10 ತಿಂಗಳು.. 3 ಗ್ಯಾಂಗ್‌ ವಾರ್.. 2‌ ಶೂಟೌಟ್‌..! ಎಲೆಕ್ಷನ್​ ಟಿಕೆಟ್​​ಗಾಗಿ ಶುರುವಾದ ಗ್ಯಾಂಗ್​​ ವಾರ್​​ 2 ಹೆಣ ಬೀಳಿಸಿತು..!

ರಜೀನ್‌ ಅದೊಂದು ಕೆಲಸ ಮಾಡದೆ ಹೋಗಿದ್ರೆ ಇವತ್ತು ಬೀದಿ ಹೆಣವಾಗ್ತಾ ಇರಲಿಲ್ಲ. ಆದ್ರೆ ಗುರು ಹೈದರ್‌ ಹತ್ಯೆಯ ಪ್ರತಿಕಾರಕ್ಕೆ ಸದಾ ಹಂಬಲಿಸುತ್ತಿದ್ದ ರಜೀನ್‌ ರಮ್ಜಾನ್‌ ಪವಿತ್ರ ದಿನದಂದು ಅದೊಂದು ಮಾಡಬಾರದ ಕೆಲಸಕ್ಕೆ ಕೈಹಾಕಿದ್ದ. ಪರಿಣಾಮ ಜುಮ್ಮಾ ಮಸೀದಿ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. 

First Published Apr 17, 2024, 1:15 PM IST | Last Updated Apr 17, 2024, 1:15 PM IST

ವಿಜಯಪುರ(ಏ.17):  ಭೀಮಾತೀರದ ಹಂತಕರಿಂದಲೇ ಕುಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲಿ ಎಲ್ಲವು ತಣ್ಣಗಾಯ್ತು ಅನ್ನೋವಾಗಲೇ ನಗರದಲ್ಲೇ ಹಾಡುಹಗಲೇ ನೆತ್ತರು ಹರಿಯುತ್ತಿದೆ. ಇನ್ನೂ ಗಾಭರಿ ಪಡೋ ವಿಚಾರ ಅಂದ್ರೆ ಕಳೆದ ವಿಧಾನಸಭಾ ಎಲೆಕ್ಷನ್‌ ನಲ್ಲಿ ಶುರುವಾಗಿದ್ದ ಎರಡು ಗ್ಯಾಂಗ್‌ಗಳ ನಡುವಿನ ಮರ್ಡರ್‌ ವಾರ್‌ ಈಗ ಲೋಕಸಭಾ ಎಲೆಕ್ಷನ್‌ ಹೊತ್ತಲ್ಲೂ ನೆಲಕ್ಕೆ ನೆತ್ತರು ಅಂಟುವಂತೆ ಮಾಡಿದೆ. ಶಾಕಿಂಗ್‌ ವಿಚಾರ ಅಂದ್ರೆ ಎಲೆಕ್ಷನ್‌ ಹೊತ್ತಲ್ಲೆ ಬೀದಿಯಲ್ಲಿ ಹೆಣಗಳು ಬೀಳ್ತಿದ್ರೆ ಪೊಲೀಸರು ಮುಖ ಪ್ರೇಕ್ಷಕರಾಗಿದ್ದಾರೆ. ಹೀಗೆ ಗುಮ್ಮಟನಗರದಲ್ಲಿ ಶುರುವಾಗಿರೋ ಎರಡು ಗ್ಯಾಂಗ್‌ಗಳ ನಡುವಿನ ವಾರ್ಗಳ ಕಥೆ ಮತ್ತು ಬಿದ್ದಿರೋ ಹೆಣಗಳ ಲೆಕ್ಕವನ್ನ ಕೊಡೋದೇ ಇವತ್ತಿನ ಎಫ್.ಐ.ಆರ್. 

