Asianet Suvarna News Asianet Suvarna News

ಮುದ್ದೆಯಲ್ಲಿ ವಿಷ, ಒಂದೇ ಕುಟುಂಬದ ನಾಲ್ವರು ಸಾವು, ಏನಿದು ಮರ್ಡರ್ ಮಿಸ್ಟರಿ.?

ಕೋಟೆನಾಡು ಚಿತ್ರದುರ್ಗ ತಾಲೂಕಿನ ಇಸಾಮುದ್ರ ಎಂಬ ಗ್ರಾಮವದು. 45 ವರ್ಷದ ತಿಪ್ಪನಾಯಕನ ಕುಟುಂಬ ವಾಸವಾಗಿತ್ತು. ಮನೆಯಲ್ಲಿ ಆತನ ಹೆಂಡತಿ, ಮೂವರು ಮಕ್ಕಳು, ತಾಯಿ ವಾಸವಾಗಿರುತ್ತಾರೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 

First Published Oct 19, 2021, 2:44 PM IST | Last Updated Oct 19, 2021, 3:05 PM IST

ಬೆಂಗಳೂರು (ಅ. 19): ಕೋಟೆನಾಡು ಚಿತ್ರದುರ್ಗ ತಾಲೂಕಿನ ಇಸಾಮುದ್ರ ಎಂಬ ಗ್ರಾಮವದು. 45 ವರ್ಷದ ತಿಪ್ಪನಾಯಕನ ಕುಟುಂಬ ವಾಸವಾಗಿತ್ತು. ಮನೆಯಲ್ಲಿ ಆತನ ಹೆಂಡತಿ, ಮೂವರು ಮಕ್ಕಳು, ತಾಯಿ ವಾಸವಾಗಿರುತ್ತಾರೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಮಂಗಳೂರು ವಕೀಲನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ

ಮನೆಮಂದಿಗೆಲ್ಲಾ ಇದ್ದಕ್ಕಿದ್ದಂತೆ ಹೊಟ್ಟೆನೋವು, ವಾಂತಿ, ಭೇದಿ ಆರಂಭವಾಗುತ್ತದೆ. ತಿಪ್ಪನಾಯಕ, ಆತನ ಹೆಂಡತಿ, ಇಬ್ಬರು ಮಕ್ಕಳು, ತಾಯಿ ತೀವ್ರ ಅಸ್ವಸ್ಥರಾಗುತ್ತಾರೆ. ಎರಡನೇ ಮಗಳಿಗೆ ಮಾತ್ರ ಏನೂ ಆಗುವುದಿಲ್ಲ. ಮನೆಯವರು ಅಸ್ವಸ್ಥರಾಗಿರುವುದನ್ನು ಕಂಡು ಆಕೆ ಕಿರುಚಿಕೊಳ್ಳುತ್ತಾಳೆ. ಅಕ್ಕಪಕ್ಕದವರೆಲ್ಲಾ ಕೂಡಲೇ ಬರುತ್ತಾರೆ. ಅಷ್ಟರಲ್ಲಿ ತಿಪ್ಪನಾಯಕ, ಆತನ ಹೆಂಡತಿ ಹಾಗೂ ತಾಯಿ ಅಲ್ಲಿಯೇ ಸಾವನ್ನಪ್ಪುತ್ತಾರೆ. ಇದು ಸಹಜ ಸಾವಲ್ಲ ಎಂದು ತನಿಖೆಯಲ್ಲಿ ಗೊತ್ತಾಗುತ್ತದೆ. ಹಾಗಾದರೆ ನಡೆದಿದ್ದೇನು..? ಇಲ್ಲಿದೆ ಮರ್ಡರ್ ಮಿಸ್ಟರಿ..!

 

Video Top Stories