Asianet Suvarna News Asianet Suvarna News

ಗಂಡನೊಂದಿಗೆ ಡಿವೋರ್ಸ್..ಪ್ರಿಯಕರನೊಂದಿಗೆ ಚೆಲ್ಲಾಟ..! ಲವರ್‌ ಜೊತೆ ಸೇರಿ ಮಗಳ ಕೊಂದ ಪಾಪಿ ತಾಯಿ..!

ಸರಸಕ್ಕೆ ಅಡ್ಡಿ ಅಂತ ಮಗಳನ್ನೇ ಕೊಂದ ನರಹಂತಕಿ..!
ಮಗಳ ಕತ್ತು ಕೊಯ್ದು ಮಾಡಿದ್ದಳು ಕಣ್ಣೀರಿನ ನಾಟಕ..!
ಕದ್ದು ಮುಚ್ಚಿ ಮನೆಗೆ ಬಂದು ಹೋಗ್ತಿದ್ದ ಪ್ರಿಯಕರ..!

ಆಕೆಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು. ಇಬ್ಬರು ಹೆಣ್ಣು ಮಕ್ಕಳೂ ಇದ್ರು. ಆದ್ರೆ ತವರು ಮನೆಯಲ್ಲಿದ್ದಾಕೆಗೆ ಮತ್ತೊಬ್ಬನ ಜೊತೆ ಲವ್ವಿ ಡವ್ವಿ ಶುರುವಾಗಿತ್ತು. ಕದ್ದು ಮುಚ್ಚಿ ಮನೆಗೆ ಬಂದು ಹೋಗ್ತಿದ್ದವನನ್ನ ಮದುವೆಯಾಗಲು(Marriage) ತುದಿಗಾಲಿನಲ್ಲಿದ್ದವಳಿಗೆ ಅಡ್ಡಿಯಾಗಿದ್ದು, ಆಕೆಯ 5 ವರ್ಷದ ಮಗಳು(Daughter). ಅದಕ್ಕಾಗಿಯೇ ಇದಕ್ಕೊಂದು ಪರಿಹಾರವನ್ನು ಕಂಡು ಹಿಡಿಯೋದಾಗಿ ಜ್ಯೋತಿ ನಿರ್ಧರಿಸ್ತಾಳೆ. ಮಗಳ ಕತ್ತು ಕೊಯ್ದು ಕೊಂದು(Murder) ಹೈಡ್ರಾಮಾ ಮಾಡ್ತಾಳೆ. ಸರಸಕ್ಕೆ ಅಡ್ಡಿ ಅಂತ ಹೆತ್ತ ಮಗಳ ಕಥೆ ಮುಗಿಸೋದಕ್ಕೆ ಜ್ಯೋತಿ ನಿರ್ಧಾರ ಮಾಡ್ತಾಳೆ. ಅದ್ರಂತೆ ತನ್ನ ಪ್ರಿಯಕರ(Lover) ರಾಹುಲ್ ಜೊತೆ ಸೇರಿಕೊಂಡು ಅವತ್ತು ತಾನೆತ್ತ ಮಗಳ ಕತ್ತು ಕೊಯ್ದು ನಂತರ ಹೈಡ್ರಾಮ ಮಾಡಿದ್ದಳು. ಎರಡು ವರ್ಷಗಳ ಹಿಂದೆ ಜ್ಯೋತಿಗೆ ರಾಹುಲ್ ತೆರದಾಳ್ ಅನ್ನೋ 22 ವರ್ಷದ ಯುವಕನೊಂದಿಗೆ ದೋಸ್ತಿ ಶುರುವಾಗುತ್ತೆ. ದೋಸ್ತಿ ಪ್ರೀತಿಗೆ ತಿರುಗೋದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ.ಆದ್ರೆ ಪ್ರೀತಿ ಮದುವೆಯ ಹಂತಕ್ಕೆ ಹೋಗೋದಕ್ಕೆ ಜ್ಯೋತಿಯ 5 ವರ್ಷದ ಅವಳಿ ಮಕ್ಕಳು ಅಡ್ಡಿಯಾಗಿದ್ರು. ಈ ಕಾರಣಕ್ಕೆ ವಿಕಲಾಂಗಚೇತನೆಯಾಗಿದ್ದ ತನ್ನ ಮಗಳ ಕಥೆ ಮುಗಿಸಿದ್ದಳು. ಜ್ಯೋತಿಯ ಪ್ರೀತಿಯ ಜಾಲಕ್ಕೆ ಬಿದ್ದ ಕಲ್ಲಯ್ಯ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದ. ಆದರೆ ಇದೀಗ ಆತನಿಗೂ ಡೈವೋರ್ಸ್ ಕೊಟ್ಟು ಮತ್ತೊಬ್ಬನ ಸಂಗ ಮಾಡಿದ ಜ್ಯೋತಿ, ಕೊನೆಗೆ ತನ್ನ ಮಗಳನ್ನೇ ಕೊಲೆಗೈದು ತಾಯಿ ಅನ್ನೋ ಪದಕ್ಕೆ ಅಪವಾದ ತಂದಿದ್ದಾಳೆ.

ಇದನ್ನೂ ವೀಕ್ಷಿಸಿ:  Sonia Gandhi : "ಲೋಕ" ದಾರಿ ಬಿಟ್ಟು ರಾಜ್ಯಸಭಾ ವ್ಯೂಹ ಹೆಣೆದದ್ದೇಕೆ 'ಕೈ' ರಾಜಮಾತೆ..?

Video Top Stories