Asianet Suvarna News Asianet Suvarna News

ವಿದ್ಯಾನಗರಿಯಲ್ಲಿ ಚಪಲಚನ್ನಿಗರಾಯ: ಕಾಮುಕನ ಬಂಡವಾಳ ಬಯಲು ಮಾಡಿದ ವಿದ್ಯಾರ್ಥಿಗಳು

ಧಾರವಾಡ ಅಂದ್ರೆ ವಿದ್ಯಾಕಾಶಿ ಅಂತಾನೇ ಫೇಮಸ್. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಣ ಸಂಸ್ಥೆ ಮತ್ತು ಕೋಚಿಂಗ್ ಕೇಂದ್ರಗಳನ್ನು ಹೊಂದಿರುವ ನಗರ ಅಂದ್ರೆ ಅದು ಧಾರವಾಡ. ಇದೇ ಕಾರಣಕ್ಕೆ ರಾಜ್ಯವಲ್ಲದೇ ದೇಶದ ಮೂಲೆ ಮೂಲೆಯಿಂದಲೂ ಇಲ್ಲಿಗೆ ವಿದ್ಯಾರ್ಥಿಗಳು ಒಳ್ಳೆ ಶಿಕ್ಷಣ ಸಿಗುತ್ತೆ ಅಂತಾ ಕಲಿಯಲು ಬರ್ತಾರೆ. ಆದ್ರೆ ಇಂಥಹ ಧಾರವಾಡದಲ್ಲಿ ಒಬ್ಬ ಕಾಮುಕ ಕಾಲೇಜ್ ನಡೆಸಿ ಅಲ್ಲಿಗೆ ಬರ್ತಿದ್ದ ವಿದ್ಯಾರ್ಥಿಗಳಿಗೆ ಇನ್ನಿಲ್ಲದಂತೆ ಕಾಟ ಕೊಡ್ತಿದ್ದ. ಅವನ ಹೀನ ಕೃತ್ಯಗಳನ್ನ ಆತನ ಸಂಸ್ಥಯಲ್ಲಿ ಓದುತ್ತಿದ್ದ ವಿದ್ಯಾಥಿಗಳೇ ಇವತ್ತು ಬಯಲು ಮಾಡಿದ್ದಾರೆ.

First Published Aug 20, 2022, 2:33 PM IST | Last Updated Aug 20, 2022, 2:33 PM IST

ಧಾರವಾಡ, (ಆ.20): ಧಾರವಾಡ ಅಂದ್ರೆ ವಿದ್ಯಾಕಾಶಿ ಅಂತಾನೇ ಫೇಮಸ್. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಣ ಸಂಸ್ಥೆ ಮತ್ತು ಕೋಚಿಂಗ್ ಕೇಂದ್ರಗಳನ್ನು ಹೊಂದಿರುವ ನಗರ ಅಂದ್ರೆ ಅದು ಧಾರವಾಡ. ಇದೇ ಕಾರಣಕ್ಕೆ ರಾಜ್ಯವಲ್ಲದೇ ದೇಶದ ಮೂಲೆ ಮೂಲೆಯಿಂದಲೂ ಇಲ್ಲಿಗೆ ವಿದ್ಯಾರ್ಥಿಗಳು ಒಳ್ಳೆ ಶಿಕ್ಷಣ ಸಿಗುತ್ತೆ ಅಂತಾ ಕಲಿಯಲು ಬರ್ತಾರೆ. ಆದ್ರೆ ಇಂಥಹ ಧಾರವಾಡದಲ್ಲಿ ಒಬ್ಬ ಕಾಮುಕ ಕಾಲೇಜ್ ನಡೆಸಿ ಅಲ್ಲಿಗೆ ಬರ್ತಿದ್ದ ವಿದ್ಯಾರ್ಥಿಗಳಿಗೆ ಇನ್ನಿಲ್ಲದಂತೆ ಕಾಟ ಕೊಡ್ತಿದ್ದ. ಅವನ ಹೀನ ಕೃತ್ಯಗಳನ್ನ ಆತನ ಸಂಸ್ಥಯಲ್ಲಿ ಓದುತ್ತಿದ್ದ ವಿದ್ಯಾಥಿಗಳೇ ಇವತ್ತು ಬಯಲು ಮಾಡಿದ್ದಾರೆ. 

ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಕಾಮುಕ ಅರೆಸ್ಟ್‌

ಇನ್ನೂ ಸಂಸ್ಥಾಪಕನಿಗೆ ಕಾಲೇಜಿನ ಪ್ರಿನ್ಸಿಪಾಲ್ ಕೂಡ ಸಾಥ್ ಕೊಡ್ತಿದ್ದನಂತೆ. ಹೀಗೆ ವಿದ್ಯಾನಗರಿಯಲ್ಲಿ ಕಾಲೇಜು ಆರಂಭಿಸಿ ಅಲ್ಲಿಗೆ ಓದಲು ಬರ್ತಿದ್ದ ವಿದ್ಯಾಥಿಗಳಿಗೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಓದೋಕ್ಕಾಗಿ ಬರ್ತಿದ್ದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡ್ತಿದ್ದ ಆ ಹೆಣ್ಣು  ಬಾಕ. ಮಧ್ಯರಾತ್ರಿಯಲ್ಲೆಲ್ಲ ಹಾಸ್ಟೆಲ್ ಒಳಗೆ ನುಗ್ಗಿ ಲೈಂಗಿಕ ಕಿರುಕುಳ ನೀಡ್ತಿದ್ದ. ಇದು ವರ್ಷಗಳಿಂದಲೂ ನಡೆಯುತ್ತಿತ್ತು. ಆದ್ರೆ ಯಾವಾಗ ವಿದ್ಯಾರ್ಥಿನಿಯರಿಗೆ ಇದು ಅತಿ ಆಯ್ತು ಅನ್ನಿಸಿತೋ ಸೀದಾ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ರು. ಆದ್ರೆ ಯಾವಾಗ ಆ ಕಿರಾತಕನ ವಿರುದ್ಧ ಕೇಸ್ ದಾಖಲಾಯ್ತೋ ಈತನ ಕಾಮ ಪುರಾಣಗಳು ಒಂದೊಂದೇ ಬಯಲಾಗೋಕೆ ಶುರುವಾಯ್ತು. ಇದೇ ಚಪಲಚನ್ನಿಗರಾಯನ ಕಥೆಯೇ ಇವತ್ತಿನ ಎಫ್.ಐ,ಆರ್.....

Video Top Stories