ಮಂಗಳೂರು ವಕೀಲನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ

'ಮೊದಲು ಸಂತ್ರಸ್ತ ಯುವತಿಗೆ ದೂರು ಕೊಡಲು ಹಿಂದೇಟು ಹಾಕಿದ್ದರು. ಅವರು ಸ್ನೇಹಿತರು ಧೈರ್ಯ ತುಂಬಿದ ಕಾರಣ ನಮ್ಮ ಠಾಣೆಗೆ ಬಂದು ದೂರು ನೀಡಿದ್ಧಾರೆ. ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸುತ್ತಿದ್ದೇವೆ' ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ. 

First Published Oct 19, 2021, 12:33 PM IST | Last Updated Oct 19, 2021, 12:33 PM IST

ಬೆಂಗಳೂರು (ಅ. 19): ಮಂಗಳೂರಿನ ಖ್ಯಾತ ವಕೀಲ ಕೆಎಸ್‌ಎನ್ ರಾಜೇಶ್ ಭಟ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ತಮ್ಮ ಕಚೇರಿಯಲ್ಲಿ ಇಂಟರ್ನಿಯಾಗಿ ಕೆಲಸ ಮಾಡುತ್ತಿದ್ದ ಜ್ಯೂನಿಯರ್ ವಿದ್ಯಾರ್ಥಿನಿಯಾಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಮಂಗಳೂರು ಖ್ಯಾತ ವಕೀಲನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಸಂತ್ರಸ್ತೆ ಜೊತೆಗಿನ ಆಡಿಯೋ ವೈರಲ್

ವಕೀಲ ರಾಜೇಶ್ ಭಟ್ ಹಾಗೂ ಸಂತ್ರಸ್ತೆ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋ ಲಭ್ಯವಾಗಿದೆ. ಇಡೀ ಪ್ರಕಟಣದ ಬಗ್ಗೆ ಎಬಿವಿಪಿ ಕಾರ್ಯಕರ್ತರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. 

'ಮೊದಲು ಸಂತ್ರಸ್ತ ಯುವತಿಗೆ ದೂರು ಕೊಡಲು ಹಿಂದೇಟು ಹಾಕಿದ್ದರು. ಅವರು ಸ್ನೇಹಿತರು ಧೈರ್ಯ ತುಂಬಿದ ಕಾರಣ ನಮ್ಮ ಠಾಣೆಗೆ ಬಂದು ದೂರು ನೀಡಿದ್ಧಾರೆ. ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸುತ್ತಿದ್ದೇವೆ' ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ. 

Video Top Stories