Asianet Suvarna News Asianet Suvarna News

ಸಂಬಂಧಿಕರ ಮನೆಗೆ ಹೋಗಿ ತಪ್ಪು ಮಾಡಿಬಿಟ್ಟ: ಹೆಂಡತಿಯ ಕತ್ತು ಸೀಳಿ ಪರಾರಿಯಾದ ಗಂಡ..!

ಸಂಬಂದಿಕರನ್ನ ನೋಡಿಬರೋಣ ಅಂತ ಒಂದು ಮನೆಗೆ ಹೋದ.. ಆದ್ರೆ ಮನೆಯಲ್ಲಿ ಕೂತಿರುವಾಗ್ಲೇ ಒಂದು ಜೀಪ್​​ ಮನೆ ಬಳಿ ಬರುತ್ತೆ.. ಆ ಜೀಪ್​ ಪೊಲೀಸರದ್ದೇ ಅಂತ ತಿಳಿದ ಪಾಷಾ ಸೀದಾ ಬಿಲ್ಡಿಂಗ್​ ಮೇಲಿಂದ ಹಾರಿ ಪ್ರಾಣಬಿಟ್ಟ

First Published Aug 8, 2024, 12:11 PM IST | Last Updated Aug 8, 2024, 12:51 PM IST

ಬೆಂಗಳೂರು(ಆ.08): ಅವಳು ಬಡ ಕುಟುಂಬದ ಹುಡುಗಿ.. ಮದುವೆಯಾದವನು 4 ವರ್ಷ ಜೊತೆಗಿದ್ದು ಇಬ್ಬರು ಮಕ್ಕಳನ್ನ ಕೊಟ್ಟು ಹೋಗಿಬಿಟ್ಟ.. ಆದ್ರೆ ವಯಸ್ಸಾದ ತಾಯಿ ಮತ್ತು ಮಕ್ಕಳನ್ನ ಆ ಹೆಣ್ಣು ಮಗಳೆ ನೋಡಿಕೊಳ್ತಿದ್ದಳು.. ಆದರೆ ಆವತ್ತು ಬೆಳ್ಳಂಬೆಳಗ್ಗೆ ಆ ಮನೆಗೆ ಎಂಟ್ರಿ ಕೊಟ್ಟ ಗಂಡ.. ಅವಳ ಕಥೆ ಮುಗಿಸಿ ಎಸ್ಕೇಪ್​ ಆದ.. ಆದ್ರೆ ಹೆಂಡತಿ ಸತ್ತು ಕೆಲವೇ ದಿನಗಳಲ್ಲಿ ಆತ ಕೂಡ ಸತ್ತು ಹೋಗಿದ್ದ.. ಅಷ್ಟಕ್ಕೂ ಆ ಕಿರಾತಕ ಗಂಡ ಅವಳನ್ನ ಮುಗಿಸಿದ್ದೇಕೆ.? ಅಂಥಹ ತಪ್ಪು ಆ ಹೆಣ್ಣುಮಗಳು ಮಾಡಿದ್ದೇನು.. ಒಬ್ಬ ತಲೆಕೆಟ್ಟ ಗಂಡನ ಯಡವಟ್ಟಿನ ಕಥೆಯೇ ಇವತ್ತಿನ ಎಫ್​.ಐ.ಆರ್

ಗಂಡ ಬೇಡವೇ ಬೇಡ ಅಂತ ಹೆಂಡತಿ ಒಂಟಿ ಜೀವನ ನಡೆಸುತ್ತಿದ್ರು..ಈ ಪಾಪಿ ಅವಳನ್ನ ನೆಮ್ಮದಿಯಾಗಿ ಬದುಕೋದಕ್ಕೆ ಬಿಡಲಿಲ್ಲ.. ಮನೆಗೆ ನುಗ್ಗಿ ಚಾಕು ಹಾಕೇಬಿಟ್ಟ.. ಆದ್ರೆ ಯಾವಾಗ ಹೆಂಡತಿ ಸತ್ತಳೋ ಈತನಿಗೆ ಪಾಪದ ಪ್ರಜ್ಞೆ ಕಾಡಿದೆ.. ಸೀದಾ ಮಸೀದಿಗೆ ಹೋಗಿ ಕೂತುಬಿಡ್ತಾನೆ.

ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

ಮಕ್ಕಳೆಲ್ಲಾ ಶಾಲೆಗೆ ಹೋದ ಮೇಲೆ ಎಂಟ್ರಿ ಕೊಟ್ಟ ಗಂಡ ಮತ್ತೆ ಜಗಳ ತಗೆದಿದ್ದ.. ಜಗಳ ವಿಕೋಪಕ್ಕೆ ಹೋಗಿ ಆತ ಹೆಂಡತಿಗೆ ಚಾಕು ಹಾಕಿ ಸೀದಾ ಹೊರಟೇಬಿಟ್ಟ.. ನಂತರ ಸೀದಾ ಕೊಲಾರಕ್ಕೆ ಹೋಗಿ ಒಂದು ಮಸೀದಿಯಲ್ಲಿ ಆಶ್ರಯ ಪಡೆದು ಅಲ್ಲೇ ನಾಲಕ್ಕು ದಿನ ಕಳೆದಿದ್ದ.. ಆದ್ರೆ ಆವತ್ತು ಸಂಬಂದಿಕರನ್ನ ನೋಡಿಬರೋಣ ಅಂತ ಒಂದು ಮನೆಗೆ ಹೋದ.. ಆದ್ರೆ ಮನೆಯಲ್ಲಿ ಕೂತಿರುವಾಗ್ಲೇ ಒಂದು ಜೀಪ್​​ ಮನೆ ಬಳಿ ಬರುತ್ತೆ.. ಆ ಜೀಪ್​ ಪೊಲೀಸರದ್ದೇ ಅಂತ ತಿಳಿದ ಪಾಷಾ ಸೀದಾ ಬಿಲ್ಡಿಂಗ್​ ಮೇಲಿಂದ ಹಾರಿ ಪ್ರಾಣಬಿಟ್ಟ.

ಇದಕ್ಕೆ ನಾವು ಹೇಳಿದ್ದು ಆತ ಯಡವಟ್ಟು ಪಾಷಾ ಅಂತ..  ಕಷ್ಟಪಟ್ಟು ದುಡಿದು ಮಕ್ಕಳ ಹಾರೈಕೆ ಮಾಡ್ತಿದ್ದವಳನ್ನ ಈ ತಬ್ರೇಜ್​​ ಕೊಂದು ಈಗ ತಾನೂ ಪ್ರಾಣಬಿಟ್ಟಿದ್ದಾನೆ.. ಆದರೆ ಈಗ ಅವರ ಇಬ್ಬರು ಮಕ್ಕಳು ಅನಾಥವಾಗಿವೆ.. 

Video Top Stories