Asianet Suvarna News Asianet Suvarna News

ಭ್ರೂಣ ಹತ್ಯೆ ಕರ್ಮಕಾಂಡದ ಮತ್ತೊಂದು ಬೇಟೆ..! ಕರಾಳ ಕೂಪವನ್ನ ಬಯಲಿಗೆಳೆದಿದ್ದು ದಂಪತಿ..!

ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ ಎಕ್ಸ್ಕ್ಲೂಸಿವ್..!
ದಂಧೆಯಲ್ಲಿ ಭಾಗಿಯಾಗಿದ್ದ 12ಮಂದಿ ಈಗಾಗಲೇ ಅರೆಸ್ಟ್..!
ಹೆಣ್ಣು ಭ್ರೂಣ ಹತ್ಯೆ ಕರ್ಮಕಾಂಡದ ಮತ್ತೊಂದು ಬೇಟೆ..!
 

ಅವರೆಲ್ಲಾ ಮನುಷ್ಯ ರೂಪದ ರಾಕ್ಷಸರು. ಇನ್ನೂ ತಾಯಿಯ ಹೊಟ್ಟೆಯಿಂದ ಹೊರಬರುವ ಮುನ್ನವೇ ಅವರ ಕತ್ತು ಹಿಸುಕಿ ಕೊಲ್ಲೋ ಕಿರಾತಕರು. ನಾವು ಮಾತನ್ನಾಡ್ತಿರೋದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭ್ರೂಣ ಹತ್ಯೆ ಕೇಸ್(Female Feticide case). 12 ಪಾಪಿಗಳ ತಂಡ ಈ ಕರಾಳ ಕೂಪವನ್ನೇ ಬ್ಯುಸಿನೆಸ್ ಮಾಡಿಕೊಂಡು ತಮ್ಮ ಪಾಪದ ಕೊಡವನ್ನ ತುಂಬಿಸಿಕೊಳ್ತಿದ್ರು. ಆದ್ರೆ ಇವತ್ತು ಆ 12 ಮಂದಿಯೂ ಕಂಬಿ ಹಿಂದೆ ಹೋಗಿದ್ದಾರೆ. ಒಂದು ದಂಪತಿಯಿಂದ ಗಂಡ ಹೆಂಡತಿ ಸೇರಿಕೊಂಡು ಈ ರಾಕ್ಷಸರ ಅಸಲಿಯತ್ತನ್ನ ಬಯಲು ಮಾಡಿದ್ರು. ಈ ಗಂಡ ಹೆಂಡತಿ ಮಾಡಿದ ಕೆಲಸಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅವರು ಪೊಲೀಸ್(Police) ಮಾಹಿತಿದಾರರು. ಎಷ್ಟೋ ಇನ್ಫಾರ್ಮೆಷನ್ ಅನ್ನ ಪೊಲೀಸರ ಮುಂದಿಟ್ಟವರು. ಇವರು ಕೊಟ್ಟ ಮಾಹಿತಿಯಿಂದ ಎಷ್ಟೋ ಮಂದಿ ಕಂಬಿ ಹಿಂದೆ ಹೋಗಿದ್ದಾರೆ. ಆದ್ರೆ ಯಾವಾಗ ಭ್ರೂಣ ಪತ್ತೆಯ ಸುದ್ದಿ ಇವರ ಕಿವಿಗೆ ಬಿತ್ತೋ ಈ ಬಾರಿ ಅವರು ಪೊಲೀಸರ ಮುಂದೆ ಹೋಗೋದು ಬಿಟ್ಟು ತಾವೇ ಫೀಲ್ಡ್ಗೆ ಇಳಿದುಬಿಡ್ತಾರೆ. ಭ್ರೂಣ ಪತ್ತೆ ಗ್ಯಾಂಗ್ನ ಬಗ್ಗು ಬಡಿಯಲು ತಾವೇ ರೆಡಿಯಾಗಿಬಿಡ್ತಾರೆ. ಆವತ್ತು ಈ ದಂಪತಿ ಧೈರ್ಯ ಮಾಡದೇ ಇದ್ದಿದ್ರೆ ಇವತ್ತು ಇನ್ನೆಷ್ಟು ಭ್ರೂಣಗಳು ಕಸದ ಬುಟ್ಟಿ ಸೇರುತ್ತಿದ್ವೋ ಆ ದೇವರೇ ಬಲ್ಲ.

ಇದನ್ನೂ ವೀಕ್ಷಿಸಿ:  ಅಪರಿಚತರ ಗುಂಡಿಗೆ ಸತ್ತ ಮೋಸ್ಟ್ ವಾಂಟೆಡ್ ಉಗ್ರ!ಗುಮ್ಮನ ಭೀತಿಗೆ ನರಕವಾಯ್ತು ಉಗ್ರರಸ್ವರ್ಗ!