Mysore: ಹೆಂಡತಿಯನ್ನ 12 ವರ್ಷ ಕೂಡಿಟ್ಟ ಪಾಪಿ ಗಂಡ..! ಮೂರು ಮದುವೆಯಾದರೂ ಪಾಠ ಕಲಿಯಲಿಲ್ಲ ಭೂಪ..!

ಹೆಂಡತಿಯನ್ನ 12 ವರ್ಷ ಕೂಡಿಟ್ಟ ಪಾಪಿ ಗಂಡ..!
ಹೆಂಡತಿ ಮೇಲೆ ಅನುಮಾನ..ಬಾಗಿಲಿಗೆ 2 ಬೀಗ..!
ಹಾಲ್‌ನಲ್ಲೇ ಊಟ..ಬಕೆಟ್‌ನಲ್ಲೇ ಟಾಯ್ಲೆಟ್..!

First Published Feb 4, 2024, 4:58 PM IST | Last Updated Feb 4, 2024, 5:11 PM IST

ಅವರಿಬ್ಬರು ಮದುವೆಯಾಗಿ 12 ವರ್ಷವಾಗಿತ್ತು. ಗಂಡ(Husband) ಕೆಲಸಕ್ಕೆ ಹೋಗಿ ಬಂದ್ರೆ ಹೆಂಡತಿ(Wife) ಮನೆಯಲ್ಲೇ ಇರಬೇಕಿತ್ತು. ಇಬ್ಬರು ಮಕ್ಕಳು ಕೂಡ ಆದ್ವು. ಆದ್ರೆ ಆ ಹೆಂಡತಿಯನ್ನ ಗಂಡ-ಮಕ್ಕಳು ಬಿಟ್ರೆ ಬೇರೆ ಯಾರು ನೋಡೋ ಹಾಗಿರಲಿಲ್ಲ. ಮಾತನ್ನಾಡೋ ಹಾಗಿರಲಿಲ್ಲ. ಇದು ಸ್ವತಃ ಆಕೆಯ ಗಂಡನ ತಾಕೀತು. ಆ ಹೆಣ್ಣು ಮಗಳು 12 ವರ್ಷದ ನಂತರ ಪ್ರಪಂಚ ನೋಡುತ್ತಿದ್ದಾಳೆ. ಇದು ಒಂದು ಘಟನೆಯಾದ್ರೆ, ಮತ್ತೊಂದು ಘಟನೆಯಲ್ಲಿ ಅಪ್ಪ ಅಮ್ಮ ಮತ್ತು ಮಗ.. ಅಪ್ಪ ದೂರದ ಊರಿನ ತನ್ನ ಜಮೀನಿನಲ್ಲಿ ಕೆಲಸ ಮಾಡ್ತಿದ್ರೆ ತಾಯಿ ಮನೆಯಲ್ಲೇ ಇರುತ್ತಿದ್ದಳು. ಇನ್ನೂ ಮಗ(Son) ಕಾಲೇಜು ಸ್ಟೂಡೆಂಟ್. 8-10 ಮನೆ ಬಾಡಿಗೆ, ಜಮೀನಿನಲ್ಲಿ ಚಿನ್ನದಂತ ಬೆಳೆ. ಎಲ್ಲವೂ ಚೆನ್ನಾಗಿತ್ತು.. ಆದ್ರೆ ಆವತ್ತೊಂದು ದಿನ.. ಮಗ ತನ್ನ ತಾಯಿಯನ್ನೇ ಕೊಂದು ಮುಗಿಸಿದ್ದ. ಮಲಗಿದ್ದಲ್ಲೇ ಅಮ್ಮನ ಹೆಣ ಹಾಕಿದ್ದ. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದ ಮಗನೇ ಆಕೆಯ ಪಾಲಿಗೆ ಮೃತ್ಯುವಾಗಿದ್ದ. ಅಮ್ಮನನ್ನ ಕೊಂದ (Murder) ಅಪ್ರಾಪ್ತ ಬಾಲಕ ಇವತ್ತು ಜೈಲು ಸೇರಿದ್ದಾನೆ. ಹೆಂಡತಿಯನ್ನ ಕಳೆದುಕೊಂಡ ಗಂಡ ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ.. ಅದೇನೆ ಇರಲಿ ಒಂದು ಕ್ಷಣದ ಕೋಪ ಇಂತಹ ಕ್ರೂರ ಕೃತ್ಯಕ್ಕೆ ಕಾರಣ ಆಗುತ್ತೆ ಅನ್ನೋದಕ್ಕೆ ಈ ದುರ್ಘಟನೆಯೇ ಸಾಕ್ಷಿಯಾಗಿದೆ.

ಇದನ್ನೂ ವೀಕ್ಷಿಸಿ:  LK Advani: ಕರಾಚಿ ಜನ್ಮಭೂಮಿ.. ಭಾರತ ಕರ್ಮಭೂಮಿ.. ಕೇಸರಿ ಲೋಹಪುರುಷ..!

Video Top Stories