ಶೇಖ್‌ ಮೋದಿ ಮತ್ತು ಹೈದರ್‌ ಗ್ಯಾಂಗ್‌ ಗಳ ನಡುವಿನ ಕೋಲ್ಡ್‌ ವಾರ್‌ ಗೆ ಈಗ ಮತ್ತೊಂದು ಹೆಣ ಬಿದ್ದಿದೆ. ಅಷ್ಟಕ್ಕು ರಜೀನ್‌ ಜಮಾದಾರ್‌ ಮೇಲೆ ಅಟ್ಯಾಕ್‌ ನಡೆದಿದ್ದೇಕೆ.? ಇದರ ಹಿಂದಿನ ಕಾರಣ ಕೇಳಿದ್ರೆ ನೀವು ಶಾಕ್‌ ಆಗ್ತೀರ. ಯಾಕಂದ್ರೆ ಇದು ಏಕಾಏಕಿ ನಡೆದ ಅಟ್ಯಾಕ್‌ ಅಲ್ಲವೇ ಅಲ್ಲ. 

ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪ್ಪ: ಮಕ್ಕಳನ್ನ ಕೊಂದು ಪೊಲೀಸರಿಗೆ ತಾಯಿಯೇ ಕಾಲ್​ ಮಾಡಿದ್ಲು..!

ರಜೀನ್‌ ಅದೊಂದು ಕೆಲಸ ಮಾಡದೆ ಹೋಗಿದ್ರೆ ಇವತ್ತು ಬೀದಿ ಹೆಣವಾಗ್ತಾ ಇರಲಿಲ್ಲ. ಆದ್ರೆ ಗುರು ಹೈದರ್‌ ಹತ್ಯೆಯ ಪ್ರತಿಕಾರಕ್ಕೆ ಸದಾ ಹಂಬಲಿಸುತ್ತಿದ್ದ ರಜೀನ್‌ ರಮ್ಜಾನ್‌ ಪವಿತ್ರ ದಿನದಂದು ಅದೊಂದು ಮಾಡಬಾರದ ಕೆಲಸಕ್ಕೆ ಕೈಹಾಕಿದ್ದ. ಪರಿಣಾಮ ಜುಮ್ಮಾ ಮಸೀದಿ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿ ಹೋದ.

ವಿಜಯಪುರ ನಗರದಲ್ಲು ಈ ಹಿಂದೆ ಎರಡು ಗ್ಯಾಂಗ್‌ ಗಳಿದ್ವು. ಹೊಡೆದಾಡಿ ಬಡೆದಾಡಿ ಗ್ಯಾಂಗ್‌ ಲೀಡರ್‌ ಗಳೇ ಹೆಣವಾದ ಬಳಿಕ 2017 ರಿಂದ ಈಚೆಗೆ ವಿಜಯಪುರ ನಗರದಲ್ಲಿ ಶಾಂತಿ ನೆಲೆಸಿತ್ತು. ಆದ್ರೀಗ ಶೇಖ್‌ ಮೋದಿ ಆಂಡ್‌ ಹೈದರ್‌ ನದಾಫ್‌ ಗ್ಯಾಂಗ್‌ ಗಳು ಪುಲ್‌ ಪ್ಲೆಡ್ಜ್‌ ಆಗಿ ಈಗ ಪೀಲ್ಡ್ಗೆ ಇಳಿದಿರೋದು ಅಲ್ಲಿನ ಜನ ಆತಂಕ ಪಡುವಂತಾಗಿದೆ.. ಆದಷ್ಟು ಬೇಗ ಪೊಲೀಸರು ಈ ಎರಡೂ ಗ್ಯಾಂಗ್ಗಳಿಗೆ ಡ್ರಿಲ್ ಮಾಡಬೇಕಾಗಿದೆ.. ಇಲ್ದೆ ಹೋದ್ರೆ ಮತ್ತೊಂದು ಭೀಮಾತೀರ ನಗರದಲ್ಲೆ ಹುಟ್ಟಿಕೊಳ್ಳೊದ್ರಲ್ಲಿ ಅನುಮಾನವೇ ಇಲ್ಲ.