Asianet Suvarna News Asianet Suvarna News

ನಿಧಿ ಆಸೆ ತೋರಿಸಿ ಯಮಾರಿಸುವ ಗ್ಯಾಂಗ್..! ಪೋನ್ ಮಾಡಿ ಬಂಗಾರ ತಗೊಳ್ಳಿ ಅಂತಾರೆ..!

ಅವರ ಜಾಗಕ್ಕೆ ಕರೆಸಿಕೊಂಡು ಮೋಸ ಮಾಡ್ತಾರೆ..!
ಕಮ್ಮಿ ರೇಟ್ ಅಂತೇಳಿ ವಂಚಿಸುವ ಗ್ಯಾಂಗ್ ಅದು..!
ಹೂವಿನಹಡಗಲಿಯ ನಟೋರಿಯಸ್ ಟೀಮ್ ಅರೆಸ್ಟ್..! 

ಈ ಬಾರಿಯ ಭೇಟಿ ಭರ್ಜರಿ ಥ್ರಿಲ್ಲಿಂಗ್ ಮತ್ತು ಸಖತ್ ಸಸ್ಪೆನ್ಸ್ ನೊಂದಿಗೆ ಶುರುವಾಗುತ್ತೆ. ದಕ್ಷಿಣ ಭಾರತದಲ್ಲಿ ಅವೆಷ್ಟೊ ಮನೆಗಳನ್ನು ಹಾಳು ಮಾಡಿದ್ದ ಖದೀಮರ ಮುಖವಾಡ ಕಳಚುತ್ತಿದ್ದೀವಿ ಈವತ್ತಿನ ಎಪಿಸೋಡ್ನಲ್ಲಿ. ಇದು ಆರಂಭವಾಗುವುದು ನಮಗೆ ಬಂದ ಒಂದು ಫೋನ್ ಕಾಲಿಂದ.
ಎಂಟು ಲಕ್ಷಕ್ಕೆ ನಾಲ್ಕು ಕೆ ಜಿ ಚಿನ್ನ ಯಾರಾದ್ರೂ ಕೊಡ್ತಾರ. ನಮಗೆ ಇಂತಹ ದೊಂದು ಅನುಮಾನ ಕಾಡಿತ್ತು. ಮತ್ತೊಂದು ಕಡೆ ಅವರು ಫೋನ್ ಮೇಲೆ ಫೋನ್ ಮಾಡ್ತಾ ಇದ್ರು. ನಾವೆಲ್ಲ ಸಂಗತಿಯ ನ್ನ ಕಲೆ ಹಾಕಿದ್ದಾಗ. ನಮಗೆ ಆಶ್ಚರ್ಯ ಹುಟ್ಟಿಸುವಂತಹ ಸಂಗತಿ ಬಯಲಿಗೆ ಬಂತು. ಯಾಕಂದ್ರೆ ನಮಗೆ ಫೋನ್ ಮಾಡಿದವರು ಅಮಾಯಕರಲ್ಲ. ನಾವು ಸ್ಯಾಂಪಲ್‌ನನ್ನು ತೆಗೆದುಕೊಂಡು ಬಂದ ನಂತರ ಅವರು ಪದೇ ಪದೇ ಫೋನ್ ಮಾಡ್ತಾ ಇದ್ರು. ಬೇಗ ಬಂದು ಬಿಡಿ ವ್ಯವಹಾರ ಮಾಡಿ ಬಿಡೋಣ ಅಂತ ಒತ್ತಾಯ ಮಾಡ್ತಾ ಇದ್ರು. ಆ ಹಂತದಲ್ಲಿ ನಾವು ಕೊಟ್ಟ ಮಾಹಿತಿಯ ಮೇರೆಗೆ ಈ ಆಪರೇಷನ್ ಗೆ ಎಂಟ್ರಿ ಕೊಟ್ಟ ವರು ಕೊಟ್ಟೂರು ಪೊಲೀಸ್ ಸ್ಟೇಷನ್‌ನ ಇನ್ಸ್‌ಪೆಕ್ಟರ್ ರವೀಂದ್ರ ಕುರುಬಗಟ್ಟಿ. ಉಜೇನಿ ಬಳಿ ನಮ್ಮನ್ನ ಕರೆದರು. ಅವರು ತಕ್ಷಣ ನಮ್ಮ ಮುಂದೆ ಬರಲಿಲ್ಲ. ಅಲ್ಲೂ ಕೂಡ ಅರ್ಧ ಕಂಟಿ ಮಾಡಿಸಿದರು. ಹೀಗೆ ವೈಟ್ ಮಾಡಿಸೋಕೆ ಕಾರಣವೂ ಇತ್ತು. ಮೊದಲು ನಾವು ಎಷ್ಟು ಜನ ಬಂದಿದ್ದೇವೆ ಅನ್ನೋದನ್ನ ಅವರು ಕನ್ಫರ್ಮ್ ಮಾಡಿ ಕೊಳ್ತಾರೆ. ಆಮೇಲೆ ಅವರು ನಮ್ಮ ಮುಂದೆ ಫೀಲ್ಡ್ಗೆ ಇಳಿಯುತ್ತಾರೆ. ಇವರ ಒಂದೊಂದು ಹೆಜ್ಜೆಯಲ್ಲೂ ನಿಗೂಢತೆ ಇತ್ತು. ಇಂತವರನ್ನ ಅಷ್ಟು ಸಲೀಸಾಗಿ ಹಿಡಿಯುವುದು ಸಾಧ್ಯವಿಲ್ಲ. ಆಂಧ್ರದ ಪೊಲೀಸರನ್ನು ಕೂಡ ಒದ್ದು ಓಡಿಸಿದ ಜನರಿವರು ಅಂಥವರು ನಮ್ಮ ಮುಂದೆ ಬಂದರು. ನಾವು ಕೂಡ ಅಲ್ಲಲ್ಲಿ ಒಬ್ಬರನ್ನ ಬಿಟ್ಟು ಅವರ ಭೇಟಿಗೆ ಕಾಯುತ್ತಿದ್ದು ಮೊದಲು ನಮ್ಮ ಮುಂದೆ ಬಂದದ್ದು ಆ ತಾತಪ್ಪ. 

ಇದನ್ನೂ ವೀಕ್ಷಿಸಿ:  Raichur Murder: ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

Video Top Stories