Asianet Suvarna News Asianet Suvarna News

ಪಂಚಭೂತಗಳಲ್ಲಿ ಲೀನವಾದ ಜೈನಮುನಿಗಳು: ಸಾವಿರಾರು ಭಕ್ತರು, ರಾಜಕೀಯ ನಾಯಕರು ಭಾಗಿ

ಹಿರೇಕೋಡಿ ಜೈನ ಆಶ್ರಮದ ನಂದಿ ಮಹಾರಾಜರ ಅಂತ್ಯಕ್ರಿಯೆ ಜೈನ ಸಂಪ್ರದಾಯದಂತೆ ನಡೆಯಿತು.
 

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ(Kamakumar Nandi Maharaja) ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ನಂದಿ ಪರ್ವತ ಆಶ್ರಮದಲ್ಲಿ ಜೈನ(Jaina) ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಜೈನ ಮಠಗಳ ಮಹಾಸ್ವಾಮಿಗಳಾದ ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ, ವರೂರ್ ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಸಾವಿರಾರು ಭಕ್ತರು, ರಾಜಕಾರಣಿಗಳು ಭಾಗಿಯಾಗಿದ್ದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Lakshmana savadi) ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.ಪೂರ್ವಾಶ್ರಮದ ಮೃತ ಶ್ರೀಗಳ ಅಣ್ಣನ ಮಗ ಭೀಮಗೊಂಡ ಉಗಾರೆ ಅಂತಿಮ ವಿಧಿವಿಧಾನ ನೆರವೇರಿಸಿದರು.

ಇದನ್ನೂ ವೀಕ್ಷಿಸಿ:  ಶಕ್ತಿ ಯೋಜನೆ ಆರಂಭದಲ್ಲೇ ಅಕ್ರಮದ ವಾಸನೆ: ಪ್ರಯಾಣಿಕರ ದಿಢೀರ್‌ ಏರಿಕೆ ಹಿಂದಿದೆಯಾ ಗೋಲ್‌ಮಾಲ್‌?

Video Top Stories