'ಗೃಹ ಮಂತ್ರಿ, ಸಿಎಂ ಮಾತು ಕೇಳಿದ್ದಕ್ಕೆ ಬದುಕುಳಿದೆ' ಹತ್ಯೆ ಸ್ಕೆಚ್ ಹಿಂದೆ ಯಾರು?

ಮಾಜಿ ಸಚಿವ ಖಾದರ್ ಕಾರು ಹಿಂಬಾಲಿಸಿದ ಪ್ರಕರಣ/ ಸಿಎಂ ಮತ್ತು ಗೃಹ ಸಚಿವರಿಗೆ ಖಾದರ್ ಧನ್ಯವಾದ/ ವಿಶೇಷ ಭದ್ರತೆ ನೀಡಿದ್ದು ಅನುಕೂಲ ಆಯಿತು/ ನಾಳೆ ಬೆಳಗ್ಗೆ ಗೃಹ ಮಂತ್ರಿ, ಮುಖ್ಯಮಂತ್ರಿ ಭೇಟಿ ಮಾಡ್ತೇನೆ

First Published Dec 24, 2020, 7:00 PM IST | Last Updated Dec 24, 2020, 7:06 PM IST

ಬೆಂಗಳೂರು(ಡಿ. 24) ಗೃಹ ಸಚಿವ, ಮುಖ್ಯಮಂತ್ರಿ ಅವರ ಮಾತು ಕೇಳಿದ್ದಕ್ಕೆ ಬದುಕುಳಿದೆ. ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್ ಆಗ್ತಿದ್ವಿ ಅನುಮಾನಾಸ್ಪದವಾಗಿ ವಾಹನ ಒಂದು ಫಾಲೋ ಮಾಡ್ತಿತ್ತು. ಎಷ್ಟು ಮಂದಿ ಫಾಲೋ ಮಾಡ್ತಿದ್ರು ಎಂದು ಗೊತ್ತಿಲ್ಲ, ಯಾರು ಯಾವಾಗ, ಏನ್ ಪ್ಲಾನ್ ಮಾಡ್ತಾರೆ ಅನ್ನೋದು ನಮಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಖಾದರ್ ಕಾರು ಫಾಲೋ  ಮಾಡಿದ್ದು ಯಾರು?

ಈ ಹಿಂದೆ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಆಗಿತ್ತು. ಆಗ ಇಂಟೆಲಿಜೆನ್ಸ್ ರಿಪೋರ್ಟ್ ಕೂಡ ಹೊರಬಂದಿತ್ತು. ನನಗೆ ಸೆಕ್ಯೂರಿಟಿ ತೆಗೆದುಕೊಳ್ಳುವಂತೆ ಖುದ್ದು ಗೃಹ ಮಂತ್ರಿಗಳೇ ಹೇಳಿದ್ದರು. ಹಾಗಾಗಿ ಅಂದೇ ನಾನು ಸೆಕ್ಯೂರಿಟಿ ಪಡೆಗಳನ್ನು ಭದ್ರತೆಗಾಗಿ ಪಡೆದುಕೊಂಡೆ.  ಗೃಹ ಮಂತ್ರಿಗಳು ಉತ್ತಮವಾದ ಎಸ್ಕಾರ್ಟ್ ಕೊಟ್ಟಿದ್ದಾರೆ. ಅವತ್ತು ಅವರು ಎಸ್ಕಾರ್ಟ್ ಕೊಟ್ಟಿದ್ದು ಒಳ್ಳೆದಾಯ್ತು. ಹೀಗಾಗಿ ನಾನು ಗೃಹ ಮಂತ್ರಿ, ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ನಾಳೆ ಬೆಳಗ್ಗೆ ಗೃಹ ಮಂತ್ರಿ, ಮುಖ್ಯಮಂತ್ರಿ ಭೇಟಿ ಮಾಡ್ತೇನೆ. ಸಾವು ನಿಶ್ಚಿತ, ಮುಂಜಾಗೃತೆ ಯಿಂದ ನಾವು ಇರಬೇಕು. ನಾವು ಯಾರಿಗೂ ನೋವುಂಟು ಮಾಡಿಲ್ಲ. ನಾನು ಮೊಬೈಲ್ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಚರ್ಚೆ ಮಾಡ್ತಿದ್ದೆ ಫೊನ್ ನಲ್ಲಿ ಬ್ಯುಸಿ ಇದ್ದ ಕಾರಣ ಅಷ್ಟಾಗಿ ಗಮನಿಸಿರಲಿಲ್ಲ ಎಂದು ಘಟನೆಯ ವಿವರ ನೀಡಿದರು.