ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತನ ಬರ್ಬರ ಹತ್ಯೆಗೈದ ಅಭಿಮಾನಿ: ಕೊಲೆಯ ಹಿಂದಿತ್ತು ಫ್ಯಾಮಿಲಿ ಮ್ಯಾಟರ್!

ರಾಜ್ಯದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಆಪ್ತನನ್ನು ಅವರ ಅಭಿಮಾನಿಯೇ ಬರ್ಬರವಾಗಿ ಕೊಲೆ ಮಾಡಿರುವ ಹಿಂದಿದೆ ರೋಚಕ ಫ್ಯಾಮಿಲಿ ದ್ವೇಷ...!

First Published Oct 25, 2023, 6:09 PM IST | Last Updated Oct 25, 2023, 6:09 PM IST

ಕೋಲಾರ (ಅ.25): ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈಬಂಟನೂ ಆಗಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಕಾಂಗ್ರೆಸ್‌ ಮುಖಂಡ ಎಂ. ಶ್ರೀನಿವಾಸ್‌ ಅವರನ್ನು ಹಾಡ ಹಗಲೇ ನಡು ರಸ್ತೆಯಲ್ಲಿ ಚಾಕು, ಚೂರಿ ಹಾಗೂ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಶ್ರೀನಿವಾಸ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆದರೆ, ಕೊಲೆಯನ್ನು ಮಾಡಿದ್ದು ಕೂಡ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ.

ಆತ ಕಾಂಗ್ರೆಸ್ನ ಪ್ರಭಾವಿ ನಾಯಕ... ಆ ಭಾಗದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ... ಈಗಿನ ಗೃಹ ಸಚಿವರ ಆಪ್ತ.. ಮಾಜಿ  ಸ್ಪೀಕರ್ ರಮೇಶ್ ಕುಮಾರ್ರ ರೈಟ್ ಹ್ಯಾಂಡ್.. ಸೈಡ್ ಬ್ಯುಸಿನೆಸ್ ಅಂತ ರಿಯಲ್ ಎಸ್ಟೇಟ್ ಉದ್ಯಮವನ್ನೂ ಮಾಡ್ತಿದ್ದ.. ಇಂತವನು ಆವತ್ತು ಆಡಹಗಲಲ್ಲೇ ಕೊಲೆಯಾಗಿ ಹೋಗಿದ್ದ. ವಿಶ್ ಮಾಡಲು ಬಂದವರು ಅವನಿಗೆ ಮಚ್ಚು ಬೀಸಿದ್ರು.. ಆತ ಸ್ಪಾಟ್ನಲ್ಲೇ ಉಸಿರು ಚೆಲ್ಲಿದ್ದ.. ಇನ್ನೂ ಇದೇ ಜಿಲ್ಲಾ ಪಂಚಾಯತ್ ಅಧ್ಯಕ್ಷನ ಕೊಲೆ ಪ್ರಕರಣದ ತನಿಖೆಗಿಳಿದ ಪೊಲೀಸರು 24 ಗಂಟೆಗಳಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ್ರು.. ಅಷ್ಟೇ ಅಲ್ಲ ಅವರ ಮೇಲೆ ಗುಂಡು ಹಾರಿಸಿದ್ದರು.

ಕೋಲಾರ: ಕಾಂಗ್ರೆಸ್‌ ಮುಖಂಡನ ಬರ್ಬರ ಕೊಲೆ, 8 ಮಂದಿ ಬಂಧನ

ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ ಬಂದವರು ಸೀನಣ್ಣನಿಗೆ ಮಚ್ಚಿನೇಟು ಹಾಕಿದ್ರು... ಆದರೆ ಯಾವಾಗ ಸೀನಣ್ಣ ಸತ್ತ ಅನ್ನೋದು ಗೊತ್ತಾಯ್ತೋ ರಾಜಕೀಯ ನಾಯಕರೆಲ್ಲಾ ಸ್ಪಾಟ್ಗೆ ಬಂದಿದ್ರು.. ಗೃಹಸಚಿವರು, ಮಾಜಿ ಸ್ಪೀಕರ್, ಹೀಗೆ ಸಾಲು ಸಾಲು ನಾಯಕರು ಅಲ್ಲಿಗೆ ಆಗಮಿಸಿದ್ರು.. ಅದರಲ್ಲೂ ರಮೇಶ್ ಕುಮಾರ್ರಂತು ತಮ್ಮ ಸ್ನೇಹಿತನನ್ನ ನೆನೆದು ಕಣ್ಣೀರು ಹಾಕಿದರು.

Video Top Stories