ್ನ ನೋಡಬೇಕು ಅಂತಿದ್ದಾಳೆ ಅಂತ ಬಲವಂತದಿಂದ ತಾನಿದ್ದ ಜಾಗಕ್ಕೆ ಕರೆಸಿಕೊಂಡು ಅವನನ್ನ ಕೊಂದೇ(Murder) ಬಿಡ್ತಾನೆ. ಅವರಿಗೆ ವೀರೇಶ ಇಷ್ಟವಿಲ್ಲದಿದ್ದರೆ ಅವನನ್ನ ಕೂರಿಸಿ ಬುದ್ಧಿ ಮಾತು ಹೇಳಬಹುದಿತ್ತು, ಅದು ಆಗದೇ ಇದ್ದಿದ್ರೆ ತಮ್ಮ ಮಗಳನ್ನೇ ಮನವೊಲಿಸಬಹುದಿತ್ತು ಆದ್ರೆ ಇದ್ಯಾವುದನ್ನೂ ಮಾಡದೇ ಅಮಾಯಕ ವೀರೇಶನನ್ನೇ ಕೊಂದುಬಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  Annamalai: ದ್ರಾವಿಡರ ನಾಡಿನಲ್ಲಿ ಕಮಾಲ್ ಮಾಡುತ್ತಾ ಕೇಸರಿ ಬ್ರಿಗೇಡ್? ಅಣ್ಣಾಮಲೈ ಸ್ಪರ್ಧೆಯಿಂದ ರಂಗೇರಿದ 'ಲೋಕ' ಅಖಾಡ!

Video Top Stories