Asianet Suvarna News Asianet Suvarna News

ವಿವಾಹಿತ ಮಹಿಳೆಯೊಬ್ಬಳ ಜೊತೆ ಸಂಬಂಧ, ನಂತರ ನಡೆದದ್ದು ಭಯಾನಕ!

ಅವನು ಗೌಡರ ಮನೆಯಲ್ಲಿ ಜೀತಕ್ಕಿದ್ದವನು.. ಹೊಲ ಗದ್ದೆ ಅಂತ ಬ್ಯುಸಿಯಾಗಿರ್ತಿದ್ದವನು. ಆದ್ರೆ ಅವತ್ತು ಇಡೀ ಊರಿಗೆ ಊರಿಗೆ ಮೊಹರಾಮ್ ಜಾತ್ರೆಲ್ಲಿದ್ರೆ ಈತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಮಧ್ಯರಾತ್ರಿಯಲ್ಲಿ ಅವನನ್ನ ಕಲ್ಲು ಎತ್ತಿಹಾಕಿ ಕೊಂದು ಹಾಕಿದ್ರು ಹಂತಕರು. ಆರಂಭದಲ್ಲಿ ಎಲ್ರೂ ಆತ ಜೀತಕ್ಕಿದ್ದ ಮನೆಯವರ ಮೇಲೇ ಅನುಮಾನ ವ್ಯಕ್ತಪಡಿಸಿದ್ರು.

First Published Aug 31, 2022, 5:47 PM IST | Last Updated Aug 31, 2022, 5:47 PM IST

ಬೆಂಗಳೂರು (ಆ. 31): ಒಂದು ವಾರದ ಹಿಂದೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾದಲ್ಲಿ ನಡೆದ ಕೊಲೆ. ಅಂದು ಎಲ್ಲೆಡೆ ಮೊಹರಂ ಆಚರಣೆ ಮಾಡಲಾಗುತ್ತಿತ್ತು. ಇದಕ್ಕೆ ಬಟಗೇರಾ ಕೂಡ ಹೊರತಾಗಿರಲಿಲ್ಲ. ಹಿಂದಿನ ದಿನ ಇಡೀ ಊರಿಗೆ ಊರೇ ಮೊಹರಂ ಮೆರವಣಿಗೆಯಲ್ಲಿದ್ದರೆ, ಒಬ್ಬ ಮಾತ್ರ ರಕ್ತದ ಮಡುವಿನಲ್ಲಿದ್ದ.ಮಧ್ಯರಾತ್ರಿಯಲ್ಲಿ ಅವನನ್ನ ಕಲ್ಲು ಎತ್ತಿಹಾಕಿ ಕೊಂದು ಹಾಕಿದ್ರು ಹಂತಕರು. ಆರಂಭದಲ್ಲಿ ಎಲ್ರೂ ಆತ ಜೀತಕ್ಕಿದ್ದ ಮನೆಯವರ ಮೇಲೇ ಅನುಮಾನ ವ್ಯಕ್ತಪಡಿಸಿದ್ರು. ಆದ್ರೆ ತನಿಖೆಗಿಳಿದ ಪೊಲೀಸರಿಗೆ ಅದೊಂದು ಮನೆಯ ಮೇಲೆ ಕಣ್ಣು ಹಾಕಿದ್ರು. ಆ ಮನೆಯ ಒಬ್ಬನನ್ನ ಎತ್ತಾಕೊಂಡು ಬಂದು ವರ್ಕ್ ಮಾಡಿದ ಮೇಲೆನೇ ಗೊತ್ತಾಗಿದ್ದು ಅಲ್ಲಿ ಅವನನ್ನ ಕೊಂದಿದ್ದು ಡೆಡ್ಲಿ ಬ್ರದರ್ಸ್ ಅಂತ. 

25 ವರ್ಷದ ಸತೀಶ್‌ ಬಂಗಿ ಕೊಲೆಯಾದ ಯುವಕ. ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂದ ಬೆಳೆಸಿದ ಕಾರಣಕ್ಕೆ, ಸತೀಶ್‌ ಬಂಗಿಯನ್ನು ಮಹಿಳೆಯ ಮೈದುನನೇ ಕೊಲೆ ಮಾಡಿದ್ದಾರೆ. ಮೊಹರಂ ಮೆರವಣಿಗೆಯ ಸಮಯದಲ್ಲಿ ಮರಳಿನ ಗುಡ್ಡದ ಬಳಿ ರೊಮಾನ್ಸ್‌ ಮಾಡುತ್ತಿರುವ ವೇಳೆಯಲ್ಲಿಯೇ ಇವರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಅದೇ ರೋಮ್ಯಾನ್ಸ್ ಆತನ ಪಾಲಿಗೆ ಕಡೆಯ ರೊಮ್ಯಾನ್ಸ್ ಆಗಿಬಿಡ್ತು. ಅವರು ಏಕಾಂತದಲ್ಲಿದ್ದಿದ್ದನ್ನ ಕಂಡ ಮಹಿಳೆಯ ಮನೆಯವರು ಸತೀಶನ ಕಥೆಯನ್ನ ಅಲ್ಲೇ ಮುಗಿಸಿಬಿಟ್ಟಿದ್ದಾರೆ.

ಕೊಟ್ಟಿಗೆಗೆ ನುಗ್ಗಿ ಗರ್ಭಿಣಿ ಹಸುವಿನ ಮೇಲೆ ರೇಪ್‌, ಬಂಗಾಳ ವ್ಯಕ್ತಿಯ ಬಂಧನ!

ತಾನಾಯಿತು ತನ್ನ ಕೆಲಸವಾಯಿತು ಅಂತ ಇರೋದು ಬಿಟ್ಟು ವಿವಾಹಿತ ಹೆಣ್ಣಿನ ಮೇಲೆ ಕಣ್ಣು ಹಾಕಿದ ತಪ್ಪಿಗೆ ಸತೀಶ ಹಾದಿ ಹೆಣವಾಗಿ ಸಣ್ಣ ವಯಸ್ಸಿನಲ್ಲಿಯೇ ಲೋಕ ತೊರೆದಿದ್ದಾನೆ. ಇನ್ನೂ ಗಂಡ, ಮನೆ, ಮಕ್ಕಳು ಇದ್ರೂ ಪರಸಂಗಕ್ಕೆ ಮನಸೋತು ಅಡ್ಡ ಹಾದಿ ಹಿಡಿದಿದ್ದಲ್ಲದೇ ಆತನ ಕೊಲೆಗೂ ಕಾರಣಳಾದ ತಪ್ಪಿಗೆ ಕಾಶಿಬಾಯಿ ಕಂಬಿ ಎಣಿಸುವಂತಾಗಿದೆ. ಆದ್ರೆ ಅತ್ತಿಗೆಯ ಪರಸಂಗ ಕಣ್ಣಾರೆ ಕಂಡು ಕಾನೂನು ಕೈಗೆತ್ತಿಕೊಂಡ ತಪ್ಪಿಗೆ ಆಕೆಯ ಮೈದುನರು ಮತ್ತು ಅವರ ಸ್ನೇಹಿತರೂ ಜೈಲು ಸೇರಿದ್ದು ದುರ್ದೈವವೇ ಸರಿ.

Video Top Stories